ಮೈಸೂರು; ನಂದಿನಿ ನಕಲಿ ತುಪ್ಪ ಮಾರಾಟ ಜಾಲ ಬಯಲು

ಮೈಸೂರು, ಡಿಸೆಂಬರ್ 16; ಮೈಸೂರಿನಲ್ಲಿ ನಕಲಿ 'ನಂದಿನಿ' ತುಪ್ಪದ ಮಾರಾಟ ಮತ್ತು ತಯಾರಿಕಾ ಘಟಕದ ದೊಡ್ಡ ಜಾಲ ಬಯಲಾಗಿದೆ. ನೀವು ನಂದಿನಿ ತುಪ್ಪ ಪ್ರಿಯರೇ?, ತುಪ್ಪ ಖರೀದಿ ಮಾಡುವಾಗ ಎಚ್ಚರವಾಗಿರಿ.

ನಕಲಿಯಾಗಿ ತುಪ್ಪ ತಯಾರಿ ಮಾಡಿ ನಂದಿನಿ ಉತ್ಪನ್ನದ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿತ್ತು. ತುಪ್ಪ ತಯಾರಿಸುವ ಗೋಡೌನ್ ಒಂದು ಹೊಸಹುಂಡಿಬಳಿ ಪತ್ತೆಯಾಗಿದ್ದು, ಕಳೆದ ನಾಲ್ಕು ತಿಂಗಳಿನಿಂದ ನಂದಿನಿ ತುಪ್ಪವನ್ನು ನಗರದಾದ್ಯಂತ ಈ ನಕಲಿ ತಯಾರಕರು ವಿತರಣೆ ಮಾಡಿದ್ದಾರೆ.‌

ಗುರುವಾರ ಬೆಳ್ಳಗ್ಗೆ ಹೊಸಹುಂಡಿಯಲ್ಲಿರುವ ನಕಲಿ ನಂದಿನಿ ತುಪ್ಪ ತಯಾರಿಕಾ ಗೋಡಾನ್ ಮೇಲೆ ಹ್ಯೂಮನ್ ರೈಟ್ಸ್ ತಂಡ ದಾಳಿ ನಡೆಸಿದೆ. ಹ್ಯೂಮನ್ ರೈಟ್ಸ್ ತಂಡದ ಉಪಾಧ್ಯಕ್ಷ ಪ್ರದೀಪ್ ಮಾತನಾಡಿ, "ಬೆಳಗಿನ ಜಾವ ನಮಗೆ ಒಂದು ದೂರವಾಣಿ ಕರೆ ಬಂತು. ಹೊಸಹುಂಡಿಯಲ್ಲಿ ಈ ರೀತಿ ನಂದಿನಿ ತುಪ್ಪವನ್ನು ನಕಲಿ ತಯಾರಿಸಿ ಲೋಡ್ ಮಾಡಿ ಮೈಸೂರು ನಗರದಾದ್ಯಂತ ವಿತರಣೆ ಮಾಡುತ್ತಿದ್ದಾರೆ" ಎಂಬ ಮಾಹಿತಿ ಸಿಕ್ಕಿತು ಎಂದರು.

Nandini Fake Ghee Making Unit Busted In Mysuru

"ಘಟನಾ ಸ್ಥಳಕ್ಕೆ ಏನು ಅಂತ ನೋಡೋದಕ್ಕೆ ಬಂದೆವು. ಕೆಲವರು ಬಾಗಿಲು ಹಾಕಿಕೊಂಡು ಒಳಗಡೆ ಕೆಲಸ ಮಾಡುತ್ತಿದ್ದರು. ನಕಲಿ ತುಪ್ಪ ತಯಾರು ಮಾಡುವುದನ್ನು ನೋಡಿ ನಾವೇ ದಾಳಿ ಮಾಡಿದೆವು" ಎಂದು ಪ್ರದೀಪ್ ಹೇಳಿದರು.

"ಗೋಡಾನ್ ಒಳಗೆ ಬಂದು ನೋಡಿದಾಗ ನಮಗೆ ಗೊತ್ತಾಯಿತು. ಕೆಲವು ಅಸಲಿ ನಂದಿನಿ ತುಪ್ಪವನ್ನೂ ಇಟ್ಟುಕೊಂಡಿದ್ದಾರೆ. ಇನ್ನು ಕೆಲವು ಪ್ಯಾಕಿಂಗ್ ಮಾಡುತ್ತಿದ್ದಾರೆ. ನಂದಿನಿ ತುಪ್ಪದ ರೂಪವೇ ಬರಲೆಂದು ಅದಕ್ಕೆ ಡಾಲ್ಡಾ ತುಪ್ಪ ಮಿಕ್ಸ್ ಮಾಡಿ ಪ್ಯಾಕಿಂಗ್ ಮಾಡುತ್ತಿದ್ದಾರೆ. ಒಂದಾದ ನಂತರ ಒಂದು ಟಿನ್ ತುಂಬಿದ್ದಾರೆ. ಈ ತುಪ್ಪವನ್ನು ಎಲ್ಲೆಲ್ಲಿ ವಿತರಣೆ ಮಾಡಿದ್ದಾರೋ?" ಎಂದು ಆತಂಕ ವ್ಯಕ್ತಪಡಿಸಿದರು.

Nandini Fake Ghee Making Unit Busted In Mysuru

"ಕಳೆದ ನಾಲ್ಕು ತಿಂಗಳಿನಿಂದ ಹೊಸಹುಂಡಿಯಲ್ಲಿ ಈ ತಯಾರಿಕೆ ನಡೆಯುತ್ತಿದೆಯಂತೆ. ಎಲೆಲ್ಲಿ ವಿತರಣೆ ಮಾಡಿದ್ದಾರೋ, ಇದು ಆರೋಗ್ಯಕ್ಕೆ ಹಾನಿಕಾರಕ. ಈ ಕುರಿತು ಉನ್ನತ ಮಟ್ಟದಲ್ಲಿ ತನಿಖೆ ಆಗಬೇಕು. ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾದವರಿಗೂ ಈಗಾಗಲೇ ತಿಳಿಸಿದ್ದೇವೆ. ಕೆಎಂಎಫ್ ಎಂಡಿಯವರು ಬಂದಿದ್ದಾರೆ. ಅದರ ಬಗ್ಗೆ ಉನ್ನತಮಟ್ಟದ ತನಿಖೆ ನಡೆಯುತ್ತಿದೆ" ಎಂದು ತಿಳಿಸಿದರು.

ಈ ನಕಲಿ ಜಾಲದ ಹಿಂದೆ ಯಾವ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಶಾಮೀಲಾಗಿದ್ದಾರೆ? ಅವರಿಗೆ ಕಾನೂನು ಪ್ರಕಾರ ಶಿಕ್ಷೆ ಆಗಬೇಕು ಎಂದು ಜನರು ಒತ್ತಾಯಿಸಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತೇವೆ ಎಂದು ಸ್ಥಳೀಯರು ಹೇಳಿದ್ದಾರೆ.

ನಕಲಿ ತುಪ್ಪ ಮಾರಾಟದ ಬಗ್ಗೆ ಸೂಕ್ತ ತನಿಖೆಗಾಗಿ ಸ್ಥಳೀಯ ಶಾಸಕರಿಗೂ ಮನವಿ ಸಲ್ಲಿಸುತ್ತೇವೆ. ಅವರಿಗೆ ಕಾನೂನು ಪ್ರಕಾರವೇ ಶಿಕ್ಷೆಯಾಗಬೇಕು. ಈ ಬಗ್ಗೆ ನಿರ್ಲಕ್ಷ್ಯ ತೋರಿದರೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+