ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮದಾಸ್, ಎಚ್ ವಿಶ್ವನಾಥ್ ಜಂಟಿ ಪ್ರವಾಹ ಪ್ರದೇಶದ ವೀಕ್ಷಣೆ

|
Google Oneindia Kannada News

ಮೈಸೂರು, ಆ 10: 'ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪನವರ ಆದೇಶದ ಮೇರೆಗೆ ಮೈಸೂರು, ಹುಣಸೂರು, ಹೆಚ್ ಡಿ ಕೋಟೆ, ನಂಜನಗೂಡು, ವರುಣಾ ತಾಲೂಕಿನಲ್ಲಿ ನೀರಿನ ಪ್ರವಾಹದಿಂದ ಉಲ್ಬಣಿಸಿರುವ ಸಮಸ್ಯೆಗಳ ಪ್ರದೇಶಕ್ಕೆ ಭೇಟಿ ನೀಡಿ ವರದಿ ನೀಡುವ ಸಲುವಾಗಿ ಬಂದಿದ್ದೇನೆ' ಎಂದು ಶಾಸಕ ಎಸ್ ಎ ರಾಮದಾಸ್ ಹೇಳಿದರು.

'ನಿರಂಜನ್ ಕುಮಾರ್ ಮತ್ತು ರಾಜ್ಯದಿಂದ ಸಂಚಾಲಕರಾಗಿ ಬಂದಿರುವ ವಿಜೇಂದ್ರರವರೊಂದಿಗೆ ವಿಶೇಷ ತಂಡಗಳ ನೇತೃತ್ವದಲ್ಲಿ ವೀಕ್ಷಣೆಗೆ ಬಂದಿದ್ದು, 'ಹೆಚ್ ಡಿ ಕೋಟೆ ತಾಲ್ಲೂಕಿನ ತಾರಕ ಡ್ಯಾಂನಿಂದ ಹೊರಬಂದ ನೀರಿನ‌ ಹೆಚ್ಚಳದಿಂದಾಗಿ 12 ಸಂಪರ್ಕ ಸೇತುವೆ ನಾಶವಾಗಿದೆ' ಎಂದು ರಾಮದಾಸ್ ಹೇಳಿದರು.

ಮತ್ತೆ ಕುಮಾರಣ್ಣನ ಔದಾರ್ಯಮತ್ತೆ ಕುಮಾರಣ್ಣನ ಔದಾರ್ಯ

ಕಟ್ಟೆಮನುಗನಹಳ್ಳಿ, ಮಾಧೇಳಹುಂಡಿಯ ಸ್ಥಳೀಯರಿಗೆ ತೀವ್ರ ತೊಂದರೆ ಉಂಟಾಗಿದ್ದು, ಇವರ ನೆರವಿಗಾಗಿ ರಾಮದಾಸ್ ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮೂಲಕ ಸಂರ್ಪಕ ಮಾಡಿ ಮನವಿ ಮಾಡಿದ್ದಾರೆ.

Mysuru Krishnaraja MLA SA Ramdas And Disqualified MLA H Vishwanath Visited Rain Effected Area In Hunsur

ಅಗ್ನಿಶಾಮಕ ದಳದ ವತಿಯಿಂದ ಬೋಟ್ ವ್ಯವಸ್ಥೆ ಕಲ್ಲಿಸಲು ಮತ್ತು ವಿದ್ಯುತ್ ಸಂಪರ್ಕ ಕಡಿತಗೊಂಡಿರುವ ಕಾರಣ ಕುಡಿಯುವ ನೀರಿಗೂ ತೊಂದರೆ ಉಂಟಾಗಿರುತ್ತದೆ ಅದ ಕಾರಣ ಕೂಡಲೇ ಸಮಸ್ಯೆ ಬಗೆಹರಿಸಲು ಸಂಬಂಧಿಸಿದವರಿಗೆ ಸೂಚಿಸಲು ಜಿಲ್ಲಾಧಿಕಾರಿಗಳಿಗೆ ರಾಮದಾಸ್ ಮನವಿ ಮಾಡಿದರು.

ಹಲವು ಪ್ರದೇಶಗಳಲ್ಲಿ ಬೆಳೆನಾಶವಾಗಿದ್ದು ಕೂಡಲೇ ತಹಶೀಲ್ದಾರರಿಗೆ ಬೆಳೆ ಹಾನಿ ಪರಿಹಾರ ಮಾಹಿತಿ ನೀಡುವಂತೆ ರಾಮದಾಸ್ ಸೂಚಿಸಿದರು. ಹುಣಸೂರು ವ್ಯಾಪ್ತಿಯಲ್ಲಿ ರಾಮದಾಸ್ ಪರಿಸ್ಥಿತಿ ವೀಕ್ಷಣೆಗೆ ತೆರಳಿದಾಗ, ಅನರ್ಹಗೊಂಡ ಕ್ಷೇತ್ರದ ಶಾಸಕರಾದ ಎಚ್ ವಿಶ್ವನಾಥ್ ಅವರ ಜೊತೆಗಿದ್ದರು.

ಮುಖಂಡರಾದ ಬಿ ಹೆಚ್ ಮಂಜುನಾಥ್, ಕೋಟೆ ಶಿವಣ್ಣ, ಸಿದ್ದರಾಜು , ರಾಜೇಂದ್ರ, ಸ್ಲಂಮೋರ್ಚಾ ರಾಜ್ಯ ಪ್ರದಾನಕಾರ್ಯದರ್ಶಿ ಕೌಟಿಲ್ಯರಘು, ಕಾಪು ಸಿದ್ದಲಿಂಗಸ್ವಾಮಿ, ಹೆಚ್ ವಿ ರಾಜೀವ್,ಅಪ್ಪಣ್ಣ ಮತ್ತು ಮುಂತಾದವರು ರಾಮದಾಸ್ ಜೊತೆಗೆ ಹಾಜರಿದ್ದರು.

English summary
Mysuru Krishnaraja MLA SA Ramdas And Disqualified MLA H Vishwanath Visited Rain Effected Area In Hunsur, HD Kote, Nanjanagudu, Varuna.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X