ಸಭೆಗೆ ಲೇಟಾಗಿ ಬಂದವರಿಗೆ ಮೈಸೂರು ಡಿಸಿಯಿಂದ ಕ್ಲಾಸ್
ಮೈಸೂರು, ಫೆಬ್ರವರಿ 20 : ಮೈಸೂರಿನಲ್ಲಿ ಇಂದು ನಡೆಯುತ್ತಿದ್ದ ಮಾದರಿ ನೀತಿ ಸಂಹಿತೆ ಕುರಿತ ಕಾರ್ಯಾಗಾರಕ್ಕೆ ಲೇಟಾಗಿ ಬಂದ ಹಿನ್ನೆಲೆ ಅಧಿಕಾರಗಳನ್ನು ಸಭೆಯಲ್ಲೇ ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್ ತರಾಟೆಗೆ ತೆಗೆದುಕೊಂಡಿದ್ದಾರೆ.
ನಗರದ ಸೆನೆಟ್ ಭವನದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆ ನಡೆಯಲಾಗುತ್ತಿದ್ದ ಮಾದರಿ ನೀತಿ ಸಂಹಿತೆ ತರಬೇತಿ ಕಾರ್ಯಾಗಾರ ವೇಳೆ ಜಿಲ್ಲಾಧಿಕಾರಿಗಳು ಸಭೆ ನಡೆಸುತ್ತಿದ್ದರು. ಈ ವೇಳೆ ತಡವಾಗಿ ಬಂದ ಅಧಿಕಾರಿಗಳ ವಿರುದ್ದ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಅಸಮಾಧಾನ ವ್ಯಕ್ತಪಡಿಸಿ,ಯಾರಿಗೂ ಮಾಹಿತಿ ಕೊಟ್ಟಿಲ್ವ? ಯಾಕೆ ಇಷ್ಟು ತಡವಾಗಿ ಅಧಿಕಾರಿಗಳು ಬರುತ್ತಿದ್ದಾರೆ. ತಡವಾಗಿ ಬಂದವರನ್ನು ಒಳಗೆ ಬಿಡಬೇಡಿ. ಬಾಗಿಲು ಹಾಕಿ ಎಂದು ಬೇರೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಮೊದಲ ದಿನದ ಕಾರ್ಯಾಗಾರಕ್ಕೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರು. ನನಗೆ ಮೊದಲ ದಿನದ ತರಬೇತಿಯಲ್ಲೇ ಬೇಸರತರಿಸಿದೆ. ಮುಂದಿನ ದಿನಗಳಲ್ಲಿ ಈ ರೀತಿ ಆಗಬಾರದು ಎಂದು ಖಡಕ್ ವಾರ್ನಿಂಗ್ ನೀಡಿದರು. ಯಾರು ಒಳಬರದಂತೆ ಎಲ್ಲಾ ಬಾಗಿಲು ಮುಚ್ಚಿಸಿ ಎಂದು ಜಿಲ್ಲಾಧಿಕಾರಿ ಸೂಚಿಸಿದ ಹಿನ್ನೆಲೆ ತರಬೇತಿಯಿಂದ ಹೊರಗುಳಿದ ಸಿಬ್ಬಂದಿ ಒಳಹೋಗಲು ಹರಸಾಹಸ ಪಟ್ಟ ದೃಶ್ಯ ಕಂಡು ಬಂತು.

ಮಾದರಿ ಚುನಾಣಾ ನೀತಿ ಸಂಹಿತೆ ಕುರಿತು ಅಧಿಕಾರಿಗಳಿಗೆ ಸ್ವತಃ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ತರಬೇತಿ ನೀಡುತ್ತಿದ್ದಾರೆ. ಮೈಸೂರು ಕೊಡಗು, ಚಾಮರಾಜನಗರ ಕ್ಷೇತ್ರದ ಚುನಾವಣೆ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದ್ದು, ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸುವುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುತ್ತಿದೆ.












Click it and Unblock the Notifications