ಮೈಸೂರು: ಅಮೇಜಾನ್ ಗೆ ಮೋಸಗೈದ ಮೂವರ ಬಂಧನ

ಮೈಸೂರು, ನವೆಂಬರ್ 18 : ಆನ್ ಲೈನ್ ಶಾಂಪಿಗ್ ನಲ್ಲಿ ದುಬಾರಿ ಬೆಲೆ ವಸ್ತುಗಳನ್ನು ಖರೀದಿಸಿ ವಂಚಿಸುತ್ತಿದ್ದ ವ್ಯಕ್ತಿಗಳ ವಿರುದ್ಧ ದೂರು ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಅಭಿಲಾಷ್ (24),ಆನಂದ್ (21),ವೆಂಕಟೇಶ್(20)ಹಾಗೂ ಚಂದ್ರಶೇಖರ್ ಎಂದು ಹೇಳಲಾಗಿದ್ದು, ಇವರು ಖರೀದಿಸಿದ ವಸ್ತುಗಳು ಕೈಸೇರಿಲ್ಲ ಎಂದು ದೂರು ನೀಡಿ ಮತ್ತೆ ವಸ್ತು ಪಡೆದು ವಂಚಿಸುತ್ತಿದ್ದರಲ್ಲದೇ, ವಸ್ತುಗಳನ್ನು ಪಡೆದು ಸೇವೆ ಸರಿಯಿಲ್ಲವೆಂದು ಆರೋಪಿಸಿ ಹಣ ವಾಪಸ್ ಪಡೆಯುತ್ತಿದ್ದರು. ಸುಮಾರು 3.17 ಲಕ್ಷ ವಂಚಿಸಿದ್ದಾರೆಂದು ಆರೋಪಿಸಿ ಅಮೇಜಾನ್ ಸಂಸ್ಥೆ ಪ್ರತಿನಿಧಿ ನಿಷಾದ್ ಶರ್ಮಾ ಈ ಮೂವರ ವಿರುದ್ಧ ದೂರು ದಾಖಲಿಸಿದ್ದರು. ನಕಲಿ ಇ-ಮೇಲ್‌ ವಿಳಾಸ ನೀಡಿ ಅಮೇಜಾನ್ ನಲ್ಲಿ ಖಾತೆ ಓಪನ್ ಮಾಡಿ 45 ಸಾವಿರ ರೂ. ಮೌಲ್ಯದ ಐಫೊನ್ 7 ಖರೀದಿಸಿದ್ದರು.

Mysuru police have arrested 4 men in connection with online fraud

ದುಬಾರಿ ಬೆಲೆಯಾಗಿದ್ದ ಹಿನ್ನಲೆ ಆನ್‌ಲೈನ್‌ ಮೂಲಕ ಹಣ ಪಾವತಿ ಮಾಡಬೇಕಿತ್ತು. ಮೊಬೈಲ್‌ ಕೈಸೇರಿದ ಎರಡು ದಿನಗಳ ಬಳಿಕ ಕಂಪೆನಿಗೆ ಕರೆ ಮಾಡಿ ಖಾಲಿ ಬಾಕ್ಸ್‌ ಎಂದು ಆರೋಪಿಗಳು ದೂರಿದ್ದರು. ಗ್ರಾಹಕರ ದೂರು ಗಂಭೀರವಾಗಿ ಪರಿಗಣಿಸಿ ಇ-ಕಾಮರ್ಸ್ ಕಂಪೆನಿಗೆ ಮತ್ತೊಂದು ಫೋನ್ ಕರೆ ಬಂದಿತ್ತು. ತಲುಪಿದ ಬಳಿಕ ಕರೆ ಮಾಡಿ ಸುಳ್ಳು ದೂರು ನೀಡಿದ್ದರು. ಇದೇ ಉಪಾಯ ಬಳಸಿ 8 ಬಾರಿ ಕಂಪೆನಿಯ ಹಲವು ವಸ್ತು ಖರೀದಿಸಿ ಮೋಸ ಮಾಡಿದ್ದಾರೆ. ಆಂತರಿಕ ಲೆಕ್ಕ ಪರಿಶೋಧನೆ ವೇಳೆ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಉದಯಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಉದಯಗಿರಿ ಪೊಲೀಸರು ಕಾರ್ಯಾಚರಣೆ ನಡೆಸಿ ಆನ್ ಲೈನ್ ಕಂಪನಿ ಅಮೆಜಾನ್ ಗೆ ಉಂಡೆನಾಮ ಇಟ್ಟ ನಾಲ್ವರು ಖದೀಮರನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಂದು ಲಕ್ಷ ಮೌಲ್ಯದ ದುಬಾರಿ ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪತ್ನಿಯ ಕೊಂದಿದ್ದ ಪತಿಗೆ ಏಳು ವರ್ಷ ಜೈಲು
ವರದಕ್ಷಿಣೆ ಕಿರುಕುಳ ನೀಡಿ ಪತ್ನಿಯನ್ನು ಕೊಲೆ ಮಾಡಿದ್ದ ಪತಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ಮೈಸೂರಿನ ಏಳನೇ ಜಿಲ್ಲಾ ಹೆಚ್ಚುವರಿ ನ್ಯಾಯಾಲಯದ ಆದೇಶ ನೀಡಿದೆ.

ಪತ್ನಿ ಅಮೀನಾ ಖಾತೂನ್ ಕೊಲೆ ಮಾಡಿದ್ದ ತಜ್ಮಲ್ ಅಹಮದ್ ಖಾನ್ ಗೆ ಏಳು ವರ್ಷ ಜೈಲು ಶಿಕ್ಷೆ ಹಾಗೂ 13000 ದಂಡ ವಿಧಿಸಿ ತೀರ್ಪು ನೀಡಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಹೆಚ್ ಡಿ ಆನಂದ್ ಕುಮಾರ್ ವಾದ ಮಂಡಿಸಿದ್ದರು. ವಾದ ವಿವಾದ ಆಲಿಸಿ ನ್ಯಾಯಾಧೀಶ ವಿಜಯ್ ಕುಮಾರ್ ಎಂ ಆನಂದ ಶೆಟ್ಟಿ ಶಿಕ್ಷೆ ಪ್ರಕಟಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+