ದೇಶದಲ್ಲೇ ಕುಮಾರಸ್ವಾಮಿಯಂತಹಾ ಇನ್ನೊಬ್ಬ ರಾಜಕಾರಣಿ ಇಲ್ಲ: ದೇವೇಗೌಡ

ಬೆಂಗಳೂರು, ಅಕ್ಟೋಬರ್ 11: ದೇಶದಲ್ಲೇ ಕುಮಾರಸ್ವಾಮಿ ಅವರಂತಹಾ ಇನ್ನೊಬ್ಬ ರಾಜಕಾರಣಿ ಇಲ್ಲ ಎಂದು ಜೆಡಿಎಸ್ ವರಿಷ್ಠ ದೇವೇಗೌಡ ಅವರು ಹೇಳಿದರು.

ಮೈಸೂರಿನ ಗದ್ದಿಗೆಯಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ದೇವೇಗೌಡ ಅವರು, 'ಏಡ್ಸ್ ಪೀಡಿತ ಮನೆಗೆ ಹೋಗಿದ್ದ ಕುಮಾರಸ್ವಾಮಿ ವಾಸ್ತವ್ಯ, ಅವರ ಜೊತೆ ಊಟ ಮಾಡಿದ್ದಾರೆ' ಈ ರೀತಿ ದೇಶದ ಇನ್ನಾವುದೇ ರಾಜಕಾರಣಿಯೂ ಮಾಡಿಲ್ಲ ಎಂದರು.

'ಜೆಡಿಎಸ್ ಪಕ್ಷ ಯಾವ ಸಮುದಾಯಕ್ಕೂ ತಾರತಮ್ಯ ಮಾಡಿಲ್ಲ, ಈ ವಯಸ್ಸಿನಲ್ಲಿ ನಾನು ಯಾರಿಗೋಸ್ಕರ ಪಾದಯಾತ್ರೆ ಮಾಡುತ್ತಿದ್ದೇನೆ, ರಾಜ್ಯದ ಜನ ಪ್ರವಾಹದಿಂದಾಗಿ ಸಂಕಷ್ಟದಲ್ಲಿದ್ದಾರೆ. ಆದರೆ ಕೇಂದ್ರ ರಾಜ್ಯದ ಬಗ್ಗೆ ತಾರತಮ್ಯ ಮಾಡಿದೆ. ನಾನು ಈಗ ಲೋಕಸಭೆಯಲ್ಲಿಲ್ಲ ಆದರೂ ಎರಡು ಬಾರಿ ಮೋದಿಗೆ ಪತ್ರ ಬರೆದಿದ್ದೇನೆ' ಎಂದು ದೇವೇಗೌಡ ಹೇಳಿದರು.

No Other Politician Like Kumaraswamy In Whole Nation: Deve Gowda

'ಕೇಂದ್ರವು ರಾಜ್ಯದ ಬಗ್ಗೆ ಹೇಗೆ ನಡೆದುಕೊಳ್ಳುತ್ತಿದೆ ಎಂಬುದನ್ನು ಜನರು ನೋಡಬೇಕು, ರಾಜ್ಯಕ್ಕೆ ಆಗಿರುವ ನಷ್ಟ 38,000 ಕೋಟಿ ಆದರೆ ಕೊಟ್ಟಿರುವುದು 1200 ಕೋಟಿ, ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು' ಎಂದು ದೇವೇಗೌಡ ಹೇಳಿದರು.

ರಾಜ್ಯ ರಾಜಕಾರಣದ ಬಗ್ಗೆ ಮಾತನಾಡಿದ ದೇವೇಗೌಡರು, 'ರಾಜ್ಯದ ಬಿಜೆಪಿ ಸರ್ಕಾರಕ್ಕೆ ಹೆಚ್ಚು ಆಯುಷ್ಯವಿಲ್ಲ, ಅವರಲ್ಲೇ ಕಚ್ಚಾಟ ಆರಂಭವಾಗಿದೆ. ಈ ಸರ್ಕಾರ ಯಾವಾಗ ಬೇಕಾದರೂ ಉರುಳಬಹುದು, ಮೇಲಾಗಿ ಇದೇ ತಿಂಗಳ 22 ರಂದು ಅನರ್ಹರ ಬಗ್ಗೆ ತೀರ್ಪು ಹೊರಬೀಳಲಿದೆ. ತೀರ್ಪಿನ ಮೇಲೆ ರಾಜ್ಯದ ರಾಜಕೀಯ ಭವಿಷ್ಯ ನಿರ್ಧಾರಿತವಾಗಿದೆ' ಎಂದು ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+