ಮೈಸೂರು ಜೆ.ಪಿ.ನಗರ ಅಂಚೆ ಕಚೇರಿಗೆ ಹೊಸ ಪಿನ್ ಕೋಡ್
ಮೈಸೂರು, ಜ. 31: ಇಲ್ಲಿಯ ಜೆ.ಪಿ. ನಗರ ಅಂಚೆ ಕಚೇರಿಯ ಪಿನ್ ಕೋಡ್ ಸಂಖ್ಯೆ ಫೆಬ್ರವರಿ 2ರಿಂದ ಬದಲಾಗಲಿದೆ ಎಂದು ಮೈಸೂರು ವಿಭಾಗದ ಅಂಚೆ ಹಿರಿಯ ಅಧೀಕ್ಷಕರು ತಿಳಿಸಿದ್ದಾರೆ.
ಇನ್ನು ಮುಂದೆ ಈ ಅಂಚೆ ಕಚೇರಿಯ ಪಿನ್ ಕೋಡ್ ಸಂಖ್ಯೆ 570031 ಆಗಲಿದೆ. ಅಲ್ಲದೆ, ಜೆ.ಪಿ.ನಗರ ಬಟವಾಡೆ ರಹಿತ ಅಂಚೆ ಕಚೇರಿಯು ಫೆ. 2ರಿಂದ ಬಟವಾಡೆ ಸಹಿತ ಕಚೇರಿಯಾಗಲಿದೆ. ಬ್ಯಾಂಕ್ ಕಾಲೋನಿ, ಆಶ್ರಯ ಕಾಲೋನಿ, ಕಂದಾಯ ಕಾಲೋನಿ, ಶ್ರೀ ನಗರ, ಎನ್.ಎಚ್. ಪಾಳ್ಯ, ಮಹದೇವಪುರ, ವೆಂಕಟೇಶ್ವರ ಲೇಔಟ್, ಜನತಾ ಕಾಲೋನಿ, ಭವನಿ ಲೇಔಟ್, ಎಂಎಸ್ಆರ್‌ಟಿಸಿ ಲೇಔಟ್ ಹಾಗೂ ಜೆ.ಪಿ. ನಗರದ ನಿವಾಸಿಗರು ಅಂಚೆ ಕಚೇರಿಯ ಬಟವಾಡೆ ವ್ಯಾಪ್ತಿಗೆ ಬರುತ್ತಾರೆ. [ಅಂಚೆ ಇಲಾಖೆ ಮನೆಗೇ ಬಂದು ಪತ್ರ ಒಯ್ಯುತ್ತೆ]

ಈ ವ್ಯಾಪ್ತಿಯ ನಿವಾಸಿಗಳು ಇನ್ನು ಮುಂದೆ ತಮ್ಮ ಪಿನ್ ಕೋಡ್ ಸಂಖ್ಯೆಯನ್ನು 570031 ಎಂದು ಬದಲಾಯಿಸಿಕೊಳ್ಳಬೇಕು. ಇಲ್ಲಿಯವರೆಗೆ ಈ ಕಚೇರಿಗೆ 570008 ಪಿನ್ ಕೋಡ್ ಸಂಖ್ಯೆ ಇತ್ತು. [ಅಂಚೆ ಖಾತೆದಾರರಿಗೆ ಎಟಿಎಂ, ಸ್ಟೇಟ್ ಮೆಂಟ್ ಸೌಲಭ್ಯ]
ಅಲ್ಲದೆ, ವಿಶ್ವೇಶ್ವರ ನಗರ ಕೈಗಾರಿಕಾ ಪ್ರದೇಶ ಮೊದಲ ಹಂತದ ಅಂಚೆ ಕಚೇರಿಯು ಜ. 31ರಿಂದ ಮೈಸೂರು ದಕ್ಷಿಣ ಅಂಚೆ ಕಚೇರಿಯೊಂದಿಗೆ ವಿಲೀನಗೊಂಡಿದೆ ಎಂದು ಹಿರಿಯ ಅಧೀಕ್ಷಕರು ತಿಳಿಸಿದ್ದಾರೆ.












Click it and Unblock the Notifications