ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈ ಬಾರಿ ಸಿಗುವುದೇ ಮೈಸೂರಿಗೆ ಸ್ವಚ್ಛ ನಗರಿ ಪಟ್ಟ ?

|
Google Oneindia Kannada News

ಮೈಸೂರು, ಜನವರಿ 31 : ಸಾಂಸ್ಕೃತಿಕ ನಗರಿ ಮೈಸೂರನ್ನು ಮತ್ತೊಮ್ಮೆ ಸ್ವಚ್ಛ ನಗರಿ ಪಟ್ಟಕ್ಕೇರಿಸಲು ಸ್ವತಃ ಮೈಸೂರಿಗರೇ ನಿರಾಸಕ್ತಿ ತೋರುತ್ತಿದ್ದು, ಮೊದಲ ಸ್ಥಾನ ಕೈತಪ್ಪುವ ಆತಂಕ ಎದುರಾಗಿದೆ.

ಸ್ವಚ್ಛ ನಗರಿಯ ಗರಿಮೆ ತರಲು ನಗರವಾಸಿಗಳು ಸಹಕಾರ ಅತಿ ಮುಖ್ಯವಾಗಿದೆ. ಬಹುತೇಕ ಪ್ರಜ್ಞಾವಂತರು ವಾಸಿಸುತ್ತಿರುವ ನಗರದಲ್ಲಿ ಸಾರ್ವಜನಿಕರ ಸ್ಪಂದಿಸಿದಲ್ಲಿ ಮಾತ್ರ ಪಾಲಿಕೆಯ ಶ್ರಮಕ್ಕೆ ಬೆಲೆ ಸಿಗುವಂತಾಗಿದೆ.

ಮೈಸೂರು 'ಸ್ವಚ್ಛನಗರಿ' ಪಟ್ಟ ಪಡೆಯಲು ಎಲ್ಲರೂ ಸಹಕರಿಸಿ:ಯಶ್ಮೈಸೂರು 'ಸ್ವಚ್ಛನಗರಿ' ಪಟ್ಟ ಪಡೆಯಲು ಎಲ್ಲರೂ ಸಹಕರಿಸಿ:ಯಶ್

ಕಳೆದ ಮೂರು ವರ್ಷಗಳ ಹಿಂದೆ ನಮ್ಮ ಮೈಸೂರು ದೇಶದಲ್ಲೇ ಅತ್ಯಂತ ಸ್ವಚ್ಛ ನಗರಿ ಎಂಬ ಪಟ್ಟ ಮುಡಿಗೇರಿಸಿಕೊಂಡಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಘನ ತ್ಯಾಜ್ಯ ಹಾಗೂ ಕಸ ವಿಲೇವಾರಿಯಲ್ಲಿ ಸಾರ್ವಜನಿಕರ ನಿರಾಸಕ್ತಿ ತೋರಿದ ಪರಿಣಾಮ ಸ್ವಚ್ಛ ನಗರಿಯಲ್ಲಿ ಮೈಸೂರು ಎಂಟನೇ ಸ್ಥಾನಕ್ಕೆ ಕುಸಿಯಿತು. ಸ್ವಚ್ಛತೆಯ ಕಿರೀಟ ಧರಿಸಲು ಕೇವಲ ಅಧಿಕಾರಿಗಳು ಮತ್ತು ಜನಪ್ರತಿ ತಿಂಗಳಿಂದ ಅಸಾಧ್ಯ. ಶ್ರೀಸಾಮಾನ್ಯರು ಸಹ ಇದಕ್ಕೆ ಕೈಜೋಡಿಸಬೇಕು.

Mysurians are not showing interest on swachh sarvekshan abhiyan

ಸದಾ ಮೊಬೈಲ್ ಫೋನ್ ಗಳಲ್ಲಿ ಬಿಜಿಯಾಗಿರುವ ಬಹುತೇಕ ಯುವ ಸಮೂಹ ಸಾಮಾಜಿಕ ಜಾಲತಾಣದಲ್ಲಿ ಅನುಪಯುಕ್ತ ಚರ್ಚೆಗಳಲ್ಲಿಯೇ ಕಾಲಹರಣ ಮಾಡುತ್ತಿದ್ದು, ಸ್ವಚ್ಛ ಸರ್ವೇಕ್ಷಣೆಯಲ್ಲಿ ನಮ್ಮ ಪಾತ್ರ ಏನೂ ಇಲ್ಲ ಎಂಬಂತೆ ನಿರ್ಲಕ್ಷ್ಯ ಮನೋಭಾವ ತಾಳಿರುವುದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಬೇಸರಕ್ಕೆ ಕಾರಣವಾಗಿದೆ .

ನಗರವಾಸಿಗಳು ಸ್ವಚ್ಛ ಸರ್ವೇಕ್ಷಣ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಬೇಕು. ನಂತರ ಟೋಲ್ ಫ್ರೀ ನಂಬರ್ ಗೆ ಕರೆ ಮಾಡಿ ಸ್ವಚ್ಛ ಸರ್ವೇಕ್ಷಣೆಯಲ್ಲಿ ನಗರಪಾಲಿಕೆಗೆ ಸಹಾಯ ಮಾಡಿ ಜಾಗೃತಿ ಮೂಡಿಸಬೇಕು. ಆದರೆ ಮೈಸೂರಿಗರು ಇದರಲ್ಲಿ ತುಂಬಾ ನಿರಾಸಕ್ತಿ ತೋರುತ್ತಿರುವುದು ಸ್ವಚ್ಛ ನಗರದ ಗರಿ ಹಿನ್ನಡೆಗೆ ಕಾರಣವಾಗುತ್ತಿದೆ.

ಸ್ವಚ್ಛನಗರಿ ಪಟ್ಟಕ್ಕೆ ಮತ್ತೊಮ್ಮೆ ಸಜ್ಜಾಗುತ್ತಿದೆ ಸಾಂಸ್ಕೃತಿಕ ನಗರಿ ಮೈಸೂರುಸ್ವಚ್ಛನಗರಿ ಪಟ್ಟಕ್ಕೆ ಮತ್ತೊಮ್ಮೆ ಸಜ್ಜಾಗುತ್ತಿದೆ ಸಾಂಸ್ಕೃತಿಕ ನಗರಿ ಮೈಸೂರು

ಸದ್ಯ 2, 82, 500ಸಾವಿರ ನಾಗರಿಕರು ಸ್ವಚ್ಛ ಸರ್ವೇಕ್ಷಣೆಯ ಆ್ಯಪ್ ಡೌನ್ಲೋಡ್ ಮಾಡಿಕೊಂಡಿರುವ ಲಕ್ನೋ ನಗರ ಪ್ರಥಮ ಸ್ಥಾನದಲ್ಲಿದೆ. ಇಂದೋರ್ 2, 22, 000 ಕಾನ್ಪುರ್ 1,43,00, ಆಗ್ರಾ 1, 41,000, ಹೈದ್ರಾಬಾದ್ 1,21,000 ನಾಗರಿಕರು ಆ್ಯಪ್ ಡೌನ್ಲೋಡ್ ಮಾಡಿಕೊಂಡಿದ್ದಾರೆ.. ಇನ್ನು ಪ್ರಜ್ಞಾವಂತರ ನಾಗರಿಕರ ನಾಡು ಎನಿಸಿರುವ ಮೈಸೂರಿನಲ್ಲಿ ಕೇವಲ 91,231 ಸಾರ್ವಜನಿಕರು ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ಐದನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

ಸ್ಪರ್ಧೆಯಲ್ಲಿರುವ ದೇಶದ 4,237 ನಗರಗಳ ಪೈಕಿ ಸದ್ಯ ಆರನೇ ಸ್ಥಾನದಲ್ಲಿದೆ. ನಾಗರಿಕರ ಪ್ರತಿಕ್ರಿಯೆಯೂ ಒಂದು. ಮೈಸೂರು ಮತ್ತೆ ಪಟ್ಟಕ್ಕೇರುವ ನಿಟ್ಟಿನಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಕೊನೆಯ ದಿನದೊಳಗೆ ಕನಿಷ್ಠ 1 ಲಕ್ಷ (10 ಲಕ್ಷ ಜನಸಂಖ್ಯೆಯ ಶೇ 10) ಪ್ರತಿಕ್ರಿಯೆ ಪಡೆಯಬೇಕು. ಇದುವರೆಗೆ ಆನ್ಲೈನ್ನಲ್ಲಿ 91 ಸಾವಿರ ಜನ ಪ್ರತಿಕ್ರಿಯಿಸಿದ್ದು, ಸಮೀಕ್ಷೆ ಕೊನೆಗೊಳ್ಳಲು ಇಂದು ಒಂದೇ ದಿನ ಬಾಕಿ ಇದೆ.

ಸ್ವಚ್ಛ ಸರ್ವೇಕ್ಷಣದಲ್ಲಿ ಮೊದಲ ಸ್ಥಾನ ಗಳಿಸಲು 1250 ಮಾರ್ಕ್ಸ್ ಅಗತ್ಯವಿದೆ. ಇದರಲ್ಲಿ 400 ಅಂಕಗಳು ಆ್ಯಪ್ ಡೌನ್ಲೋಡ್ಗೆ ಸೀಮಿತವಾಗಿದೆ. ನಂತರ ಘನ ತ್ಯಾಜ್ಯ ನಿರ್ವಹಣೆ ಸೇರಿದಂತೆ ಮುಖಾಮುಖಿ ಪ್ರಶ್ನೋತ್ತರಗಳಿಗೆ ಉಳಿದ ಅಂಕಗಳು ಸೀಮಿತವಾಗಿದೆ.

ಸಾರ್ವಜನಿಕರು ಟೋಲ್ ಫ್ರೀ ನಂಬರ್ ಗೆ ಕರೆ ಮಾಡಿ ಅಲ್ಲಿಂದ ಬರುವ ಪ್ರಶ್ನೋತ್ತರಗಳಿಗೆ ಪ್ರತಿಕ್ರಿಯೆ ನಡೆದರೆ ಮೈಸೂರನ್ನು ಸ್ವಚ್ಛ ನಗರಿ ಪಟ್ಟಕ್ಕೇರಿಸಲು ಸಹಕರಿಸಿದಂತಾಗುತ್ತದೆ ಎನ್ನುತ್ತಾರೆ ನಗರ ಪಾಲಿಕೆ ಅಧಿಕಾರಿಗಳು.

ಇಂದಾದರೂ ಎಚ್ಚೆತ್ತು ನಮ್ಮ ಪ್ರಜ್ಞಾವಂತರು ಅಭಿಯಾನಕ್ಕೆ ಕೈ ಜೋಡಿಸುತ್ತಾರಾ ಕಾದು ನೋಡಬೇಕಿದೆ.

English summary
Mysuru peoples are not showing interest on swachh sarvekshan poll. On this reason Mysuru know camed 6th place on swachh survekshan abhiyan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X