ಯಶಸ್ವಿಯಾದ ಆಪರೇಷನ್ ಕಾವೇರಿ ಎಕ್ಸ್‌ಪ್ರೆಸ್:ಮೂವರ ಬಂಧನ

ಮೈಸೂರು, ಮಾರ್ಚ್ 19 : ಆಭರಣ ವ್ಯಾಪಾರಿ ಬೆಂಗಳೂರಿನ ನವೀನ್‌ಕುಮಾರ್ ಅವರನ್ನು ಕಾವೇರಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆದರಿಸಿ 2 ಕೆ.ಜಿ. ಚಿನ್ನಾಭರಣಗಳನ್ನು ದರೋಡೆ ಮಾಡಿದ್ದ ತಂಡವನ್ನು ರೈಲ್ವೆ ಪೊಲೀಸರು ಪತ್ತೆ ಹಚ್ಚಿ ಮೂವರನ್ನು ಬಂಧಿಸಿದ್ದಾರೆ. ಬಂಧಿತರಿಂದ 45 ಲಕ್ಷ ಮೌಲ್ಯದ ಒಂದೂವರೆ ಕೆ.ಜಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಏನಿದು ಘಟನೆ?

ಚಿನ್ನಾಭರಣ ವ್ಯಾಪಾರಿ ನವೀನ್ ಕುಮಾರ್ ಹಲವು ವರ್ಷಗಳಿಂದ ಮುಂಬೈನಿಂದ ಚಿನ್ನಾಭರಣಗಳನ್ನು ಖರೀದಿಸಿ, ಮೈಸೂರಿನ ವಿವಿಧ ಮಳಿಗೆ ಗಳಿಗೆ ಮಾರಾಟ ಮಾಡುತ್ತಿದ್ದರು. ಹಾಗೆಯೇ 2018ರ ಅ.1ರಂದು 2ಕೆಜಿ 300ಗ್ರಾಂ ಆಭರಣದೊಂದಿಗೆ ಬೆಂಗಳೂರಿಗೆ ವಾಪಸ್ಸಾಗಲು ರೈಲು ನಿಲ್ದಾಣಕ್ಕೆ ಬಂದಿದ್ದರು.

ಅಂದು ರಾತ್ರಿ 8 ಗಂಟೆ ವೇಳೆಗೆ ಪ್ಲಾಟ್ ಫಾರಂ 6ರಲ್ಲಿ ನಿಂತಿದ್ದ ಕಾವೇರಿ ಎಕ್ಸ್ ಪ್ರೆಸ್ ರೈಲಿನ ಎಸ್-7 ಬೋಗಿಯಲ್ಲಿ ಕುಳಿತಿದ್ದರು. ಬೋಗಿಯಲ್ಲಿ ಇನ್ಯಾರು ಪ್ರಯಾಣಿಕರಿರಲಿಲ್ಲ. ಆ ವೇಳೆಗೆ ಆಗಮಿಸಿದ ಇಬ್ಬರು ಆಸಾಮಿಗಳು, ನವೀನ್ ಕುಮಾರ್ ಅವರನ್ನು ಬೆದರಿಸಿ, ಚಿನ್ನಾಭರಣವಿದ್ದ ಬ್ಯಾಗ್ ಕಿತ್ತು ಕೊಂಡು, ನಿಮಿಷಾರ್ಧದಲ್ಲಿ ಪರಾರಿಯಾದರು. ಇಬ್ಬರು ಖದೀಮರು ಕಿತ್ತುಕೊಂಡ ಬ್ಯಾಗನ್ನು ಪೂರ್ವಯೋಜನೆಯಂತೆ ಒಬ್ಬರಿಂದೊಬ್ಬರಿಗೆ ಪಾಸ್ ಮಾಡಿಕೊಂಡು ಕಣ್ಮರೆಯಾಗಿದ್ದರು.

Mysore railway police arrested three Burglars

ಘಟನೆಯಿಂದ ಆಘಾತಕ್ಕೆ ಒಳಗಾಗಿದ್ದ ನವೀನ್ ಕುಮಾರ್, ರೈಲಿನಿಂದ ಇಳಿದು ಬರುವಷ್ಟರಲ್ಲಿ ಖದೀಮರೆಲ್ಲಾ ಪರಾರಿಯಾಗಿದ್ದರು. ಏನು ಮಾಡುವುದೆಂದು ತೋಚದೆ, ಅಲೆದಾಡುತ್ತಿದ್ದಾಗ ಸ್ವಲ್ಪ ದೂರದಲ್ಲಿ ಪೊಲೀಸರು ಕಾಣಿಸಿದ್ದಾರೆ. ಕೂಡಲೇ ಅವರ ಬಳಿ ತೆರಳಿ, ಚಿನ್ನಾಭರಣ ದರೋಡೆ ಮಾಡಿದ್ದನ್ನು ತಿಳಿಸಿದ್ದಾರೆ.

ಬಳಿಕ ಪ್ರಕರಣ ದಾಖಲಿಸಿಕೊಂಡು, ಸಿಸಿಟಿವಿ ಫೂಟೇಜ್ ವೀಕ್ಷಿಸಿದಾಗ ಖದೀಮರು ಬ್ಯಾಗ್ ನೊಂದಿಗೆ ಪರಾರಿಯಾಗಿದ್ದು ಸ್ಪಷ್ಟವಾಗಿದೆ. ಅಲ್ಲದೇ ಅವರೆಲ್ಲಾ ಹೊರರಾಜ್ಯದವರು ಎಂಬುದು ದೃಢಪಟ್ಟ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದರು.

Mysore railway police arrested three Burglars

ಈ ಪ್ರಕರಣವನ್ನು ತನಿಖೆ ನಡೆಸಲು ಎಎಸ್ ಪಿ ಎನ್.ಟಿ.ಶ್ರೀನಿವಾಸರೆಡ್ಡಿ ಅವರ ನೇತೃತ್ವದಲ್ಲಿ 'ಆಪರೇಷನ್ ಕಾವೇರಿ ಎಕ್ಸ್‌ಪ್ರೆಸ್' ಕಾರ್ಯಾಚರಣೆ ಕೈಗೊಳ್ಳಲಾಯಿತು. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಸಿಕ್ಕ ಆರೋಪಿಗಳ ಮುಖಚರ್ಯೆಯ ಜಾಡು ಹಿಡಿದ ಪೊಲೀಸರು ಕೊನೆಗೆ ತಲುಪಿದ್ದು ಮಹಾರಾಷ್ಟ್ರಕ್ಕೆ. ಅಲ್ಲಿನ ಪೊಲೀಸರು ಈ ಆರೋಪಿಗಳ ಗುರುತು ಪತ್ತೆ ಹಚ್ಚಿ ಮಾಹಿತಿ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+