Get Updates
Get notified of breaking news, exclusive insights, and must-see stories!

ಮೈಸೂರು ದಸರಾ ತಯಾರಿ: ಫಿರಂಗಿ ಸದ್ದಿಗೆ ಬೆದರಿದ ಗಜಪಡೆ, ಅಶ್ವದಳ

ಮೈಸೂರು, ಸೆಪ್ಟೆಂಬರ್ 30: ವಿಶ್ವವಿಖ್ಯಾತ ದಸರಾ ಜಂಬೂಸವಾರಿ ಮೆರವಣಿಗೆಗೆ ದಿನಗಣನೆ ಆರಂಭವಾಗಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಎಲ್ಲಾ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಈ ನಡುವೆ ದಸರಾ ಜಂಬೂಸವಾರಿ ದಿನದ ಪೂರ್ವ ತಯಾರಿ ಹಿನ್ನೆಲೆಯಲ್ಲಿ ದಸರಾ ಗಜಪಡೆ ಮತ್ತು ಅಶ್ವರೋಹಿ ಪಡೆಗಳಿಗೆ ಸಿಡಿಮದ್ದು ಸಿಡಿಸುವ ತಾಲೀಮು ನೀಡಲಾಯಿತು.

ಅರಮನೆ ಕೋಟೆ ಮಾರಮ್ಮ ದೇವಾಲಯದ ಆವರಣದಲ್ಲಿ ನಡೆದ ತಾಲೀಮಿನಲ್ಲಿ ದಸರಾ ಗಜಪಡೆಯ ಎಂಟು ಆನೆಗಳು ಹಾಗೂ ಅಶ್ವರೋಹಿ ಪಡೆಯ ಕುದುರೆಗಳಿಗೆ ಕುಶಾಲತೋಪು ಸಿಡಿಸುವ ತಾಲೀಮು ನಡೆಸಲಾಯಿತು. ಜಂಬೂಸವಾರಿ ದಿನದಂದು ಮೆರವಣಿಗೆ ಆರಂಭಕ್ಕೂ ಮುನ್ನ 21 ಸುತ್ತು ಸಿಡಿಮದ್ದು ಸಿಡಿಸಲಾಗುವುದು. ಹೀಗಾಗಿ ಆನೆಗಳು ಹಾಗೂ ಕುದುರೆಗಳಿಗೆ 7 ಫಿರಂಗಿ ಗಾಡಿಗಳಿಂದ 21 ಸುತ್ತು ಸಿಡಿಮದ್ದು ಸಿಡಿಸಿದ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿ ಗಜಪಡೆ ಮತ್ತು ಅಶ್ವರೋಹಿ ಪಡೆಗಳಿಗೆ ತಾಲೀಮು ನೀಡಿದರು. ಈ ವೇಳೆ ಫಿರಂಗಿ ಸದ್ದಿಗೆ ಗಜಪಡೆ ಹಾಗೂ ಅಶ್ವದಳದ ಕುದುರೆಗಳು ಬೆದರಿದವು.

 ಫಿರಂಗಿ ಸದ್ದಿಗೆ ಅಶ್ವತ್ಥಾಮ ಗಾಬರಿ

ಫಿರಂಗಿ ಸದ್ದಿಗೆ ಅಶ್ವತ್ಥಾಮ ಗಾಬರಿ

ಪ್ರಮುಖವಾಗಿ ಇದೇ ಮೊದಲ ಬಾರಿ ಆಗಮಿಸಿದ ಅಶ್ವತ್ಥಾಮ ಹಾಗೂ ಗೋಪಾಲಸ್ವಾಮಿ ಆನೆಗಳು ಫಿರಂಗಿ ಸದ್ದಿಗೆ ಗಾಬರಿಗೊಂಡಿವೆ. ಇನ್ನು ಫಿರಂಗಿ ಸದ್ದಿಗೆ ಲಕ್ಷ್ಮಿ ಹಾಗೂ ಧನಂಜಯ ಆನೆಗಳು ಬೆದರಿ ಹಿಂದೆ ತಿರುಗಿ ನಿಂತವು.‌ ಆದರೆ ಸ್ಥಳದಲ್ಲಿದ್ದ ಮಾವುತರು ಹಾಗೂ ಕಾವಾಡಿಗಳು ಗಾಬರಿ ಆಗಿದ್ದ ಆನೆಗಳನ್ನು ಸಮಾಧಾನಪಡಿಸಿದರು. ಸಿಡಿಮದ್ದು ಸಿಡಿಸುವ ತಾಲೀಮಿನ ವೇಳೆ ಡಿಸಿಎಫ್ ಕರಿಕಾಳನ್, ನಗರ ಪೊಲೀಸ್ ಕಮಿಷನರ್ ಡಾ. ಚಂದ್ರಗುಪ್ತ ಸ್ಥಳದಲ್ಲಿದ್ದರು.
ಇಂದಿನಿಂದ ಶುರುವಾಗಿರುವ ಕುಶಾಲತೋಪು ಸಿಡಿಸುವ ತಾಲೀಮು ಮೂರು ಹಂತಗಳಲ್ಲಿ ನಡೆಯಲಿದೆ. ಅಲ್ಲದೇ ಕುಶಾಲತೋಪು ಸಿಡಿಸುವ ಕಾರ್ಯದಲ್ಲಿ ಪಾಲ್ಗೊಳ್ಳಲಿರುವ ನಗರ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿ, ಈಗಾಗಲೇ ಪ್ರತಿನಿತ್ಯ ಕುಶಾಲತೋಪು ಡ್ರೈ ಪ್ರಾಕ್ಟೀಸ್ ಮಾಡುತ್ತಿದ್ದಾರೆ.

 ನಾಳೆ ಅಭಿಮನ್ಯುಗೆ ಮರದ ಅಂಬಾರಿ

ನಾಳೆ ಅಭಿಮನ್ಯುಗೆ ಮರದ ಅಂಬಾರಿ

ಮತ್ತೊಂದೆಡೆ ದಸರಾ ಜಂಬೂಸವಾರಿ ಮೆರವಣಿಗೆ ಹಿನ್ನೆಲೆಯಲ್ಲಿ ಅಭಿಮನ್ಯು ಸಾರಥ್ಯದ ಗಜಪಡೆಗೆ ವಿವಿಧ ಹಂತಗಳ ತಾಲೀಮು ನಡೆಸಲಾಗುತ್ತಿದೆ. ಈ ನಡುವೆ ಇದರ ಮತ್ತೊಂದು ಭಾಗವಾಗಿ ಅಕ್ಟೋಬರ್ 1ರಿಂದ ಅಭಿಮನ್ಯುವಿಗೆ ಮರದ ಅಂಬಾರಿ ಹೊರಿಸಿ ತಾಲೀಮು ನೀಡಲಾಗುತ್ತದೆ. ನಾಳೆ 9.25ರಿಂದ 10.30ರ ಒಳಗೆಡೆ ಅಂಬಾರಿ ಕಟ್ಟುವ ಪ್ರಕ್ರಿಯೆ ನಡೆಯಲಿದ್ದು, ಇದಾದ ನಂತರ ಪ್ರತಿದಿನದಂತೆ ಅರಮನೆ ಆವರಣದಲ್ಲಿ ತಾಲೀಮು ನಡೆಸಲಾಗುತ್ತದೆ. ದಿನಕ್ಕೊಂದರಂತೆ ಒಟ್ಟು ಮೂರು ಆನೆಗಳಿಗೆ ಅಂಬಾರಿ ಕಟ್ಟಿ ತಾಲೀಮು ನೀಡಲಿದ್ದು, 750 ಕೆ.ಜಿ ತೂಕದ ಚಿನ್ನದ ಅಂಬಾರಿ ತೂಕವನ್ನು ಹೋಲುವ ನಿಟ್ಟಿನಲ್ಲಿ ಮರದ ಅಂಬಾರಿ ಜೊತೆಗೆ ಗಾದಿ ಸೇರಿದಂತೆ ಸುಮಾರು 800 ಕೆಜಿ ತೂಕವನ್ನು ಹೊರಿಸಲಾಗುವುದು.

 ಸಂಪ್ರದಾಯವನ್ನು ಗಾಳಿಗೆ ತೂರಿದ ಸರ್ಕಾರ

ಸಂಪ್ರದಾಯವನ್ನು ಗಾಳಿಗೆ ತೂರಿದ ಸರ್ಕಾರ

ವಿಶ್ವವಿಖ್ಯಾತ ದಸರಾ ಉದ್ಘಾಟನೆಗೆ ಮಾಜಿ ಸಿಎಂ ಎಸ್.ಎಂ. ಕೃಷ್ಣ ಆಯ್ಕೆ ವಿಚಾರಕ್ಕೆ ವಾಟಾಳ್ ನಾಗರಾಜ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಅವರು, "ಬಿಜೆಪಿ ಸರ್ಕಾರ ದಸರಾ ಸಂಪ್ರದಾಯವನ್ನು ಗಾಳಿಗೆ ತೂರಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ವೈಯಕ್ತಿಕವಾಗಿ ಎಸ್.ಎಂ. ಕೃಷ್ಣರ ಬಗ್ಗೆ ಗೌರವ ಇದೆ. ಆದರೆ ದಸರಾ ಉದ್ಘಾಟನೆಗೆ ಆಯ್ಕೆ ಮಾಡಿರುವುದು ಸರಿಯಲ್ಲ. ಹಿಂದಿನಿಂದಲೂ ದಸರಾಗೆ ತನ್ನದೇ ಆದ ಸಂಪ್ರದಾಯವಿದೆ. ಅದನ್ನು ಬಿಜೆಪಿ ಸರ್ಕಾರ ಬೆಳೆಸಿಕೊಂಡು ಹೋಗಬೇಕು. ಅದು ಬಿಟ್ಟು ತನ್ನಿಷ್ಟದಂತೆ ದಸರಾ ಆಚರಣೆ ಮಾಡುತ್ತಿರುವುದು ಸರಿಯಲ್ಲ," ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

 ವಿಜೃಂಭಣೆಯ ದಸರಾ ಆಚರಿಸಿ

ವಿಜೃಂಭಣೆಯ ದಸರಾ ಆಚರಿಸಿ

ಇದಕ್ಕೂ ಮುನ್ನ ಸರಳ ದಸರಾ ಆಚರಿಸುತ್ತಿರುವ ಸರ್ಕಾರದ ವಿರುದ್ಧ ಮೈಸೂರಿನ ಹಾರ್ಡಿಂಗ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್, "ಸರಳ ದಸರಾ ಬೇಡ, ಅದ್ಧೂರಿ ದಸರಾ ಬೇಕು. ಈ ಬಾರಿಯ ದಸರಾ ಜನಸಾಮಾನ್ಯರ ದಸರಾವಾಗಿ ಆಚರಣೆಯಾಗುತ್ತಿಲ್ಲ. ದಸರಾವನ್ನು ಬಿಜೆಪಿ ಸರ್ಕಾರ ತನ್ನ ಇಷ್ಟದಂತೆ ಮಾಡುತ್ತಿದೆ. ಉಸ್ತುವಾರಿ ಸಚಿವರಿಗೆ ಮಾತ್ರ ದಸರಾ ಆಗುತ್ತಿದೆ. ಜನಸಾಮಾನ್ಯರ ದಸರಾ ಆಗುತ್ತಿಲ್ಲ. ಜಂಬೂಸವಾರಿ ಮೆರವಣಿಗೆ ಅರಮನೆ ಆವರಣಕ್ಕೆ ಸೀಮಿತವಾಗಬಾರದು. ಬನ್ನಿಮಂಟಪದ ಜಂಬೂಸವಾರಿ ಮೆರವಣಿಗೆ ಮಾಡಿ ಜನರು ನೋಡಲು ಅವಕಾಶ ಕೊಡಬೇಕು," ಎಂದು ಒತ್ತಾಯ ಮಾಡಿದರು.
ಅರಮನೆಯಲ್ಲಿ ದಸರಾಗೆ ಸಿದ್ಧತೆ ಜೋರಾಗಿದೆ. ನಾಳೆ ಸಿಂಹಾಸನ ಜೋಡಣೆ ನಡೆಯಲಿದ್ದು, ಆಡಳಿತ ಮಂಡಳಿ ಸಕಲ ತಯಾರಿ ನಡೆಸಿದೆ. ಅಭಿಜಿತ್ ಲಗ್ನದಲ್ಲಿ ಸಿಂಹಾಸನ ಜೋಡಣೆ ನಡೆಯಲಿದೆ. ಜತೆಗೆ ಹೋಮ- ಹವನ ಕೂಡ ಜರುಗಲಿದೆ. ದರ್ಬಾರ್ ಹಾಲ್‌ನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಪ್ರವಾಸಿಗರಿಗೆ ಹಾಗೂ ಸಾರ್ವಜನಿಕರಿಗೆ ಅರಮನೆ ಪ್ರವೇಶ ನಿರ್ಬಂಧಿಸಲಾಗಿದೆ.

 ಅ.7ಕ್ಕೆ ದಸರಾ ಉದ್ಘಾಟನೆ

ಅ.7ಕ್ಕೆ ದಸರಾ ಉದ್ಘಾಟನೆ

ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ಆಗಲಿದ್ದು, ಹಿರಿಯ ರಾಜಕೀಯ ಮುತ್ಸದ್ದಿ ಎಸ್.ಎಂ. ಕೃಷ್ಣ ನಾಡಹಬ್ಬಕ್ಕೆ ಚಾಲನೆ ನೀಡಲಿದ್ದಾರೆ. ಅಂದಿನಿಂದ ಯದುವೀರ್ ಶ್ರೀಕಂಠದತ್ತ ಒಟೆಯರ್ ಖಾಸಗಿ ದರ್ಬಾರ್ ನಡೆಸಲಿದ್ದಾರೆ. 14ರಂದು ಆಯುಧ ಪೂಜೆ ಬೆಳಗ್ಗೆ 11.02 ರಿಂದ 11.22ರ ಶುಭ ಲಗ್ನದಲ್ಲಿ ಪೂಜೆ ನೆರವೇರಲಿದೆ. 15ರಂದು ವಿಜಯ ದಶಮಿ ನಡೆಯಲಿದೆ.
ದಸರಾ ಬಂತು ಅಂದರೆ ಮೈಸೂರಿನಲ್ಲಿ ಎಲ್ಲಿಲ್ಲದ ಸಂಭ್ರಮ. ಬೇರೆ ಬೇರೆ ಊರುಗಳಿಂದ ಪ್ರವಾಸಿಗರು ಬರುತ್ತಾರೆ. ಈ ಬಾರಿಯೂ ಸಹ ಕೊರೊನಾ ಬಳಿಕ ಪ್ರವಾಸೋದ್ಯಮ ಕಳೆಗಟ್ಟಿದ್ದು, ಪ್ರವಾಸಿಗರ ಸ್ವಾಗತಕ್ಕೆ ಮೈಸೂರು ಸಜ್ಜಾಗಿದೆ. ಇಡೀ ಮೈಸೂರು ಪೂರ್ತಿ ದೀಪಾಲಂಕಾರ ಮಾಡಲಾಗುತ್ತಿದ್ದು, ಅರಮನೆ ನಗರಿ ಕಂಗೊಳಿಸಲಿದೆ. ಪ್ರಮುಖ ರಸ್ತೆಗಳಲ್ಲಿ ಸಿದ್ಧತೆ ಜೋರಾಗಿದ್ದು, ದೀಪಾಲಂಕಾರ ಕಣ್ತುಂಬಿಕೊಳ್ಳಲು ಜನರು ಕಾತುರರಾಗಿದ್ದಾರೆ. ಅ.7ರಿಂದ ಝಗಮಗಿಸಲು ಮೈಸೂರು ಸಜ್ಜಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+