ಮೈಸೂರು: ಗೋಡೆಗಳ ಮೇಲೆ ಅರಮನೆ ನಗರಿ ವೈಭವ

ಮೈಸೂರು, ಆಗಸ್ಟ್ 29: ಪ್ರವಾಸಿ ಪ್ರಿಯ ನಗರ ಮೈಸೂರು ನಾಡಹಬ್ಬ ದಸರೆಗೆ ಸಿದ್ಧಗೊಳ್ಳುತ್ತಿದೆ, ಅಂತೆಯೆ ನಗರ ಮೈಕೊಡವಿಕೊಂಡು ಹೊಸ ಉತ್ಸಾಹದಿಂದ ಪುಟಿಯುತಿದೆ. ನಗರಕ್ಕೆ ಬರುವ ಪ್ರತಿ ಪ್ರವಾಸಿಯು ಹುಬ್ಬೇರಿಸುವಂತೆ ಗೋಡೆ ಕಲಾಕೃತಿಗಳೆ ಈ ಬಾರಿ ದಸರೆಗೆ ಸ್ವಾಗತಿಸಲಿದೆ.

ಹೌದು ಈಗ ನಗರದಲ್ಲಿ ಗೋಡೆ ಚಿತ್ತಾರದ ಕಾರ್ಯ ಬರದಿಂದ ನಡೆಯುತ್ತಿದೆ, ಜಿಲ್ಲಾಡಳಿತ ಹಾಗೂ ಮೈಸೂರು ಮಹಾನಗರ ಪಾಲಿಕೆ ಜೊತೆಯಾಗಿ ನಗರದ ಸೌಂದರ್ಯವನ್ನು ಪ್ರವಾಸಿಗರಿಗೆ ಪರಿಚಯಿಸುವ ಹೆಜ್ಜೆ ಇಟ್ಟಿದೆ. ದಸರಾ ಆನೆಗಳು, ಅಂಬಾರಿ, ಅಲಂಕಾರಗೊಂಡ ಅಶ್ವ, ಬೆಟ್ಟದ ಮೇಲೆ ನಿಂತ ಮಹಿಷ ಮತ್ತು ಮಹಾನಂದಿ. ಇಷ್ಟೆ ಅಲ್ಲದೆ ಡಫೆರಿನ್ ಕ್ಲಾಕ್ ಟವರ್ ಇನ್ನು ಮುಂತಾದ ಪ್ರೇಕ್ಷಣೀಯ ತಾಣಗಳನ್ನು ಗೋಡೆಗಳ ಮೇಲೆ ಕಣ್ತುಂಬಿಕೊಳ್ಳಬಹುದು.

Mysuru Dasara: District administration releases Rs 10 lakh for wall painting

ನಗರ ಅಂದಗೊಳಿಸುವ ಕಾರ್ಯಕ್ಕೆ ಪಾಲಿಕೆ ಮುಂದಾಗಿದ್ದು ಜಿಲ್ಲಾಡಳಿತ ಸಹಕಾರಿಯಾಗಿ ಬೆನ್ನೇಲುಬಿಗೆ ನಿಂತಿದೆ, ಈಗಾಗಲೆ ಮೃಗಾಲಯದ ಗೋಡೆಗಳ ಮೇಲೆ ಚಿತ್ರಬಿಡಿಸಲಾಗಿದೆ. ಇದು ಮುಂದುವರಿದು ನಗರದ ಹೃದಯ ಬಾಗದಲ್ಲಿ ಅರಮನೆ ಮತ್ತು ಪ್ರಮುಖ ತಾಣಗಳ ಗೋಡೆಗಳನ್ನು ಆಯ್ಕೆಮಾಡಲಾಗಿದೆ.

ದಸರ ವಿಶೇಷಾಧಿಕಾರಿ ಮತ್ತು ಜಿಲ್ಲಾಧಿಕಾರಿ ಡಿ. ರಂದೀಪ್,ಮೈಸೂರು ನಗರ ಪೋಸ್ಟರ್ ಮುಕ್ತವಾಗಿ ಹೊರಹೊಮ್ಮಲಿದ್ದು ಮೊದಲ ಭಾಗವಾಗಿ ಗೋಡೆ ಚಿತ್ರಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಹಾಗೆಯೆ ದಸರೆಗೆ ಪ್ರವಾಸಿಗರನ್ನು ಆಕರ್ಷಿಸಲು ಇದು ಸಹಕಾರಿಯಾಗಲಿದೆ. ಇದಕ್ಕಾಗಿ ಜಿಲ್ಲಾಡಳಿತ ರೂ. 10 ಲಕ್ಷಗಳನ್ನು ಮಹಾನಗರ ಪಾಲಿಕೆಗೆ ನೀಡಲಾಗಿದೆ.

Recommended Video

      Mysuru is all set to welcome Dasara | 4 more Elephants added for Jamboosavari
      Mysuru Dasara: District administration releases Rs 10 lakh for wall painting

      ಇನ್ನು ಈ ಕುರಿತಾಗಿ ಮಾಹಿತಿ ನೀಡಿದ ಪಾಲಿಕೆ ಆಯುಕ್ತ ಜಿ. ಜಗದೀಶ್, 15 ಮಂದಿ ಪರಿಣತ ಕಲಾವಿದರು ಚಿತ್ರಕಾರ್ಯದಲ್ಲಿ ತೊಡಗಿದ್ದು, ಗನ್ ಹೌಸ್ ಬಳಿಮತ್ತು ಪಾಲಿಕೆ ಹಿಂಭಾಗ ಚಿತ್ರಕಾರ್ಯ ಬರದಿಂದ ನಡೆಯುತಿದೆ. ಜಿಲ್ಲಾಡಳಿತಕ್ಕೆ ನಾವು ಧನ್ಯವಾದ ಅರ್ಪಿಸುತ್ತವೆ. ಈ ನಗರ ಸೌಂದರ್ಯ ಚಟುವಟಿಕೆ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+