ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಾಯಂದಿರ ದಿನದಂದು 'ರಾಜಕುಮಾರ' ಸಿನಿಮಾ ವೀಕ್ಷಿಸಿದ ವೃದ್ಧೆಯರು

ತಾಯಿ ಹಾಗೂ ಮಕ್ಕಳ ಸಂಬಂಧ ಬೆಸೆಯುವ ಅಪರೂಪದ ಚಿತ್ರ ರಾಜಕುಮಾರ ಸಿನಿಮಾವನ್ನು ನೋಡುವ ಭಾಗ್ಯವನ್ನ ಮೈಸೂರಿನ ವೃದ್ದಾಶ್ರಮದಲ್ಲಿದ್ದ ತಾಯಂದಿರಿಗೆ ಪರಿವರ್ತನ ಟ್ರಸ್ಟ್ ವಿಶ್ವ ತಾಯಂದಿರ ದಿನದಂದು ಕಲ್ಪಿಸಿಕೊಟ್ಟಿತು.

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮೇ 14: ವಿಶ್ವ ತಾಯಂದಿರ ದಿನ ಹಿನ್ನೆಲೆಯಲ್ಲಿ ಪರಿವರ್ತನ ಟ್ರಸ್ಟ್ ವತಿಯಿಂದ ಮೈಸೂರಿನಲ್ಲಿ ವೃದ್ದಾಶ್ರಮದ ತಾಯಂದಿರಿಗೆ ರಾಜಕುಮಾರ ಚಿತ್ರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಈ ಮೂಲಕ ತಾಯಿ ಹಾಗೂ ಮಕ್ಕಳ ಸಂಬಂಧ ಬೆಸೆಯುವ ಅಪರೂಪದ ಚಿತ್ರ ರಾಜಕುಮಾರ ಸಿನಿಮಾವನ್ನ ನೋಡುವ ಭಾಗ್ಯವನ್ನ ವೃದ್ದಾಶ್ರಮದಲ್ಲಿದ್ದ ತಾಯಂದಿರಿಗೆ ಪರಿವರ್ತನ ಟ್ರಸ್ಟ್ ಕಲ್ಪಿಸಿಕೊಟ್ಟಿತು.

ಮೈಸೂರಿನ ಗಾಯಿತ್ರಿ ಟಾಕೀಸ್ ನಲ್ಲಿ ಐವತ್ತು ತಾಯಂದಿರು ಚಿತ್ರವನ್ನ ವೀಕ್ಷಿಸಿ ಖುಷಿ ಪಟ್ಟರು. ಪರಿವರ್ತನಂ ಟ್ರಸ್ಟ್ ವತಿಯಿಂದ ಗುಲಾಬಿ ಹಾಗೂ ಹಣ್ಣು ಹಂಪಲು ವಿತರಣೆ ಮಾಡುವ ಮೂಲಕ ವೃದ್ದಾಶ್ರಮ ತಾಯಂದಿರಿಗೆ ವಿಶ್ವತಾಯಂದಿರ ದಿನದ ಶುಭಾಶಯ ಕೋರಲಾಯಿತು.

Old age mothers of Mysuru watched Rajakumara movie on the occasion of World Mother Day

ನಗರ ಪಾಲಿಕೆ ಸದಸ್ಯ ಮಾ ವಿ ರಾಮ್ ಪ್ರಸಾದ್ ಹಾಗೂ ಉಮಾ ಮಣಿ ಸೇರಿ ಮೈಸೂರಿನ ಯುವಕರು ಈ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

Old age mothers of Mysuru watched Rajakumara movie on the occasion of World Mother Day

ಮೈಸೂರಿಗೆ ಪುನೀತ್ ರಾಜ್ ಕುಮಾರ್ ಭೇಟಿ

ಸಾಂಸ್ಕೃತಿಕ ನಗರಿಗೆ ದಿಢೀರ್ ಭೇಟಿ ನೀಡಿದ ಪವರ್‌ಸ್ಟಾರ್ ಪುನೀತ್‌ ರಾಜ್‍ಕುಮಾರ್ ರಾಜಕುಮಾರ ಸಿನಿಮಾ ನಡೆಯುತ್ತಿರುವ ಥಿಯೇಟರ್‌ಗಳಿಗೆ ತೆರಳಿ ಅಭಿಮಾನಿಗಳ ಕೈ ಕುಲುಕಿದರು. ನಿನ್ನೆ ಸಂಜೆ ಲೀಡೋ, ಸರಸ್ವತಿ ಹಾಗೂ ಲಕ್ಷ್ಮೀ ಥಿಯೇಟರ್‌ಗಳಿಗೆ ಭೇಟಿ ನೀಡಿದ ಪುನೀತ್ ರಾಜ್‍ಕುಮಾರ್, ಕೆಲವು ಹೊತ್ತು ಅಭಿಮಾನಿಗಳೊಂದಿಗೆ ಕುಳಿತು ಸಿನಿಮಾ ನೋಡಿ, ಅಭಿಪ್ರಾಯ ಕೇಳಿ ಖುಷಿಪಟ್ಟರು.

Old age mothers of Mysuru watched Rajakumara movie on the occasion of World Mother Day

ಅಪ್ಪುವಿನ ಅನಿರೀಕ್ಷಿತ ಭೇಟಿಯಿಂದ ಖುಷ್ ಅದ ಅಭಿಮಾನಿಗಳು ಸೆಲ್ಫಿ ತೆಗೆಯಲು ತಾ ಮುಂದು ನಾ ಮುಂದು ಎಂದು ಮುಗಿಬಿದ್ದು ಫೋಟೋ ಕ್ಲಿಕ್ಕಿಸಿಕೊಂಡರು.

English summary
On the occasion of ‘World Mother Day’ old age women’s from old age home watched super hit movie Rajakumara in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X