Get Updates
Get notified of breaking news, exclusive insights, and must-see stories!

Dasara Gold Card 2024: ಮೈಸೂರು ದಸರಾ ಗೋಲ್ಡ್‌ ಕಾರ್ಡ್‌, ಟಿಕೆಟ್: ದರ, ಸೌಲಭ್ಯ ಮಾಹಿತಿ

ಮೈಸೂರು, ಸೆಪ್ಟೆಂಬರ್ 25: ಸಾಂಸ್ಕೃತಿಕ ನಗರಿ ಮೈಸೂರು ದಸರಾ ಮಹೋತ್ಸವ-2024ಕ್ಕೆ ತಯಾರಾಗುತ್ತಿದೆ. ಮೈಸೂರು ದಸರಾ ವೀಕ್ಷಣೆ ಮಾಡಲು ದೇಶ-ವಿದೇಶದ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ. ಮೈಸೂರು ಜಿಲ್ಲಾಡಳಿತ ದಸರಾ ವೀಕ್ಷಣೆಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ದಸರಾ ಗೋಲ್ಡ್ ಕಾರ್ಡ್ ಬಿಡುಗಡೆ ಮಾಡುತ್ತದೆ. 2024ನೇ ಸಾಲಿನ ದಸರಾ ಗೋಲ್ಡ್‌ ಕಾರ್ಡ್ ಬಿಡುಗಡೆ ಮಾಡಲಾಗಿದೆ, ಇದರಲ್ಲಿ ಸಿಗುವ ಸೌಲಭ್ಯಗಳ ಮಾಹಿತಿ ನೀಡಲಾಗಿದೆ.

ಈ ಬಾರಿಯ ಮೈಸೂರು ದಸರಾ ಅಕ್ಟೋಬರ್ 3ರ ಗುರುವಾರ ರಿಂದ ಅಕ್ಟೋಬರ್ 12ರ ಶನಿವಾರದ ತನಕ ನಡೆಯಲಿದೆ. ಖ್ಯಾತ ಸಾಹಿತಿ ಹಂಪಾ ನಾಗರಾಜಯ್ಯ ಅಕ್ಟೋಬರ್ 3ರ ಬೆಳಗ್ಗೆ 9 ಗಂಟೆಗೆ ಮೈಸೂರು ದಸರಾ-2024 ಉದ್ಘಾಟಿಸಲಿದ್ದಾರೆ. ಅಕ್ಟೋಬರ್ 12ರಂದು ಐತಿಹಾಸಿಕ ಜಂಬೂ ಸವಾರಿ ಮತ್ತು ಪಂಜಿನ ಕವಾಯತು ನಡೆಯಲಿದೆ.

Mysuru Dasara 2024 Gold Card Jumbo Savari And Torchlight Ticket Fare

ಮೈಸೂರು ದಸರಾ ವಿಶೇಷಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ ಕಾರ್ಯಾಲಯ, ಮೈಸೂರು ಜಿಲ್ಲೆ ದಸರಾ ಗೋಲ್ಡ್ ಕಾರ್ಡ್-2024 ಬಿಡುಗಡೆ ಮಾಡಿದ್ದಾರೆ. ನಾಡಹಬ್ಬ ಮೈಸೂರು ದಸರಾ-2024ರ ಜಂಬೂಸವಾರಿ ಹಾಗೂ ಪಂಜಿನ ಕವಾಯತು ವೀಕ್ಷಣೆಗೆ ಗೋಲ್ಡ್ ಕಾರ್ಡ್ ಹಾಗೂ ಟಿಕೆಟ್‌ಗಳ ಮಾರಾಟದ ಬಗ್ಗೆ ಎಂದು ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.

ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2024 ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಮೈಸೂರು ದಸರಾ-2024ರ ಸಂಬಂಧ ದಿನಾಂಕ 12.10.2024ರಂದು ನಡೆಯಲಿರುವ ಜಂಬೂಸವಾರಿ ಹಾಗೂ ಪಂಜಿನ ಕವಾಯತು ಕಾರ್ಯಕ್ರಮಗಳ ವೀಕ್ಷಣೆಗೆ ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಗೋಲ್ಡ್ ಕಾರ್ಡ್ ಹಾಗೂ ಟಿಕೆಟ್‌ಗಳನ್ನು ಆನ್‌ಲೈನ್ ಮುಖಾಂತರ ಮಾರಾಟ ಮಾಡಲು ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ದಸರಾ ಕಾರ್ಯಕ್ರಮಗಳ ವೀಕ್ಷಣೆಗೆ ಮೈಸೂ ದಸರಾ-2024ರ ಅಧಿಕೃತ ಜಾಲತಾಣ https://www.mysoredasara.gov.in/ ರಲ್ಲಿ ದಿನಾಂಕ 26.09.2024 ರಿಂದ 30.09.2024ರ ವರೆಗೆ 5 ದಿನಗಳ ಕಾಲ ಆನ್‌ಲೈನ್ ಮೂಲಕ ಖರೀದಿಸಲು ಅವಕಾಶ ಕಲ್ಪಿಸಲಾಗಿರುತ್ತದೆ. ಸಾರ್ವಜನಿಕರು ಸೌಲಭ್ಯದ ಸದುಪಯೋಗ ಪಡೆದುಕೊಂಡು ಟಿಕೆಟ್‌ಗಳನ್ನು ಖರೀದಿಸಬಹುದಾಗಿರುತ್ತದೆ.

ಟಿಕೆಟ್‌ಗಳ ದರ ಹಾಗೂ ಸೌಲಭ್ಯ ವಿವರ

* ಟಿಕೆಟ್ ಮಾರಾಟ ಪ್ರಾರಂಭದ ದಿನಾಂಕ 26.09.2024

* ಟಿಕೆಟ್‌ಗಳನ್ನು ಮೈಸೂರು ದಸರಾ-2024ರ ಅಧಿಕೃತ ಜಾಲ ತಾಣ https://www.mysoredasara.gov.in/ ಮೂಲಕ ಖರೀದಿಸಿ

* ಅರಮನೆ ಆವರಣದೊಳಗೆ ಜಂಬೂ ಸವಾರಿ ವೀಕ್ಷಣೆಗೆ ಟಿಕೆಟ್ ಮೊತ್ತ ರೂಪಾಯಿ 3,500 ಒಬ್ಬರಿಗೆ (ಜಂಬೂ ಸವಾರಿ ವೀಕ್ಷಣೆಗೆ ಮಾತ್ರ ಅವಕಾಶ)

* ಪಂಜಿನ ಕವಾಯತು ಟಿಕೆಟ್ ಮೊತ್ತ 1000 ರೂ. (ಒಬ್ಬರಿಗೆ)

* ಗೋಲ್ಡ್ ಕಾರ್ಡ್ ಮೊತ್ತ 6,500 ರೂ. (ಒಬ್ಬರಿಗೆ)

* ಗೋಲ್ಡ್‌ ಕಾರ್ಡ್ ಹೊಂದಿರುವವರಿಗೆ ಜಂಬೂಸವಾರಿ, ಪಂಜಿನ ಕವಾಯತು, ಚಾಮುಂಡಿ ಬೆಟ್ಟ, ಚಾಮರಾಜೇಂದ್ರ ಮೃಗಾಲಯ, ಅರಮನೆಗೆ ವೀಕ್ಷಣೆಗೆ ಮಾತ್ರ ಅವಕಾಶ.

* ಒಂದು ಗೋಲ್ಡ್ ಕಾರ್ಡ್/ ಟಿಕೆಟ್‌ನಲ್ಲಿ ಒಬ್ಬರಿಗೆ ಮಾತ್ರ ಪ್ರವೇಶಾವಕಾಶ ಇರುತ್ತದೆ.

2023ರಲ್ಲಿ ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟ ಕಾರಣ ಬರಗಾಲವಿತ್ತು. ಆದ್ದರಿಂದ ಮೈಸೂರು ದಸರಾವನ್ನು ಸರಳವಾಗಿ ಆಚರಿಸಲಾಗಿತ್ತು. ಈ ಬಾರಿ ಉತ್ತಮ ಮಳೆಯಾಗಿ ಎಲ್ಲಾ ಡ್ಯಾಂಗಳು ಭರ್ತಿಯಾಗಿದ್ದು, ಅದ್ದೂರಿಯಾಗಿ ದಸರಾ ಆಚರಣೆ ಮಾಡಲಾಗುತ್ತಿದೆ. ಮೈಸೂರು ನಗರದ ದೀಪಾಲಂಕಾರ ದಸರಾ ಸಂದರ್ಭದಲ್ಲಿ ಗಮನ ಸೆಳೆಯುತ್ತದೆ. ಜಂಬೂ ಸವಾರಿ ಮುಕ್ತಾಯಗೊಂಡ ಬಳಿಕವೂ ದೀಪಾಲಂಕಾರವನ್ನು ನೋಡಲು ಈ ಬಾರಿಯೂ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+