ಆಪರೇಷನ್ ಕಮಲ ಊಹಾಪೋಹವಷ್ಟೆ: ಕುಮಾರಸ್ವಾಮಿ
ಮೈಸೂರು, ಜನವರಿ 14: ಮೂವರು ಶಾಸಕರು ಮುಂಬೈಗೆ ಶೀಫ್ಟ್ ಆಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ಆ ರೀತಿಯ ಘಟನೆಗಳು ನಡೆದಿಲ್ಲ, ಅಲ್ಲಿಗೆ ಹೋಗಿರುವ ಶಾಸಕರೊಂದಿಗೆ ನಾನು ಮಾತನಾಡಿದ್ದೇನೆ ಅವರು ಬಿಜೆಪಿ ಸೇರಲು ಹೋಗಿಲ್ಲ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರು ಮುಂಬೈಗೆ ಹೋಗಿರುವುದು ಬಿಜೆಪಿ ಸೇರಲು ಅಲ್ಲ, ಅವರೊಂದಿಗೆ ನಾನು ಇಂದು ಬೆಳಿಗ್ಗೆ ಮಾತನಾಡಿದ್ದೇನೆ ಅವರು ಹೋಗಿರುವ ಉದ್ದೇಶ ಬೇರೆ ಎಂದು ಅವರು ಹೇಳಿದ್ದಾರೆ.
ನನಗೆ ಯಾವುದೇ ಆತಂಕವಿಲ್ಲ, ನಾನು ಆರಾಮಾಗಿದ್ದೇನೆ. ಸರ್ಕಾರ ಬೀಳೂವ ಹೆದರಿಕೆ ಇದ್ದಿದ್ದರೆ ಹೀಗೆ ಆರಾಮವಾಗಿ ಇರಲಿಕ್ಕೆ ಸಾಧ್ಯವಿತ್ತಾ? ಆಪರೇಷನ್ ಕಮಲ ಆಗುತ್ತದೆ ಸರ್ಕಾರ ಬೀಳುತ್ತದೆ ಎಂಬುದು ಊಹಾಪೋಹವಷ್ಟೆ ಎಂದು ಅವರು ಹೇಳಿದರು.

ಎಂಟ ಜನ ಶಾಸಕರು ಮುಂಬೈಗೆ ಹೋಗುತ್ತಿದ್ದಾರೆ. ಹಲವರು ಸಂಪರ್ಕದಲ್ಲಿದ್ದಾರೆ ಎಂದು ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳೆಲ್ಲಾ ಸುಳ್ಳು ಎಂದು ಹೇಳಿದ ಕುಮಾರಸ್ವಾಮಿ. ಆ ರೀತಿಯ ಯಾವುದೇ ಬೆಳವಣಿಗೆಗಳು ಆಗಿಲ್ಲ, ಸರ್ಕಾರ ಸುಭದ್ರವಾಗಿದೆ ಎಂದರು.
ಬಿಜೆಪಿಯ ಶಾಸಕರು ದೆಹಲಿಗೆ ಹೋಗಿರುವುದು ಕಾರ್ಯಕಾರಿಣಿಯಲ್ಲಿ ಭಾಗವಹಿಸಲು. ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಹೆಚ್ಚು ಸೀಟು ಗೆಲ್ಲಬೇಕು ಎಂಬ ಕಾರಣದಿಂದ ತಂತ್ರ ರೂಪಿಸಲು ಅವರು ಅಲ್ಲಿ ಸೇರಿದ್ದಾರೆ ಅಷ್ಟೆ ಅದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದು ಅವರು ಹೇಳಿದರು.












Click it and Unblock the Notifications