ಪ್ರತಾಪ್ ಸಿಂಹ ಗೆಲುವು ಕಟ್ಟಿಟ್ಟ ಬುತ್ತಿ: ಜಗ್ಗೇಶ್

ಮೈಸೂರು, ಏ.15: ಲೋಕಸಭಾ ಯುದ್ಧದಲ್ಲಿ ಪ್ರಥಮ ಬಾರಿಗೆ ಸ್ಪರ್ಧಿಸಿರುವ ಪ್ರತಾಪ್ ಸಿಂಹ ಅವರು ಮೊದಲ ಪ್ರಯತ್ನದಲ್ಲೇ ಜಯಭೇರಿ ಬಾರಿಸಲಿದ್ದಾರೆ. ಎಲ್ಲೆಡೆ ಮೋದಿ ಅಲೆ ಇದ್ದು, ಜನ ಯುವಕರನ್ನು ಬೆಂಬಲಿಸಬೇಕಿದೆ ಎಂದು ನವರಸನಾಯಕ ಜಗ್ಗೇಶ್ ಅವರು ಹೇಳಿದ್ದಾರೆ. ಈ ಬಗ್ಗೆ ಜಗ್ಗೇಶ್ ಮಾಡಿರುವ ಟ್ವೀಟ್ ಇಲ್ಲಿದೆ.

ಜಗ್ಗೇಶ್ ಅವರು ಪ್ರತಾಪ್ ಸಿಂಹ ಪರ ಇಂದು ಮೈಸೂರಿನಲ್ಲಿ ಮತಯಾಚನೆ ಮಾಡಿದರು. ಜಗ್ಗೇಶ್ ಅವರು ತಮ್ಮ ಅಗ್ರಜ ಸಿನಿಮಾ ಬಿಡುಗಡೆ ಬಗ್ಗೆ ಮಾಹಿತಿಯನ್ನು ಟ್ವೀಟ್ ಮಾಡಿದ್ದಾರೆ. ದರ್ಶನ್ ತೂಗುದೀಪ್ ಕೂಡಾ ಅಗ್ರಜ ಚಿತ್ರದಲ್ಲಿ ನಟಿಸಿದ್ದಾರೆ. ಈವಾರ ಈ ಚಿತ್ರ ತೆರೆ ಕಾಣಲಿದೆ.

ಇದು ಪ್ರತಾಪ್ ಸಿಂಹ ಅವರು ಫೇಸ್ ಬುಕ್ ಪುಟದಲ್ಲಿ ಮತಹಾಕುವಂತೆ ಮಾಡಿಕೊಂಡಿರುವ ಮನವಿ : ಕರ್ನಾಟಕದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಬರಿ ರಾಜ್ಯ ಅಥವಾ ಕಾರ್ಪೋರೇಶನ್ ಮಟ್ಟದ ವಿಷಯಗಳನ್ನು ಹಿಡಿದುಕೊಂಡು ಮತ ಯಾಚಿಸುತ್ತಿದ್ದಾರೆ. ಕಸ, ಮೋರಿ, ಪೈಪ್, ಟಾರ್, ಪಾರ್ಕ್, ಫ್ಲೈ ಓವರ್.. ಇವೆಲ್ಲ ಕಾರ್ಪೊರೇಟರ್ ಕೆಲಸ. MPದಲ್ಲ. ಅನ್ನಭಾಗ್ಯ, ಕ್ಷೀರಭಾಗ್ಯ, ಸಾಲಮನ್ನ (ಬಹುತೇಕ) ಇವೆಲ್ಲ ರಾಜ್ಯ ಸರ್ಕಾರದ ಕೆಲಸ. ಇವಗಳನ್ನು ನೋಡಿ, ನೀವು MPಗಳನ್ನು ಚುನಾಯಿಸಬೇಡಿ.

Pratap Simha will win : Jaggesh

ಲೋಕಸಭಾ ಸದಸ್ಯರ ಕೆಲಸ ಕಾನೂನು ಮಾಡುವುದು. ರಾಜ್ಯಕ್ಕೆ ಅನುದಾನ ತರುವುದು. ದೆಹಲಿಯಲ್ಲಿ ಭ್ರಷ್ಟಾಚಾರ ತಡೆಯುವುದು. ಪಾಕಿಸ್ತಾನ ಮತ್ತು ಚೀನಗಳನ್ನು ಸರಿಯಾಗಿ ಎದುರಿಸುವುದು. ರಾಜ್ಯಕ್ಕೆ ಉದ್ಯೋಗ ಸೃಷ್ಟಿಸಲು ಅನುದಾನ ತರುವುದು. ವಿದೇಶದಲ್ಲಿ ಇರೋ ಕಪ್ಪು ಹಣ ವಾಪಸ್ ತರುವುದು. ಅಂತರ್-ರಾಜ್ಯ ನೀರು ಅಥವಾ ವಿದ್ಯುತ್ ವಿವಾದಗಳಲ್ಲಿ ಕರ್ನಾಟಕದ ಪರ ಮಾತಾಡುವುದು.

ಇನ್ನು ಬೇಕಾಷ್ಟು ಇವೆ. ಇವುಗಳನ್ನೆಲ್ಲ ಮಾಡಲು ಸಮರ್ಥ ಮೋದಿ ನೇತೃತ್ವದಲ್ಲಿ ಯಡಿಯೂರಪ್ಪ, ಅನಂತ್ ಕುಮಾರ್ ಹೆಗ್ಡೆ ನಳಿನ್ ಕುಮಾರ್ ಕಟೀಲ್, ಅನಂತ್ ಕುಮಾರ್, ಶ್ರೀರಾಮುಲು, ಪ್ರತಾಪ್ ಸಿಂಹ, ಜನಾರ್ದನ ಸ್ವಾಮಿ, ಸುರೇಶ ಅಂಗಡಿ, ಶೋಭಾ ಕರಂದ್ಲಾಜೆ ತರಹ MPಗಳು ಬೇಕು! ಹಳೆ ಕಥೆ ಬಿಡಿ.

ಮೋದಿ ನೇತೃತ್ವ ಎಲ್ಲವನ್ನು ಬದಲಾಯಿಸುತ್ತದೆ. ಹಿಂದೆ ಎನ್ದೊ ಆದ ಒಳ ಜಗಳ ಅಥವಾ ಭ್ರಷ್ಟಾಚಾರ, ಮೋದಿ ನೇತೃತ್ವದಲ್ಲಿ ಆಗಲು ಸಾಧ್ಯವಿಲ್ಲ. ಆದರಿಂದ ಒಮ್ಮೆ ಯೋಚಿಸಿ ನೋಡಿ. ನಿಮ್ಮ ಅಮೂಲ್ಯ ಮತವನ್ನು ಭಾಜಪಕ್ಕೆ ನೀಡಿ. ಕರ್ನಾಟಕದ ಭವಿಷ್ಯ ಬದಲಾಯಿಸಿ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+