• search
 • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರು ದಸರಾ ಉದ್ಘಾಟನೆ LIVE: ಇದು ನನ್ನ ಪೂರ್ವಜನ್ಮದ ಪುಣ್ಯ ಎಂದ ಸುಧಾಮೂರ್ತಿ

By ಯಶಸ್ವಿನಿ ಎಂ.ಕೆ.
|
   Mysore Dasara 2018 : ಮೈಸೂರು ದಸರಾಗೆ ವಿಧ್ಯುಕ್ತ ಚಾಲನೆ ನೀಡಿದ ಸುಧಾ ಮೂರ್ತಿ ಹಾಗು ಎಚ್ ಡಿ ಕೆ

   ಮೈಸೂರು, ಅಕ್ಟೋಬರ್ 10: ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ವಿಧ್ಯುಕ್ತ ಚಾಲನೆ ದೊರೆತಿದೆ.

   ಇಂದಿನಿಂದ 10 ದಿನಗಳ ಕಾಲ ನಡೆಯಲಿರುವ ಸಂಭ್ರಮದ ದಸರಾಕ್ಕೆ ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ, ಸಾಹಿತಿ ಸುಧಾಮೂರ್ತಿ ಅವರು ವಿಧ್ಯುಕ್ತ ಚಾಲನೆ ಚಾಲನೆ ನೀಡಿದ್ದಾರೆ..

   ಮೈಸೂರು ದಸರಾಕ್ಕೂ ತಟ್ಟಿದ ಚುನಾವಣಾ ನೀತಿ ಸಂಹಿತೆ ಬಿಸಿ

   Mysuru Dasara 2018 Inauguration: LIVE updates

   ದಸರಾ ಉದ್ಘಾಟನೆ - ಸಾಮಾನ್ಯಳಿಗೆ ಸಿಕ್ಕ ದೊಡ್ಡ ಸನ್ಮಾನ : ಸುಧಾ ಮೂರ್ತಿ

   ಹತ್ತು ದಿನಗಳ ಕಾಲವೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ನಾಡಿನ ಸಾಂಸ್ಕೃತಿಕ ಸೊಗಡಿಗೆ ಕನ್ನಡಿ ಹಿಡಿಯಲಿವೆ. ದಸರಾ ಸಂಭ್ರಮವನ್ನು ಕಣ್ತುಂಬಿಸಿಕೊಳ್ಳಲು ದೇಶ-ವಿದೇಶಗಳಿಂದ ಲಕ್ಷಾಂತರ ಜನ ಆಗಮಿಸಲಸಿದ್ದು, ವಿಜಯ ದಶಮಿ ದಿನ ನಡೆಯುವ ಜಂಬೂ ಸವಾರಿ ವಿಶ್ವ ಪ್ರಸಿದ್ಧಿ ಗಳಿಸಿದೆ.

   ದಸರಾಕ್ಕೆ ಕ್ಷಣಗಣನೆ: ಮಧುವಣಗಿತ್ತಿಯಂತೆ ಸಿಂಗಾರಗೊಂಡ ಸಾಂಸ್ಕೃತಿಕ ನಗರಿ

   Mysuru Dasara 2018 Inauguration: LIVE updates

   ನಾಡಹಬ್ಬದ ಮನಸೂರೆಗೊಳ್ಳುವ ಚಿತ್ರಗಳ ಆಲ್ಬಂ

   ಈಗಾಗಲೇ ದಸರಾ ಉದ್ಘಾಟನೆಯಾಗಿದ್ದು, ಅದರ ಕ್ಷಣ ಕ್ಷಣದ ಮಾಹಿತಿಯನ್ನು 'ಒನ್ಇಂಡಿಯಾ ಕನ್ನಡ' ನೀಡಲಿದೆ.

   Newest First Oldest First
   10:37 AM, 10 Oct
   ಹೊಸ ಬಸ್ ಗಳಿಗೆ ಸಿಎಂ ಕುಮಾರಸ್ವಾಮಿ ಮತ್ತು ಸಾರಿಗೆ ಸಚಿವ ಡಿ ಸಿ ತಮ್ಮಣ್ಣ ಚಾಲನೆ ನೀಡಿದರು
   10:36 AM, 10 Oct
   ನಾಡ ಹಬ್ಬ ದಸರಾ ಹಿನ್ನೆಲೆಯಲ್ಲಿ ಕೆಎಸ್ ಆರ್ ಟಿಸಿ ಯಿಂದ 50 ಹೆಚ್ಚುವರಿ ಬಸ್ ಬಿಡಲು ವ್ಯವಸ್ಥೆ ಮಾಡಲಾಗಿದೆ. ದೇಶ ವಿದೇಶದಿಂದ ಬರುವ ಪ್ರವಾಸಿಗರಿಗೆ ನೆರವಾಗಲಿ ಎಂಬ ಉದ್ದೇಶ.
   10:35 AM, 10 Oct
   ಇಂದು ದಸರಾ ಆಚರಣೆ ಮಾಡುತ್ತಿದ್ದರೆ ಅದು ಮೈಸೂರು ಅರಸರ ಕೊಡುಗೆ. ಅಂತಹ ಕುಟುಂಬದ ರಕ್ತಪಾತಕ್ಕೆ ಕಾರಣವಾಗಿದ್ದು ಟಿಪ್ಪು, ಈ ಹೊತ್ತಿನಲ್ಲಾದರೂ ಮೈಸೂರು ಅರಸರಿಗೆ ಗೌರವ ನೀಡಿ. ನಿಮ್ಮ ಕಾಲದಲ್ಲಾದರೂ ಟಿಪ್ಪು ಜಯಂತಿ ಬಂದ್ ಮಾಡಿ: ಸಂಸದ ಪ್ರತಾಪ್ ಸಿಂಹ ಮನವಿ
   10:34 AM, 10 Oct
   ನಾನು ಸಂತೋಷದಿಂದ ಮುಖ್ಯಮಂತ್ರಿಯಾಗಿಲ್ಲ. ರಾಜಕೀಯ ಪ್ರವೇಶ ಆಕಸ್ಮಿಕ. ನಾಡಿನ ಜನರ ನೆಮ್ಮದಿಗೆ ಸಂಕಲ್ಪ ಮಾಡುತ್ತೇನೆ ಹಣದ ಕೊರತೆ ಇಲ್ಲ. ಸಂಪನ್ಮೂಲಗಳ ಸದ್ಬಳಕೆ ಸಮಗ್ರ ಯೋಜನೆಗಳ ರೂಪಿಸಲು ಬೆಂಬಲ ನೀಡಿ- ಎಚ್ ಡಿ ಕುಮಾರಸ್ವಾಮಿ
   10:33 AM, 10 Oct
   ಸಾಲದ ನೋಟಿಸ್ ಗೆ ಹೆದರಿ ಆತ್ಮಹತ್ಯೆಗೆ ಶರಣಾಗಬೇಡಿ. ಸರಕಾರವನ್ನು ನಂಬಿ ನಿಮ್ಮ ನೆಮ್ಮದಿಯಾಗಿ ಹಲವು ಯೋಜನೆಗಳನ್ನು ರೂಪಿಸುತ್ತೇನೆ. ಆತ್ಮಹತ್ಯೆ ಮಾಡಿಕೊಂಡು ನಿಮ್ಮನ್ನು ನಂಬಿದ ಕುಟುಂಬವನ್ನು ಅನಾಥರನ್ನಾಗಿ ಮಾಡಬೇಡಿ -ಎಚ್ ಡಿ ಕುಮಾರಸ್ವಾಮಿ
   10:32 AM, 10 Oct
   ಕೊಡಗು ಪ್ರವಾಹ ಸಂತ್ರಸ್ಥರಿಗೆ, ನಿರಾಶ್ರಿತರಿಗೆ ಇನ್ಫೋಸಿಸ್ ವತಿಯಿಂದ 25 ಕೋಟಿ ರೂ. ಘೋಷಿಸಿದ ಸುಧಾಮೂರ್ತಿ
   10:30 AM, 10 Oct
   ನಾಡಿನಲ್ಲಿ ನಾ ಕಂಡ ಅಪರೂಪದ ಮಹಿಳೆ ಸುಧಾ ಮೂರ್ತಿ. ನಾಡಿನ ಅಧಿದೇವತೆಗೆ ಸುಧಾಮೂರ್ತಿ ಪೂಜೆ ಸಲ್ಲಿಸಿದರೆ ಎಲ್ಲವೂ ಸುಸೂತ್ರವಾಗಿ ನಡೆಯಲಿದೆ ಎಂಬ ವಿಶ್ವಾಸ ನನಗಿದೆ. ಕೊಡಗಿನಲ್ಲಿ ನೆರೆ ಸಂತ್ರಸ್ತರ ಮನೆ ನಿರ್ಮಾಣಕ್ಕೆ ಸುಧಾಮೂರ್ತಿ ಅವರು ದೇಣಿಗೆ ನೀಡಿದ್ದು ಸಮಾಜ ಸೇವೆಯ ಪ್ರತೀಕ-ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ
   8:30 AM, 10 Oct
   ವೇದಿಕೆಯಲ್ಲಿ ಕೇವಲ ಜೆಡಿಎಸ್ ಮುಖಂಡರು ಮಾತ್ರ ಭಾಗಿ
   8:24 AM, 10 Oct
   ಮಾಜಿ ಸಚಿವ ತನ್ವೀರ್ ಸೇಠ್, ಶಾಸಕ ಯತೀಂದ್ರ ಸಿದ್ದರಾಮಯ್ಯ ಅನುಪಸ್ಥಿತಿ
   8:08 AM, 10 Oct
   ಇಂತಹ ಸರ್ಕಾರದೊಂದಿಗೆ ನಾವು ಕೈ ಜೋಡಿಸುವುದು ನಮ್ಮ ಆದ್ಯ ಕರ್ತವ್ಯ: ಸುಧಾಮೂರ್ತಿ
   8:08 AM, 10 Oct
   ರಾಜ್ಯದ ಏಳಿಗೆಗೆ ಮೈಸೂರು ಮಹಾರಾಜರ ಕೊಡುಗೆ ಅಪಾರ: ದಸರಾ ಉದ್ಘಾಟನೆ ಬಳಿಕ ಸುಧಾಮೂರ್ತಿ ಹೇಳಿಕೆ
   8:07 AM, 10 Oct
   ದಸರಾ ಉದ್ಘಾಟನೆ ಸಿಕ್ಕಿದ್ದು ನನ್ನ ಪೂರ್ವಜನ್ಮದ ಪುಣ್ಯ: ಸುಧಾಮೂರ್ತಿ
   7:54 AM, 10 Oct
   ಸಿಎಂ ಕುಮಾರಸ್ವಾಮಿಗೆ ಮೈಸೂರು ಪೇಟಾ. ಶಾಲು ತೊಡಿಸಿ ಸನ್ಮಾನ
   7:53 AM, 10 Oct
   ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಂದ ಸುಧಾಮೂರ್ತಿಗೆ ಸನ್ಮಾನ
   7:45 AM, 10 Oct
   ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಸಚಿವರಾದ ಜಿಟಿ ದೇವೇಗೌಡ, ಎಸ್ ಮಹೇಶ್, ಜಯಮಾಲಾ ಮತ್ತು ಸಂಸದ ಪ್ರತಾಪ್ ಸಿಂಹ ಎಲ್ಲರಿಂದಲೂ ದೇವಿಗೆ ಪುಷ್ಪಾರ್ಚನೆ.
   7:42 AM, 10 Oct
   ಸಂಸದ ಪ್ರತಾಪ್ ಸಿಂಹ ಕೂಡ ಕಾರ್ಯಕ್ರಮದಲ್ಲಿ ಭಾಗಿ
   7:41 AM, 10 Oct
   ಸಚಿವರಾದ ಜಯಮಾಲಾ, ಜಿ ಟಿ ದೇವೇಗೌಡ, ಸಾ ರಾ ಮಹೇಶ್ ಸಾಥ್
   7:41 AM, 10 Oct
   ಅಲಂಕೃತ ಬೆಳ್ಳಿ ರಥದಲ್ಲಿ ಇರಿಸಲಾದ ದೇವಿಗೆ ಪುಷ್ಪಾಚರ್ನೆಗೈದ ಸುಧಾಮೂರ್ತಿ
   7:38 AM, 10 Oct
   ಚಾಮುಂಡೇಶ್ವರಿ ದೇವಿಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬ್ಬಕ್ಕೆ ಚಾಲನೆ
   7:35 AM, 10 Oct
   ನಾಡಹಬ್ಬ ದಸರೆಗೆ ಚಾಲನೆ ನೀಡಿದ ಸುಧಾಮೂರ್ತಿ 7.30ರ ಶುಭಾ ತುಲಾ ಲಗ್ನದಲ್ಲಿ ಉದ್ಘಾಟನೆ
   7:33 AM, 10 Oct
   ಬೆಳಿಗ್ಗೆ 10. 55 ಕ್ಕೆ ಕಳಸ ಪೂಜೆ ಆರಂಭ. ಬಳಿಕ ಸಿಂಹಾಸನದಲ್ಲಿ ಆಸೀನರೂಢಲಾಗರಿರುವ ಯದುವೀರ್ ಒಡೆಯರ್
   7:33 AM, 10 Oct
   ಬೆಳಿಗ್ಗೆ 10ಕ್ಕೆ ಸವಾರಿ ತೊಟ್ಟಿಗೆ ಪಟ್ಟದ ಆನೆ, ಹಸುವಿನ ಆಗಮನ
   7:33 AM, 10 Oct
   ಬೆಳಿಗ್ಗೆ 7.45ರೊಳಗೆ ಕಂಕಣ ಧಾರಣೆ ಕಾರ್ಯ
   7:33 AM, 10 Oct
   ಬೆಳಿಗ್ಗೆ 5.30 ರಿಂದಲೇ ಖಾಸಗಿ ದರ್ಬಾರ್ ಗೆ ಸಕಲ ಸಿದ್ದತೆ
   7:33 AM, 10 Oct
   10 ದಿನಗಳ ಕಾಲ ನಡೆಯುವ ದಸರಾ , ಖಾಸಗಿ ದರ್ಬಾರ್
   7:28 AM, 10 Oct
   ಸಚಿವ ಜಿ ಟಿ ದೇವೇಗೌಡ, ಸಾ ರಾ ಮಹೇಶ್ ಸೇರಿದಂತೆ ಹಲವರ ಉಪಸ್ಥಿತಿ
   7:28 AM, 10 Oct
   ನಾಡದೇವತೆ ದರ್ಶನಕ್ಕೆ ಆಗಮಿಸಿದ ಸಿಎಂ ಕುಮಾರಸ್ವಾಮಿ
   7:28 AM, 10 Oct
   ಸುಧಾಮೂರ್ತಿಗೆ ಜಿಲ್ಲಾಡಳಿತದಿಂದ ಪೂರ್ಣಕುಂಭ ಸ್ವಾಗತ
   7:28 AM, 10 Oct
   7.35ರೊಳಗಿನ ಶುಭಾ ತುಲಾಲಗ್ನದಲ್ಲಿ ನಾಡಹಬ್ಬ ಉದ್ಘಾಟನೆ ಮಾಡಲಿರುವ ಸುಧಾಮೂರ್ತಿ
   7:27 AM, 10 Oct
   ಚಾಮುಂಡಿ ಬೆಟ್ಟದಲ್ಲಿ ನಾಡಹಬ್ಬಕ್ಕೆ ಚಾಲನೆ ನೀಡಲಿರುವ ಸುಧಾಮೂರ್ತಿ
   READ MORE

   English summary
   World famous Mysuru Dasara will be inaugurated by writer and Infosys chairman Sudha Murthy today(Oct 10). Here are LIVE updates.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X