ಸಿಎಂ ಸಿದ್ದರಾಮಯ್ಯ ಪತ್ನಿ ಖರೀದಿಸಿರುವ ಜಮೀನಿನಲ್ಲಿ ನಮ್ಮ ಪಾಲಿದೆ: ಮೈಸೂರು ಜಿಲ್ಲಾಧಿಕಾರಿಗಳಿಗೆ ದೂರು

ಸಿಎಂ ಸಿದ್ದರಾಮಯ್ಯ ಅವರ ಪತ್ನಿಗೆ ಸಿಕ್ಕಿರುವ ಜಮೀನಿನಲ್ಲಿ ನಮ್ಮ ಪಾಲಿದೆ ಎಂದು ಮೂಲ ಮಾಲೀಕನ ಮೊಮ್ಮಕ್ಕಳು ಹಕ್ಕು ಪ್ರತಿಪಾದನೆ ಮಾಡಿದ್ದು, ಜಿಲ್ಲಾಧಿಕಾರಿಗಳಿಗೆ ದೂರು ದಾಖಲಿಸಿದ್ದಾರೆ.

"ನಮ್ಮ ತಾತ ಜವರ ಅವರ ಹೆಸರಿನಲ್ಲಿ ಜಮೀನು ಇದೆ ಎಂಬುದು ನಮಗೆ ಗೊತ್ತಿರಲಿಲ್ಲ. ಟಿವಿಯಲ್ಲಿ ನೋಡಿದಾಗಲೇ ಈ ವಿಚಾರ ತಿಳಿದು ಬಂತು. ಅದರಲ್ಲಿ ನಮಗೂ ಪಾಲು ಸಿಗಬೇಕಿದೆ" ಎಂದು ಸಿದ್ದರಾಮಯ್ಯನವರ ಭಾಮೈದ ಖರೀದಿ ಮಾಡಿದ್ದ ಜಮೀನಿನ ಮೂಲ ಮಾಲೀಕ ಜವರ ಅವರ ಮೊಮ್ಮಗ ಜವರಯ್ಯ ಎನ್ನುವವರು ಅಪರ ಜಿಲ್ಲಾಧಿಕಾರಿ ಶಿವರಾಜು ಅವರಿಗೆ ದೂರು ನೀಡಿದ್ದಾರೆ.

Original Owner s Grandkids Claim Ownership of CM Siddaramaiah s Wife s Land

ಜಮೀನಿನ ಮೂಲ ಮಾಲೀಕರಾದ ಜವರ ಅವರು ನಮ್ಮ ತಾತ. ಅವರಿಗೆ ಮಲ್ಲಯ್ಯ, ಮೈಲಾರಯ್ಯ ಮತ್ತು ದೇವರಾಜು ಎಂಬ ಮೂವರು ಮಕ್ಕಳಿದ್ದಾರೆ. ತಾತ ಜವರ ಹೆಸರಿನಲ್ಲಿದ್ದ ಜಮೀನನ್ನು ದೇವರಾಜು ತಮ್ಮ ಹೆಸರಿಗೆ ಮಾಡಿಕೊಂಡು ಮಾರಾಟ ಮಾಡಿದ್ದಾರೆ. ಈ ಬಗ್ಗೆ ನಮಗೆ ಮಾಹಿತಿಯೇ ಇರಲಿಲ್ಲ, ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇದೇ ವೇಳೆ ಜವರಯ್ಯ ಅವರ ಮನೆಗೆ ಬಿಜೆಪಿ ನಾಯಕ ಎನ್.ಮಹೇಶ ನೇತೃತ್ವದ ನಿಯೋಗಕ್ಕೆ ಭೇಟಿ ಮಾಡಿ ಮಾತುಕತೆ ನಡೆಸಿತು. ನಂತರ ಮಾತನಾಡಿದ ಮಹೇಶ್, ಸಿಎಂ ಸಿದ್ದರಾಮಯ್ಯ ಭಾಮೈದ ಮಲ್ಲಿಕಾರ್ಜುನ ಅವರು ಜವರಯ್ಯ ಮತ್ತು ಅವರ ಕುಟುಂಬದವರಿಗೆ ವಂಚನೆ ಮಾಡಿ ಜಮೀನು ಪಡೆದಿದ್ದಾರೆ ಎಂದು ಆರೋಪಿಸಿದರು.

ಜವರಯ್ಯ ಮತ್ತು ಎಂ.ಮಂಜುನಾಥ್ ಅವರೊಂದಿಗೆ ಶನಿವಾರ ಸಂಜೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು ಅವರನ್ನು ಭೇಟಿ ಮಾಡಿದ ಮಾಜಿ ಸಚಿವ ಎನ್.ಮಹೇಶ್ ನೇತೃತ್ವದ ಬಿಜೆಪಿ ನಿಯೋಗ, ದೂರು ನೀಡಿ ಎರಡು ಕುಟುಂಬದವರಿಗೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+