ಲೋಕಾರ್ಪಣೆಗೊಂಡ ದಿನವೇ ಕತ್ತಲಲ್ಲಿ ವಿಷ್ಣು ಸ್ಮಾರಕ: ಅಭಿಮಾನಿಗಳಿಂದ ಅಹೋರಾತ್ರಿ ಧರಣಿ

13 ವರ್ಷಗಳ ಸತತ ಹೋರಾಟದ ನಂತರ ಕನ್ನಡ ಚಿತ್ರರಂಗದ ಮೇರು ನಟ ಡಾ.ವಿಷ್ಣುವರ್ಧನ್ ಸ್ಮಾರಕ ಮೈಸೂರಿನಲ್ಲಿ ನಿರ್ಮಾಣವಾಗಿದ್ದು, ಭಾನುವಾರ ಲೋಕಾರ್ಪಣೆಗೊಂಡಿದೆ. ಆದರೆ ಸ್ಮಾರಕದಲ್ಲಿ ವಿದ್ಯುತ್‌ ವ್ಯವಸ್ಥೆ ಇಲ್ಲದೇ ಇರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಮೈಸೂರು, ಜನವರಿ 30: 13 ವರ್ಷಗಳ ಸತತ ಹೋರಾಟದ ಫಲವಾಗಿ ಹುಟ್ಟೂರು ಮೈಸೂರಿನಲ್ಲೇ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣವಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಲೋಕಾರ್ಪಣೆಗೊಳಿಸಿದರು.

ಭಾನುವಾರ ಮಧ್ಯಾಹ್ನ ಸಿಎಂ ಉದ್ಘಾಟನೆಗೊಳಿಸಿದ್ದ ಡಾ.ವಿಷ್ಣುವರ್ಧನ್ ಸ್ಮಾರಕದಲ್ಲಿ ರಾತ್ರಿ ದೀಪದ ವ್ಯವಸ್ಥೆ ಇಲ್ಲವೆಂದು ಅಭಿಮಾನಿಗಳಿಂದ ಅಹೋರಾತ್ರಿ ಧರಣಿ ನಡೆಸಿದ್ದಾರೆ.

ಮೈಸೂರಿನ ಎಚ್.ಡಿ.ಕೋಟೆ ಮಾನಂದವಾಡಿ ರಸ್ತೆಯಲ್ಲಿನ ವಿಷ್ಣು ಸ್ಮಾರಕವನ್ನು ವೀಕ್ಷಿಸಲು ಭಾನುವಾರ ಬೆಳಗ್ಗೆಯಿಂದಲೇ ಅಭಿಮಾನಿಗಳು ಆಗಮಿಸಿದ್ದರು. ಸ್ಮಾರಕ ಉದ್ಘಾಟನೆಗಾಗಿ ಮಧ್ಯಾಹ್ನ 2ರವರೆಗೂ ಕಾದಿದ್ದರು. ಬಳಿಕ ವೀಕ್ಷಣೆಗೆ ಅವಕಾಶ ಕಲ್ಪಿಸಿದ್ದರಿಂದ ನಿರೀಕ್ಷೆಗೂ ಮೀರಿ ಜನ ಸಾಗರವೇ ಹರಿದು ಬಂದಿತ್ತು. ಆದರೆ ಸ್ಮಾರಕದಲ್ಲಿ ವಿದ್ಯುತ್‌ ವ್ಯವಸ್ಥೆ ಇಲ್ಲದೇ ಇರುವುದು ಅಭಿಮಾನಿಗಳನ್ನು ನಿರಾಸೆಗೊಳಿಸಿದೆ.

No Power Supply To Kannada Actor Vishnuvardhan Memorial In Mysuru

ಸಂಜೆ ವೇಳೆ ವಿಷ್ಣು ಸ್ಮಾರಕ ವೀಕ್ಷಣೆಗೆ ಬಂದ ಅಭಿಮಾನಿಗಳು, ಬೆಳಕಿನ ವ್ಯವಸ್ಥೆ ಇಲ್ಲದೆ ಪರದಾಡಿದರು. ಸರಿಯಾಗಿ ವ್ಯವಸ್ಥೆ ಮಾಡದೇ ವಿಷ್ಣು ಅವರಿಗೆ ಸರಕಾರ ಅಪಮಾನ ಮಾಡಿದೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು.

"ಮೈಸೂರು ನಗರದಲ್ಲಿ ಇಂದು ಅದ್ಧೂರಿಯಾಗಿ ನಡೆದ ವಿಷ್ಣು ಸ್ಮಾರಕ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ವಿಷ್ಣು ಅಭಿಮಾನಿಗಳಿಗೆ ಅನಂತಾನಂತ ಧನ್ಯವಾದಗಳು ಹಾಗೂ ಸರ್ಕಾರಕ್ಕೂ ಸಹ ಧನ್ಯವಾದಗಳು. ಆದರೆ ಮತ್ತೊಂದು ಬೇಸರದ ಸಂಗತಿ ಎಂದರೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌ಟಿ ಸೋಮಶೇಖರ್ ಸಾಹಸಸಿಂಹ ವಿಷ್ಣು ಸ್ಮಾರಕ ಕಾರ್ಯಕ್ರಮ ಉದ್ಘಾಟನೆಗೆ ಬರದೇ ನಿರ್ಲಕ್ಷಿಸಿರುವುದು ಅಭಿಮಾನಿಗಳಿಗೆ ನೋವು ಉಂಟಾಗಿದೆ ಎಂದು ಸಾಮಾಜಿಕ ಹೋರಾಟಗಾರ ವಿಕ್ರಂ ಅಯ್ಯಂಗಾರ್ ಹೇಳಿದ್ದಾರೆ.

No Power Supply To Kannada Actor Vishnuvardhan Memorial In Mysuru

ಮಾತು ಮುಂದುವರಿಸಿದ ಅವರು, ವಿಷ್ಣು ಹೆಸರಿನಲ್ಲಿ ಹಲವಾರು ಚಿತ್ರನಟರು ಮುಂದೆ ಬಂದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ ಆದರೆ ಸ್ಮಾರಕ ಉದ್ಘಾಟನೆಗೆ ಚಲನಚಿತ್ರ ನಟರು ಯಾಕೆ ಬಂದಿಲ್ಲ ಎಂಬುವುದು ಅಭಿಮಾನಿಗಳ ಪ್ರಶ್ನೆಯಾಗಿದೆ. ಈ ಕೂಡಲೇ ಜಿಲ್ಲಾ ಮಂತ್ರಿಗಳು ಸ್ಪಷ್ಟನೆಕೊಡಬೇಕು. ಸ್ಮಾರಕ ಉದ್ಘಾಟನೆ ಕಾರ್ಯಕ್ರಮವನ್ನು ಇನ್ನೂ ಅಚ್ಚುಕಟ್ಟಾಗಿ ನೆರವೇರಿಸಬಹುದಿತ್ತು. ಕತ್ತಲೆಯಲ್ಲೇ ಸ್ಮಾರಕ ಇದೆ. ದೂರದಿಂದ ಬಂದಂತಹ ಅಭಿಮಾನಿಗಳಿಗೆ ಇದರಿಂದ ಬೇಸರವಾಗಿದೆ ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+