Get Updates
Get notified of breaking news, exclusive insights, and must-see stories!

ಧರ್ಮದೆಲ್ಲೆ ಮೀರಿ ಲಕ್ಷ್ಮೀ ಹಬ್ಬ ಆಚರಿಸಿದ ಮುಸ್ಲಿಂ ದಂಪತಿ

ಮೈಸೂರು, ಆಗಸ್ಟ್ 9: ಮನುಷ್ಯರ ನಡುವೆ ಜಾತಿ ಧರ್ಮಗಳ ಜಂಜಾಟಗಳೇ ಹೆಚ್ಚು. ಆದರೆ ಈ ವೈಮನಸ್ಸನ್ನು ಬದಿಗಿಟ್ಟು ಮೈಸೂರಿನ ಅಂತರ್ ಧರ್ಮೀಯ ದಂಪತಿ ವರಮಹಾಲಕ್ಷ್ಮೀ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ.

ಹಬ್ಬದ ಸಂಭ್ರಮದಲ್ಲಿ ಚಿನ್ನದ ಬೆಲೆ ದಾಖಲೆ ಮೊತ್ತದಲ್ಲಿ ಏರಿಕೆ
ಹೆಚ್.ಡಿ.ಕೋಟೆ ರಸ್ತೆಯಲ್ಲಿರುವ ಕೋಟೆ ಹುಂಡಿ ಗ್ರಾಮದ ನಿವಾಸಿಗಳಾದ ಜಾಕೀರ್ ಹುಸೇನ್ ಹಾಗೂ ಮಮತಾ ದಂಪತಿ ವರಮಹಾಲಕ್ಷ್ಮೀ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದ್ದಾರೆ. ಜಾಕೀರ್ ಹುಸೇನ್ ಮತ್ತು ಮಮತಾ 15 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದು, ಹಿಂದು-ಮುಸ್ಲಿಂ ಎರಡೂ ಧರ್ಮಗಳ ಹಬ್ಬವನ್ನು ಆಚರಿಸುತ್ತಾರೆ. ಈ ಮೂಲಕ ಸೌಹಾರ್ದ ಮೆರೆಯುತ್ತಿದ್ದಾರೆ.

mysuru-muslim-couple-celebrate-varamahalakshmi-festival

ಈ ದಂಪತಿಯ ಅನ್ಯೋನ್ಯತೆ ಕಂಡು ಗ್ರಾಮಸ್ಥರು ಸಹ ಖುಷಿ ಪಟ್ಟರು.
ಪ್ರೀತಿಸಿ ವಿವಾಹವಾಗುವ ಅನೇಕ ಜೋಡಿಗಳಲ್ಲಿ ಬಹಳ ಸಂದರ್ಭ ಹೆಣ್ಣು ಪುರುಷನ ಧರ್ಮಕ್ಕೆ ಮತಾಂತರವಾಗುತ್ತಾಳೆ. ಆದರೆ ಅವರಿಬ್ಬರೂ ತಮ್ಮ ತಮ್ಮ ಧರ್ಮದ ಸಂಪ್ರದಾಯ-ಆಚರಣೆಯನ್ನು ಬಿಟ್ಟುಕೊಟ್ಟಿಲ್ಲ. ಬದಲಿಗೆ ಪರಸ್ಪರ ಗೌರವಿಸುತ್ತಲೇ ಬಂದಿದ್ದಾರೆ.
ಹಬ್ಬ ಮಾತ್ರವಲ್ಲ, ಮತ ಧರ್ಮಕ್ಕೆ ಸಂಬಂಧಿಸಿದ ಯಾವ ವಿಷಯದಲ್ಲೂ ದಂಪತಿ ನಡುವೆ ಭಿನ್ನಾಭಿಪ್ರಾಯವಿಲ್ಲ. ಅಲ್ಲದೇ ಹಬ್ಬವನ್ನು ಆಚರಿಸಿದ ಬಳಿಕ ಗ್ರಾಮದ ನಾನಾ ಜನಾಂಗದವರನ್ನು ಒಂದೆಡೆ ಸೇರಿಸಿ ಸಹ ಪಂಕ್ತಿ ಭೋಜನ ಸಹ ನೀಡಿ ಸಂಭ್ರಮಿಸುತ್ತಾರೆ.

mysuru-muslim-couple-celebrate-varamahalakshmi-festival

ಮೈಸೂರಿನ ನಿವಾಸಿಯಾದ ಮಮತ ನಗರದ ಗೋಪಾಲಸ್ವಾಮಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಾರೆ. ಪತಿ ಜಾಕೀರ್ ಹುಸೇನ್ ಕನ್ನಡ ಸಾಹಿತ್ಯ ಪರಿಷತ್ನ ಜಿಲ್ಲಾ ಸಮಿತಿಯ ಪತ್ರಿಕಾ ಕಾರ್ಯದರ್ಶಿಯಾಗಿದ್ದಾರೆ. ಅವರವರ ಧರ್ಮವನ್ನು ಇಬ್ಬರೂ ಒಟ್ಟಾಗಿ ಅತ್ಯಂತ ಅರ್ಥಪೂರ್ಣವಾಗಿ ಆಚರಿಸುತ್ತಿದ್ದಾರೆ. ಈ ರೀತಿಯ ಆಚರಣೆ ಅವರಿಗೆ ವಿಶೇಷವಾದ ಅನುಭವ ನೀಡಿದೆಯಂತೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+