ಮೈಸೂರು ರೇಸ್‍ ಕೋರ್ಸ್ ಸ್ಥಳಾಂತರಿಸಿ: ಸಾ.ರಾ. ಮಹೇಶ್

ಮೈಸೂರು, ಜೂನ್.14 : ಬೆಂಗಳೂರು ರೇಸ್‍ ಕೋರ್ಸ್ ನ್ನು ನಗರದ ಹೊರಗಡೆ ಸ್ಥಳಾಂತರಿಸಬೇಕು ಎನ್ನುವುದು ಹಳೆಯ ಕೂಗು. ಈಗ ಇಂತಹುದೇ ಕೂಗು ಮೈಸೂರಿನಲ್ಲೂ ಎದ್ದಿದೆ. ಈ ಕೂಗಿಗೆ ಧ್ವನಿಯಾಗಿರುವವರು ಮತ್ತಾರು ಅಲ್ಲ ನೂತನ ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್.

ನಗರದ ಹೃದಯಭಾಗದಲ್ಲಿರುವ ರೇಸ್ ಕೋರ್ಸ್ ನ ಪರವಾನಗಿಯನ್ನು ನವೀಕರಣಗೊಳಿಸದಿರುವಂತೆ ಕಳೆದ ಕೆಲ ಸಮಯದಿಂದ ಹೋರಾಡುತ್ತಿರುವ ಸಾರಾ ಮಹೇಶ್, ಸಚಿವರಾಗುತ್ತಿದ್ದಂತೆ ಈ ವಿವಾದ ಕೆದಕಿದ್ದಾರೆ.

ರೇಸ್‍ ಕೋರ್ಸ್ ನಲ್ಲಿ ಬೊಟಾನಿಕಲ್ ಗಾರ್ಡನ್‌ ಅಭಿವೃದ್ಧಿ ಪಡಿಸಬೇಕು ಎನ್ನುವುದು ಅವರ ಅಭಿಪ್ರಾಯ. ರೇಸ್‍ಕೋರ್ಸ್ ನ್ನು ನಗರದಿಂದ 20 ಕಿಲೋ ಮೀಟರ್ ಹೊರಗೆ ಸ್ಥಳಾಂತರಿಸಿ ಎನ್ನುವುದು ಅವರ ಬೇಡಿಕೆ.

New tourism minister Mahesh wants to develop botanical garden at Race Course

ಮೈಸೂರಿನಲ್ಲಿ ಪತ್ರಕರ್ತರಿಗೆ ಈ ವಿಷಯ ತಿಳಿಸಿರುವ ಅವರು, ಈ ವಿಷಯಕ್ಕೆ ಸಂಬಂಧಿಸಿದಂತೆ ರೇಸ್‌ಕ್ಲಬ್‌ ಅಧ್ಯಕ್ಷರು-ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಮೂಲಗಳ ಪ್ರಕಾರ, ರೇಸ್‍ ಕೋರ್ಸ್ ಸ್ಥಳಾಂತರಕ್ಕೆ ಸಂಬಂಧಿಸಿ, ಮುಂದಿನ ವಾರ ಲೋಕೋಪಯೋಗಿ ಇಲಾಖೆ ಹಾಗೂ ಇತರ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ಕರೆಯಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+