ಮೈಸೂರಿನ ಸಮಗ್ರ ಚಿತ್ರಣ ನೀಡಲಿದೆ 'ಮೈಸೂರು ಆಪ್!'
ಅರಮನೆ ನಗರಿ ಮೈಸೂರಿನ ಕುರಿತು ಪ್ರವಾಸಿಗರಿಗೆ ಸಮಗ್ರ ಮಾಹಿತಿ ನೀಡುವ ಮೈಸೂರು ಆಪ್ ವೊಂದನ್ನು ಬಿಡುಗಡೆ ಮಾಡುವ ಯೋಚನೆಯಿದೆ ಎಂದು ಪ್ರವಾಸೋದ್ಯಮ ಮತ್ತು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಮೈಸೂರು, ಮೇ 08: ಕರ್ನಾಟಕ ಪ್ರವಾಸೋದ್ಯಮದಲ್ಲಿ ಬಹುಮುಖ್ಯ ಸ್ಥಾನ ಹೊಂದಿರುವ ಅರಮನೆ ನಗರಿ ಮೈಸೂರಿನ ಕುರಿತು ಪ್ರವಾಸಿಗರಿಗೆ ಸಮಗ್ರ ಮಾಹಿತಿ ನೀಡುವ ಮೈಸೂರು ಆಪ್ ವೊಂದನ್ನು ಬಿಡುಗಡೆ ಮಾಡುವ ಯೋಚನೆಯಿದೆ ಎಂದು ಪ್ರವಾಸೋದ್ಯಮ ಮತ್ತು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಮೇ.6 ಶನಿವಾರದಂದು ಮೈಸೂರು ಪ್ರವಾಸೋದ್ಯಮ ಅಭಿವೃದ್ಧಿಯ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.[ಬಿಜೆಪಿ ಕಾರ್ಯಕಾರಿಣಿಗೆ ತೆರೆ; ಕೊನೆಗೂ ಭಾಷಣ ಬಿಗಿದ ಈಶ್ವರಪ್ಪ]

ಮೈಸೂರಿನ ಜಗತ್ಪ್ರಸಿದ್ಧ ದಸರಾ ಕುರಿತು ಈ ಜೂನ್ - ಜುಲೈ ನಿಂದಲೇ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಕೈಗೊಂದು ಹೆಚ್ಚಿನ ಜನರನ್ನು ಆಕರ್ಷಿಸಲಾಗುವುದು ಎಂದ ಅವರು, ದಸರಾ ಮತ್ತು ಮೈಸೂರಿನ ಇತರೆ ತಾಣಗಳ ಕುರಿತು ಸ್ಪಷ್ಟ, ನಿಖರ ಮಾಹಿತಿಯನ್ನು ನೀಡುವಂತೆ ಗೈಡ್ ಗಳಿಗೆ ತರಬೇತಿಯನ್ನೂ ನೀಡಲಾಗುವುದು ಎಂದರು.
ಮೈಸೂರಿಗೆ ಪ್ರವಾಸಕ್ಕೆಂದು ಆಗಮಿಸುವ ಜನರ ಸಂಖ್ಯೆ ಈ ಬಾರಿ ಶೇ.26 ರಷ್ಟು ಹೆಚ್ಚಾಗಿದ್ದು, ಮೈಸೂರು ರಾಷ್ಟ್ರಮಟ್ಟದಲ್ಲಿ ಪ್ರಮುಖ ಪ್ರವಾಸೋದ್ಯಮ ತಾಣವಾಗಲು ಸರ್ಕಾರ ಸೂಕ್ತ ಉತ್ತೇಜನ ನೀಡಲಿದೆ ಎಂದರು.[ಮಾಧ್ಯಮದವರೆದುರು ಮುಜುಗರಕ್ಕೀಡಾದ ಅರವಿಂದ ಲಿಂಬಾವಳಿ]

ಈ ಬಾರಿ ಅಂತಾರಾಷ್ಟ್ರೀಯ ಯೋಗ ಮತ್ತು ಪ್ರವಾಸಿ ದಿನವನ್ನು ಮೈಸೂರಿನಲ್ಲೇ ಆಯೋಜಿಸಲು ಚಿಂತಿಸಲಾಗಿದ್ದು, ಇದು ಮೈಸೂರಿನ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದವರು ಹೇಳಿದರು,












Click it and Unblock the Notifications