"ನನ್ನ 7 ವರ್ಷ ನಾಶವಾಯಿತು" ಎಂದು ಪಿಎಸ್ ಐ ವಿರುದ್ಧ ಧರಣಿ ಕುಳಿತ ನೌಕರ
ಮೈಸೂರು, ಮಾರ್ಚ್ 5: ಕಲ್ಪನಾತೀತ ಸುಳ್ಳು ಘಟನೆಗಳ ಪ್ರಕರಣವನ್ನು ದಾಖಲಿಸಿ ನನ್ನ ಜೀವನದ ಅಮೂಲ್ಯ 7 ವರ್ಷಗಳನ್ನು ನಾಶ ಮಾಡಿರುವ ಪಿಎಸ್ ಐ ಶೋಭ ಅವರ ವಿರುದ್ಧ ತನಿಖೆ ನಡೆಸಿ ಪೊಲೀಸ್ ಸೇವೆಯಿಂದ ವಜಾಗೊಳಿಸುವಂತೆ ಒತ್ತಾಯಿಸಿ ಖಾಸಗಿ ಕಂಪನಿಯ ನೌಕರರಾದ ರವಿ.ಎಸ್. ಎಂಬುವರು ಏಕಾಂಗಿ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಎದುರು ಇಂದು ಪ್ರತಿಭಟನೆ ನಡೆಸಿದ ಅವರು, ಪಿಎಸ್ ಐ ಶೋಭಾ ಅವರು ನನ್ನ ವಿರುದ್ಧ ಷಡ್ಯಂತ್ರ ರಚಿಸಿ ಎರಡು ಕಲ್ಪನಾತೀತ ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದಾರೆ. ಇದರಿಂದ ನನ್ನ ಏಳು ವರ್ಷದ ಜೀವನವನ್ನು ಹಾಳು ಮಾಡಿದ್ದು, ಅವರನ್ನು ಸೇವೆಯಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.

ನಾನು ಮೈಸೂರು ನಿವಾಸಿಯಾದರೂ ಬೆಂಗಳೂರಿನಲ್ಲಿ ನನ್ನ ವಿರುದ್ಧ ಅತ್ಯಂತ ಕೆಟ್ಟ ಕೇಸುಗಳನ್ನು ಹಾಕಿದ್ದಾರೆ. ಈ ಕುರಿತು ನ್ಯಾಯಾಲಯದಲ್ಲಿ ನನ್ನ ವಿರುದ್ಧ ಸುಳ್ಳು ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ. ಇದರಿಂದ ನನಗೆ ತೊಂದರೆಯಾಗಿದೆ. ಈ ವಿಷಯವಾಗಿ ಬೆಂಗಳೂರು ಪೊಲೀಸ್ ಆಯುಕ್ತರು ಕೇವಲ ಒಂದು ಅಂಶವನ್ನು ತನಿಖೆ ನಡೆಸಿದ್ದಾರೆ. ಆ ಅಂಶದಲ್ಲಿ ಶೋಭಾ ಅವರ ಕರ್ತವ್ಯ ನಿರ್ಲಕ್ಷ್ಯತನ ಎದ್ದು ಕಾಣುತ್ತಿದೆ. ಈ ಕುರಿತು ಶೋಭಾ ಅವರ ವಿರುದ್ಧ ಕ್ರಮ ತೆಗೆದುಕೊಂಡಿದ್ದಾರಾದರೂ ಉಳಿದ ವಿಷಯಗಳ ಕುರಿತು ತನಿಖೆ ನಡೆಸಿಲ್ಲ. ಎಲ್ಲಾ ಅಂಶಗಳನ್ನು ತನಿಖೆ ಮಾಡಿ ಅವರನ್ನು ಪೊಲೀಸ್ ಸೇವೆಯಿಂದ ವಜಾಗೊಳಿಸಿ ಎಂದು ಆಗ್ರಹಿಸಿದರು.












Click it and Unblock the Notifications