ಮೈಸೂರಿಗೆ ಮೆರಗು ತಂದ ಪಾರಂಪರಿಕ ಕಟ್ಟಡಗಳು..ರಕ್ಷಣೆಯೇ ದೊಡ್ಡ ಸವಾಲ್!
ಮೈಸೂರು, ಏಪ್ರಿಲ್ 19: ಮೈಸೂರು ನಗರಕ್ಕೆ ಪಾರಂಪರಿಕ ಕಟ್ಟಡಗಳು ಮೆರುಗು ತಂದಿದ್ದು, ನಗರದಲ್ಲಿರುವ ವಿಭಿನ್ನ ವಾಸ್ತುಶಿಲ್ಪದ ಅರಮನೆಗಳು, ಸರ್ಕಾರಿ ಕಟ್ಟಡಗಳು ಎಲ್ಲವೂ ಮೈಸೂರಿನ ಪರಂಪರೆಯನ್ನು ಸಾರಲು ನಿಂತಿದೆ ಎಂಬಂತೆ ಗೋಚರಿಸುತ್ತಿದ್ದು, ಇವುಗಳು ಇಲ್ಲಿನ ಸುಂದರತೆಯನ್ನು ಇಮ್ಮಡಿಗೊಳಿಸುತ್ತಿದ್ದು, ದೂರದಿಂದ ಆಗಮಿಸುವ ಪ್ರವಾಸಿಗರನ್ನು ವಿಸ್ಮಯಗೊಳಿಸುವ ಮೂಲಕ ತನ್ನತ್ತ ಸೆಳೆಯುವಂತೆ ಮಾಡುತ್ತಿವೆ.
ಮಹಾರಾಜರು ನಿರ್ಮಿಸಿದ ಅರಮನೆಗಳು ಮತ್ತು ಕಟ್ಟಡಗಳು ಒಂದೆಡೆಯಾದರೆ ಹಿಂದಿನ ಕಾಲದಲ್ಲಿ ನಿರ್ಮಾಣವಾದ ಮದ್ರಾಸ್ ತಾರಸಿಯ ಮನೆಗಳು ಅಲ್ಲಲ್ಲಿ ಕಾಣಸಿಗುವುದರೊಂದಿಗೆ ಗಮನಸೆಳೆಯುತ್ತಿವೆ. ಇತ್ತೀಚೆಗಿನ ವರ್ಷಗಳಲ್ಲಿ ಮೈಸೂರು ನಗರ ವೇಗವಾಗಿ ಬೆಳೆಯುತ್ತಿದ್ದು, ಹಂಚಿನ ಮನೆಗಳು ಮಾಯವಾಗುತ್ತಿವೆ. ಕಾಂಕ್ರಿಟ್ ಮನೆಗಳು ನಿರ್ಮಾಣವಾಗುತ್ತಿದ್ದರೂ ಇವುಗಳ ನಡುವೆ ಕೆಲವು ಹಳೆಯ ಕಾಲದ ಮನೆಗಳು ಆಕರ್ಷಿಸುತ್ತಿರುವುದನ್ನು ನಾವು ಕಾಣಬಹುದಾಗಿದೆ.

ಇತ್ತೀಚೆಗಿನ ವರ್ಷಗಳಲ್ಲಿ ಹೊಲಗದ್ದೆಗಳು ಮಾಯವಾಗಿ ಅಲ್ಲಿ ಖಾಸಗಿ ಬಡಾವಣೆಗಳು ತಲೆ ಎತ್ತುತ್ತಿವೆ. ಈ ಬಡಾವಣೆಗಳು ಮೈಸೂರು ನಗರವನ್ನು ವಿಸ್ತರಿಸುತ್ತಾ ಹೋಗುವಂತೆ ಮಾಡುತ್ತಿವೆ. ಸುತ್ತಮುತ್ತಲಿನ ಜಿಲ್ಲೆಯ ಜನರು ಮೈಸೂರಿನಲ್ಲೊಂದು ಮನೆಯಿರಲಿ ಎಂದು ಬಯಸುತ್ತಿದ್ದು, ಹೀಗಾಗಿ ಮನೆ ನಿರ್ಮಾಣ ಮಾಡಿ ಸಮಯ ಸಿಕ್ಕಾಗ ಬಂದು ಒಂದೆರಡು ದಿನವಿದ್ದು ಹೋಗುವವರು ಇಲ್ಲದಿಲ್ಲ. ಬೆಂಗಳೂರು ಮತ್ತು ಮೈಸೂರು ನಡುವೆ ಎಕ್ಸ್ ಪ್ರೆಸ್ ವೇ ಆದ ಬಳಿಕ ಇಲ್ಲಿ ಸೈಟ್ ಗಳಿಗೂ ಬೇಡಿಕೆ ಹೆಚ್ಚುತ್ತಿದೆ. ಮನೆಗಳು ಹೆಚ್ಚಾಗುತ್ತಿವೆ. ಸೈಟ್ ಖರೀದಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ.
600ಕ್ಕೂ ಹೆಚ್ಚು ಪಾರಂಪರಿಕ ಕಟ್ಟಡಗಳಿವೆ
ಈಗೀಗ ಮನೆ ಕಟ್ಟುವವರು ಹೊಸ ವಿನ್ಯಾಸಗಳಲ್ಲಿ ಮನೆ ಕಟ್ಟುತ್ತಿರುವುದು ಗಮನಾರ್ಹವಾಗಿದೆ. ಇದೆಲ್ಲದರ ನಡುವೆ ಹಿಂದಿನ ಕಾಲದ ಮನೆಗಳು ಅಲ್ಲೊಂದು ಇಲ್ಲೊಂದು ಕಾಣಿಸುತ್ತಿದ್ದು ಅವು ಆ ದಿನಗಳ ವೈಭವಕ್ಕೆ ಸಾಕ್ಷಿಯಾಗಿವೆ. ಬಹುತೇಕ ಮನೆಗಳನ್ನು ನೆಲಸಮ ಮಾಡಿ ಇವತ್ತಿಗೆ ಅನುಕೂಲವಾಗುವಂತೆ ಕಟ್ಟಲಾಗಿದೆ. ಹೊಸತನಕ್ಕೆ ತೆರೆದುಕೊಳ್ಳುವುದು ಮಾನವನ ಸಹಜಗುಣವೂ ಹೌದು ಹಾಗೆಯೇ ಅನಿವಾರ್ಯವಾಗಿದೆ.
ಇದೆಲ್ಲದರ ನಡುವೆ ಮೈಸೂರು ನಗರಕ್ಕೆ ಆಗಮಿಸುವ ಪ್ರವಾಸಿಗರು ಇಲ್ಲಿನ ಅರಮನೆಗಳ ಜೊತೆ ಜತೆಗೆ ಕಾಣಸಿಗುವ ಸುಂದರ ಕಟ್ಟಡಗಳನ್ನು ನೋಡಿ ಅಚ್ಚರಿ ಪಡುತ್ತಾರೆ. ಇಲ್ಲಿರುವ ಕಟ್ಟಡಗಳಿಗೆ ತನ್ನದೇ ಆದ ಇತಿಹಾಸ, ಪ್ರಾಮುಖ್ಯತೆ ಹಾಗೂ ವಾಸ್ತುಶಿಲ್ಪ ಶೈಲಿಯಿದ್ದು, ಇವುಗಳನ್ನು ಅವತ್ತು ಕಟ್ಟಲಾದ ಉದ್ದೇಶ, ಇವತ್ತು ಅವುಗಳ ಉಪಯೋಗ ಎಲ್ಲವೂ ಅಚ್ಚರಿ ಮೂಡಿಸುತ್ತಿವೆ.

ಮೈಸೂರು ನಗರದಲ್ಲಿ 600ಕ್ಕೂ ಹೆಚ್ಚು ಕಟ್ಟಡಗಳನ್ನು ಪಾರಂಪರಿಕ ಕಟ್ಟಡಗಳೆಂದು ಗುರುತಿಸಲಾಗಿತ್ತು. ಈ ಪೈಕಿ ಕೆಲ ಕಟ್ಟಡಗಳು ಈಗಾಗಲೇ ಹಾಳಾಗಿವೆ. ನೂರು ವರ್ಷ ತುಂಬಿರುವ 100ಕ್ಕೂ ಹೆಚ್ಚು ಕಟ್ಟಡಗಳು ಇಲ್ಲಿವೆ. ಇವುಗಳೆಲ್ಲವನ್ನು ವರ್ಷದಿಂದ ವರ್ಷಕ್ಕೆ ಕಾಪಾಡಿಕೊಂಡು ಬರುವುದು ಸವಾಲ್ ಆಗುತ್ತಿದೆ. ಈಗಾಗಲೇ ಹಲವು ಕಟ್ಟಡಗಳು ಕುಸಿದು ಬಿದ್ದಿದ್ದರೆ, ಮತ್ತೆ ಕೆಲವು ಕಟ್ಟಡಗಳು ಪಾಳು ಬಿದ್ದಿವೆ. ಅವುಗಳು ಶಿಥಿಲಾವಸ್ಥೆಯಲ್ಲಿದ್ದು ಯಾವಾಗ ಬೇಕಾದರೂ ಕುಸಿಯುವ ಸ್ಥಿತಿಗೆ ತಲುಪಿವೆ. ಹೀಗಾಗಿ ಮಳೆಗಾಲ ಆರಂಭವಾದಾಗಲೆಲ್ಲ ಕುಸಿಯುವ ಭಯ ಜನರನ್ನು ಕಾಡುತ್ತಿವೆ.
ಸಾಮಾನ್ಯವಾಗಿ ಮಳೆ ಗಾಳಿ ಬಂದರೆ ನಗರದಲ್ಲಿ ಮರಗಳು ಮುರಿದು ಬೀಳುವುದು ಇದ್ದದ್ದೇ.. ಆದರೆ ಈಗ ಅಲ್ಲಲ್ಲಿ ಕಟ್ಟಡ ಕುಸಿದು ಬೀಳುವ ಘಟನೆಗಳು ನಡೆಯುತ್ತಿರುವುದು ಭಯವನ್ನುಂಟು ಮಾಡಿದೆ. ಮಳೆಗಾಳಿಗೆ ಕಳೆದ ಒಂದು ದಶಕದ ಅವಧಿಯಲ್ಲಿ ಸುಮಾರು ಆರಕ್ಕೂ ಹೆಚ್ಚು ಕಟ್ಟಡಗಳ ಕೆಲ ಭಾಗಗಳು ಕುಸಿದು ಬಿದ್ದಿದ್ದು, ಇನ್ನು ಹಲವು ಕಟ್ಟಡಗಳ ಭಾಗಗಳು ಯಾವಾಗ ಬೇಕಾದರೂ ಕುಸಿದು ಬೀಳಬಹುದು ಎಂಬ ದುಸ್ಥಿತಿಯಲ್ಲಿರುವುದನ್ನು ನಾವು ಕಾಣಬಹುದಾಗಿದೆ.
ಮಳೆಗಾಲ ಸಮೀಪಿಸುತ್ತಿರುವುದರಿಂದ ಎಚ್ಚರಿಕೆ ಅಗತ್ಯ
ನಗರದ ಹೃದಯಭಾಗದಲ್ಲಿದ್ದ ಲ್ಯಾನ್ಸ್ ಡೌನ್ ಕಟ್ಟಡದ ಭಾಗ ಕುಸಿದು ಬಿದ್ದು ದಶಕಗಳೇ ಕಳೆದು ಹೋಗಿವೆ ಈ ಕಟ್ಟಡ ವಿಚಾರದಲ್ಲಿ ತಾರ್ಕಿಕ ಅಂತ್ಯಕ್ಕೆ ಬಂದಂತೆ ಕಾಣುತ್ತಿಲ್ಲ. ಈಗ ಅದು ಭೂತಬಂಗಲೆಯಂತೆ ನಿಂತಿದ್ದು ಯಾವಾಗ ಕುಸಿದು ಬೀಳುತ್ತದೆಯೋ ಎಂಬ ಭಯದಲ್ಲಿಯೇ ಸುತ್ತಮುತ್ತಲಿನ ವ್ಯಾಪಾರಿಗಳು ವ್ಯಾಪಾರ ಮಾಡುವಂತಾಗಿದೆ. ಈ ಕಟ್ಟಡದ ಒಂದು ಭಾಗ 2012 ರಲ್ಲಿ ಕುಸಿದು ಬಿದ್ದಿದ್ದನ್ನು ನೆನಪಿಸಿಕೊಳ್ಳಬಹುದಾಗಿದೆ.

2016ರಲ್ಲಿ ದೇವರಾಜ ಮಾರುಕಟ್ಟೆ ಕಟ್ಟಡದ ಒಂದು ಭಾಗ ಕುಸಿದು ಬಿದ್ದಿತ್ತು. ದೇವರಾಜ ಮಾರುಕಟ್ಟೆ ವಿಚಾರದಲ್ಲಿಯೂ ಬೇಕು ಬೇಡಗಳ ವಿರೋಧಗಳು ವ್ಯಕ್ತವಾಗುತ್ತಿವೆ. ಕಟ್ಟಡ ಭದ್ರವಾಗಿದ್ದು ಅದನ್ನು ಮೂಲ ಹೇಗಿದೆಯೋ ಹಾಗೆಯೇ ಅಭಿವೃದ್ಧಿಗೊಳಿಸುವಂತೆ ಒತ್ತಾಯಗಳು ಕೇಳಿ ಬರುತ್ತಿದೆ. ಈಗಲೂ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟುಗಳು ನಡೆಯುತ್ತಿದ್ದು, ಕಟ್ಟಡದ ಕೆಲವು ಭಾಗಗಳನ್ನು ತೆರವುಗೊಳಿಸಿದ್ದರೆ ಮತ್ತೆ ಕೆಲವು ಕಡೆಯಲ್ಲಿ ಶಿಥಿಲಾವಸ್ಥೆಯಲ್ಲಿರುವುದು ಕಂಡು ಬರುತ್ತದೆ.
2019ರಲ್ಲಿ ಅಗ್ನಿಶಾಮಕ ಠಾಣೆಯ ಕಟ್ಟಡದ ಸ್ವಾಗತ ಕಮಾನು ಕುಸಿದು ಬಿದ್ದಿತು. 2021ರ ನವೆಂಬರ್ ನಲ್ಲಿ ಮಾನಸಗಂಗೋತ್ರಿಯ ಜಯಲಕ್ಷ್ಮೀ ವಿಲಾಸ ಅರಮನೆ ಚಾವಣಿ ಕುಸಿದಿತ್ತು. ಆ ನಂತರ ಕೆ.ಆರ್. ಆಸ್ಪತ್ರೆಯ ಕಟ್ಟಡದ ಒಂದು ಭಾಗ ಶಿಥಿಲಗೊಂಡು ಹಾನಿಯಾಗಿತ್ತು. ದೊಡ್ಡ ಗಡಿಯಾರ ಶಿಥಿಲಾವಸ್ಥೆಗೆ ತಲುಪಿತ್ತಾದರೂ ದುರಸ್ತಿ ಮಾಡಲಾಗಿದೆ.
ವಾಣಿ ವಿಲಾಸ ಕಟ್ಟಡವೂ ಶಿಥಿಲಾವಸ್ಥೆಗೆ ತಲುಪಿದ್ದು, ವಿವಿ ಮಾರುಕಟ್ಟೆ ಈಗಾಗಲೇ ಕುಸಿದು ಬಿದ್ದು ಭಯ ಹುಟ್ಟಿಸಿದೆ. ಇದೆಲ್ಲದರ ನಡುವೆ ಸಂಸ್ಥೆಗಳಿಗೆ, ಖಾಸಗಿಯವರಿಗೆ ಸೇರಿದ ಹಳೆಯ ಕಾಲದ ಹಲವು ಕಟ್ಟಡಗಳಿದ್ದು, ಅವುಗಳ ಪೈಕಿ ಕೆಲವು ಶಿಥಿಲಾವಸ್ಥೆಯಲ್ಲಿದ್ದು, ಅವುಗಳ ನಿರ್ವಹಣೆ ಮಾಡಲಾಗದ ಸ್ಥಿತಿಯಲ್ಲಿ ಬಹಳಷ್ಟು ಜನರಿದ್ದಾರೆ. ಇದರಾಚೆಗೆ ಹಳೆಯ ಕಾಲದ ಮಣ್ಣಿನ ಗೋಡೆಗಳ ಮನೆಗಳಲ್ಲಿ ವಾಸ ಮಾಡುವವರು ಹಲವರಿದ್ದು ಅವರೆಲ್ಲರೂ ಮುಂಗಾರು ಆಗಮದ ಸಮಯದಲ್ಲಿ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.
-
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
Nora Fatehi: ಕನ್ನಡ ಹಾಡಿನಿಂದ ವಿವಾದಕ್ಕೆ ಸಿಲುಕಿರುವ ಬಾಲಿವುಡ್ನ ಡ್ಯಾನ್ಸ್ ಕ್ವೀನ್ ನೋರಾ ಫತೇಹಿ ಅಸಲಿ ಕಥೆ ಇದು -
March 18 Horoscope: ಧನ, ಆರೋಗ್ಯ, ಉದ್ಯೋಗದ ಭವಿಷ್ಯ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Bengaluru Rent: ಬೆಂಗಳೂರಲ್ಲಿ ನಾನ್ವೆಜ್ ಪ್ರಿಯರಿಗೆ ಶಾಕ್: ಮಾಂಸಾಹಾರಿಗಳಿಗೆ ಸಿಗ್ತಿಲ್ಲ ನಗರದಲ್ಲಿ ಬಾಡಿಗೆ ಮನೆ -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್












Click it and Unblock the Notifications