ಅರಮನೆ ಎದುರು ಸಾಂಸ್ಕೃತಿಕ ಕಾರ್ಯಕ್ರಮ ಬೇಡ
ಮೈಸೂರು, 12 : ವಿಶ್ವ ವಿಖ್ಯಾತ ದಸರಾ ಈ ಬಾರಿ ವಿವಾದಗಳಿಂದಲೇ ಆರಂಭವಾಗಿದ್ದು ಹಾಗೇ ಮುಂದುವರಿದುಕೊಂಡು ಹೋಗುತ್ತಿದೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾಣಿ ಪ್ರಮೋದಾದೇವಿ ಈ ಬಾರಿ ಅರಮನೆ ಎದುರು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಬಾರದು ಎಂದು ಹೇಳಿದ್ದಾರೆ.(ಅರಮನೆ ಸಂಕಷ್ಟ ನೆನೆದು ಕಣ್ಣೀರಿಟ್ಟ ಮೈಸೂರು ರಾಣಿ)

ಶ್ರೀಕಂಠದತ್ತ ನರಸಿಂಹರಾಜ್ ಒಡೆಯರ್ ನಿಧನರಾಗಿ ಇನ್ನು ಒಂದು ವರ್ಷ ಕಳೆದಿಲ್ಲ. ಹಾಗಾಗಿ ಈ ಬಾರಿ ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಬಾರದು. ಇದು ಅಶುಭದ ಸಂಕೇತವಾಗುತ್ತದೆ ಎಂದು ಹೇಳಿದ್ದಾರೆ.(ಖಡ್ಗವಿಟ್ಟು ದಸರಾ ಖಾಸಗಿ ದರ್ಬಾರ್ ಆಚರಣೆ)
ಈ ಮೊದಲು ಕೂಡ ಪ್ರಮೋದಾದೇವಿ ಅರಮನೆ ಎದುರು ಆನೆಗಳ ಪೂಜೆ ಮಾಡದಂತೆ ತಡೆಯೊಡ್ಡಿದ್ದರು. ಇದಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರ ಅರಣ್ಯ ಇಲಾಖೆ ಕಚೇರಿ ಆವರಣದಲ್ಲೇ ಆನೆಗಳಿಗೆ ಪೂಜೆ ಮಾಡಿತ್ತು.











Click it and Unblock the Notifications