ವಿದುಷಿ ರಾಜಮ್ಮ ಕೇಶವಮೂರ್ತಿ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ

ಮೈಸೂರು, ಸೆಪ್ಟೆಂಬರ್ 21: ಮೈಸೂರು ದಸರಾ ಮಹೋತ್ಸವದ ನೆಚ್ಚಿನ ಕಾರ್ಯಕ್ರಮ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅರಮನೆ ಆವರಣದಲ್ಲಿ ಚಾಲನೆ ನೀಡಿದರು.

ವೈಭವದ ದಸರಾ ವಿಶೇಷ ಪುಟ

ವಿದುಷಿ ರಾಜಮ್ಮ ಕೇಶವಮೂರ್ತಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ನೀಡಿ ಗೌರವಿಸಿದರು. ಬಳಿಕ ಮಾತನಾಡಿದ ಅವರು, ರಾಜಮ್ಮ ಕೇಶವಮೂರ್ತಿ ದೀರ್ಘ ಕಾಲ ಸಂಗೀತ ಕ್ಷೇತ್ರಕ್ಕೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 85 ವರ್ಷ ಆಗಿದ್ದರೂ ಅವರ ಕಂಠಸಿರಿ ಅದ್ಭುತವಾಗಿದೆ. ಮಾಧುರ್ಯವಾಗಿದೆ. ಸರ್ಕಾರ ಹೊಸ ಸಾಂಸ್ಕೃತಿಕ ನೀತಿಯನ್ನು ಪ್ರಕಟಿಸಿದ್ದು, ನೀತಿಯ ಪ್ರಕಾರ ಈ ಹಿಂದೆ ಪ್ರಶಸ್ತಿ ಗೆ ನೀಡುತ್ತಿದ್ದ 3 ಲಕ್ಷ ರೂ. ನಗದನ್ನು 5 ಲಕ್ಷ ರೂ. ಗೆ ಹೆಚ್ಚಿಸಿದೆ. ಅದರಂತೆ ಮೊದಲ ಬಾರಿಗೆ ಈ ಬಾರಿ ರಾಜಮ್ಮ ಕೇಶವಮೂರ್ತಿ ಅವರಿಗೆ ನೀಡಲಾಗಿದೆ. ಅವರ ಇಡೀ ಕುಟುಂಬವೇ ಸಂಗೀತಮಯವಾಗಿದೆ.

Mysuru Dasara: Vidwan award to Singer Rajamma Keshavamurthy

ಮಕ್ಕಳು, ಮೊಮ್ಮಕ್ಕಳು ಕೂಡ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ಕಲಾ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ನನಗೆ ಸಂಗೀತದ ಬಗ್ಗೆ ಜ್ಞಾನವಿಲ್ಲ. ಆದರೆ ಸಂಗೀತ ಕೇಳಿ ಆನಂದ ಪಡುತ್ತೇನೆ ಎಂದರು.

In Pics : ಖಾಸಗಿ ದರ್ಬಾರ್ ನಲ್ಲಿ ಯದುವೀರರಿಗೆ ತ್ರಿಷಿಕಾರಿಂದ ಪೂಜೆ

ವಿದ್ವಾನ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಾಜಮ್ಮ ಕೇಶವಮೂರ್ತಿ, ಇದು ನನ್ನ ಜೀವನದ ಅತ್ಯುನ್ನತ ಕ್ಷಣ. ಅತ್ಯುನ್ನತ ಕಲಾ ಪ್ರಶಸ್ತಿಗಳಲ್ಲಿ ಒಂದಾದ ವಿದ್ವಾನ್ ಪ್ರಶಸ್ತಿ ನೀಡಿ ಗೌರವಿಸಿದ್ದಕ್ಕೆ ನಾನು ಚಿರಋಣಿ. ಕಲಾವಿದನಿಗೆ ಇದಕ್ಕಿಂತ ಮತ್ತೊಂದು ಸಂತೋಷವಿಲ್ಲ. ಯಾವ ಶಿಫಾರಸ್ಸು ಇಲ್ಲದೆ ನನ್ನನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿದೆ. ದೇಶದ ಯಾವ ಸರ್ಕಾರಗಳೂ ನೀಡದ ಪ್ರಶಸ್ತಿಯನ್ನು ಈ ಸರ್ಕಾರ ಕಲಾವಿದರಿಗೆ ನೀಡಿ ಗೌರವಿಸುತ್ತಿದೆ. ನನಗೆ ತುಂಬಾ ಸಂತಸವಾಗಿದೆ ಎಂದರು. ಮಾತಿಗೂ ಮುನ್ನ ಮಾಣಿಕ್ಯ ವೀಣಾಂ ಉಪಲಾಲಯಂತೀಂ ಮದಾಲಸಾಂ ಮಂಜುಲ ವಾಗ್ವಿಲಾಸಾಂ ಗೀತೆಯನ್ನು ಹಾಡಿಜನಮನ ಸೂರೆಗೊಂಡರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+