ಬಿಜೆಪಿ ಪರಿವರ್ತನಾ ಯಾತ್ರೆ: ಮೈಸೂರಲ್ಲಿ ಜಾಥಾ ಹೊರಟವರಿಗೆ ಸಂಕಷ್ಟ!
ಮೈಸೂರು, ನವೆಂಬರ್ 3 : ನಿನ್ನೆ ಬೆಂಗಳೂರಿನಿಂದ ಆರಂಭವಾದ ಬಿಜೆಪಿ ಕರ್ನಾಟಕ ಪರಿವರ್ತನಾ ಯಾತ್ರೆಗೆ ಮೈಸೂರಿನಿಂದ ಬೈಕ್ ಮೂಲಕ ತೆರಳಿದ್ದ ಅನೇಕ ಮಂದಿಗೆ ನೋಟಿಸ್ ನೀಡಲಾಗಿದೆ!
ಬಿಜೆಪಿ ನವ ಕರ್ನಾಟಕ ಪರಿವರ್ತನಾ ಯಾತ್ರೆ ಅಂಗವಾಗಿ ಬೈಕ್ ಯಾತ್ರೆಯಲ್ಲಿ ಬಿಜೆಪಿ ಕಾರ್ಯಕರ್ತರು ಹೆಲ್ಮೆಟ್ ಧರಿಸಿದೆ ಬೈಕ್ ಯಾತ್ರೆಯಲ್ಲಿ ಭಾಗಿಯಾಗಿರುವವರಿಗೆ ನೋಟಿಸ್ ನೀಡುತ್ತಿದ್ದೇವೆ ಎಂದು ಅಪರಾಧ ಹಾಗೂ ಸಂಚಾರ ವಿಭಾಗದ ಡಿಸಿಪಿ ವಿಕ್ರಮ್ ಆಮ್ಟೆ ಹೇಳಿದ್ದಾರೆ.

ಮೈಸೂರಿನಿಂದ ಬೆಂಗಳೂರಿಗೆ ಬೈಕ್ ಯಾತ್ರೆಯಲ್ಲಿ ತೆರಳಿದ್ದ ಬಿಜೆಪಿ ಕಾರ್ಯಕರ್ತರು ಹೆಲ್ಮೆಟ್ ಧರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಿಸಿಟಿವಿ ಹಾಗೂ ವಿಡಿಯೋ ಚಿತ್ರಣ ನೋಡಿ ಅವರಿಗೆ ನೋಟಿಸ್ ನೀಡಿ ದಂಡ ವಿಧಿಸಲಾಗುವುದು ಎಂದಿದ್ದಾರೆ. ಸಂಚಾರಿ ನಿಯಮ ಉಲ್ಲಂಘಿಸಿದ ಯಾರೇ ಆಗಲಿ ದಂಡ ಪಾವತಿಸಲೇಬೇಕು ಇಲ್ಲವಾದರೇ ಕಠಿಣಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.












Click it and Unblock the Notifications