ಮೈಸೂರು ಪೊಲೀಸ್ ಆರಂಭಿಸಿರುವ ಮೊಬೈಲ್ ಆಪ್ ಹೇಗಿದೆ ಗೊತ್ತಾ?

ಮೈಸೂರು, ಜುಲೈ 31: ಮೈಸೂರು ಪೊಲೀಸ್ ಒಂದಿಲ್ಲೊಂದು ಹೊಸ ಯೋಜನೆಯನ್ನು ಜಾರಿಗೆ ತಂದು ಜನರಿಂದ ಭೇಷ್ ಎನಿಸಿಕೊಳ್ಳುತ್ತಿರುತ್ತಾರೆ. ಅದೇ ರೀತಿ ಅವರೀಗ ಮತ್ತೊಂದು ಪ್ಲಾನ್ ಜಾರಿಗೆ ತಂದಿದ್ದಾರೆ.

ಹೌದು, ಸಾರ್ವಜನಿಕರ ಅನುಕೂಲಕ್ಕಾಗಿ ಮೈಸೂರು ಪೊಲೀಸ್ ಇಲಾಖೆ ಮೊಬೈಲ್ ಆಪ್ ಆರಂಭಿಸಿದೆ. ಈ ಆಪ್ ನಲ್ಲಿ ಸಾರ್ವಜನಿಕರು ತುರ್ತು ಸಂದರ್ಭಗಳಲ್ಲಿ ತಮ್ಮ ಆತ್ಮೀಯರನ್ನು ಸಂಪರ್ಕಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.

ಕರ್ನಾಟಕ ರಾಜ್ಯ ಪೊಲೀಸ್' ಹೆಸರಿನ ಈ ಆಪ್ ಕನ್ನಡ ಹಾಗೂ ಇಂಗ್ಲಿಷ್‌ ಭಾಷೆಗಳಲ್ಲಿ ಲಭ್ಯ. ಪ್ಲೇ ಸ್ಟೋರ್ ನಿಂದ ಒಮ್ಮೆ ಡೌನ್‌ಲೋಡ್‌ ಮಾಡಿಕೊಂಡರೆ ಸಾಕು. ಬೇಕಾದಾಗ ಅಗತ್ಯ ಮಾಹಿತಿ ಪಡೆದುಕೊಳ್ಳಬಹುದು.

Mysore Police Department has launched new Mobile App

ಆಪ್ ಡೌನ್‌ಲೌಡ್ ಮಾಡಿಕೊಂಡ ಬಳಿಕ ಅದನ್ನು ತೆರೆದರೆ ಮೊದಲಿಗೆ ಮೊಬೈಲ್ ಸಂಖ್ಯೆ ಕೇಳುತ್ತದೆ. ನಂತರ ಜಿಲ್ಲೆ ಹಾಗೂ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ಮೊಬೈಲ್ ಸಂಖ್ಯೆಗೆ ಒಟಿಪಿ ಸಂಖ್ಯೆ ಬರುತ್ತದೆ. ಜತೆಗೆ ತಾನೇ ತಾನಾಗಿ ಒಟಿಪಿ ಸಂಖ್ಯೆ ಆಪ್ ಗೆ ಬರುತ್ತದೆ.

ಇದರಲ್ಲಿ ಘಟನೆಗಳನ್ನು ವರದಿ ಮಾಡಲು, ಪೊಲೀಸ್ ಠಾಣೆಗಳ ಮಾಹಿತಿ ಪಡೆಯಲು ಹಾಗೂ ತುರ್ತು ವೇಳೆಯಲ್ಲಿ ಸಂಪರ್ಕಿಸಬಹುದಾದ ಸಂಪರ್ಕ ಸಂಖ್ಯೆಗಳೂ ಇವೆ. ಸಮೀಪದ ಪೊಲೀಸ್ ಠಾಣೆ ಹಾಗೂ ನಾವು ಇರುವ ವ್ಯಾಪ್ತಿಯ ಕುರಿತ ಮಾಹಿತಿಯೂ ಇದರಲ್ಲಿ ಮೂಡುತ್ತದೆ.

ಆಪ್ ನ ಎಡಗಡೆ ತಲೆಯ ಚಿಹ್ನೆ ಮೇಲೆ ಕ್ಲಿಕ್ ಮಾಡಿ ಹೆಸರು, ಲಿಂಗ, ವಿಳಾಸವನ್ನು ನಮೂದಿಸಬೇಕು. ಹಳದಿ ಬಣ್ಣದ ಪಟ್ಟಿಯ ಮೇಲೆ ಇರುವ ವಿಶ್ವಾಸಾರ್ಹ ಸಂಪರ್ಕಗಳು ಎನ್ನುವ ಕೊಂಡಿಯನ್ನು ಕ್ಲಿಕ್ ಮಾಡಿದರೆ ಒಟ್ಟು 5 ಖಾಲಿ ಜಾಗಗಳು ಮೂಡುತ್ತವೆ.

Mysore Police Department has launched new Mobile App

ಇದರಲ್ಲಿ ನಮಗೆ ಅತಿ ಹತ್ತಿರದ ವಿಶ್ವಾಸಾರ್ಹವ್ಯಕ್ತಿಗಳ ಮೊಬೈಲ್ ಸಂಖ್ಯೆಗಳನ್ನು ನಮೂದಿಸಬಹುದು. ಉದಾಹರಣೆಗೆ ಪೋಷಕರು, ಸಂಬಂಧಿಕರು, ಸ್ನೇಹಿತರು, ಪತ್ನಿ/ಪತಿ ಅಥವಾ ಪುತ್ರ/ಪುತ್ರಿ... ವ್ಯಕ್ತಿಯು ತುರ್ತು ಪರಿಸ್ಥಿತಿಯಲ್ಲಿ ಸಿಲುಕಿದಾಗ ಇವರನ್ನು ಅತ್ಯಂತ ಸುಲಭವಾಗಿ ಸಂಪರ್ಕಿಸಬಹುದು.

ಜತೆಗೆ, ಇದರಲ್ಲಿ ಎಫ್‌ಐಆರ್, ಕಾಣೆಯಾದ ವ್ಯಕ್ತಿಗಳು ಹಾಗೂ ಕಳವಾದ ವಾಹನಗಳ ಮಾಹಿತಿಯನ್ನೂ ಪಡೆಯಬಹುದು. ಪೊಲೀಸ್ ಇಲಾಖೆ ಆಗಾಗ್ಗೆ ಕಳುಹಿಸುವ ನೋಟಿಫಿಕೇಶನ್ ಸಹ ಮೊಬೈಲ್‌ಗೆ ಬರುತ್ತದೆ.

ಯಾವುದೇ ತುರ್ತು ಸಂದರ್ಭದಲ್ಲಿ ಎಸ್‍ಒಎಸ್ ಎಂಬ ಬಟನ್ ಒತ್ತುವುದರಿಂದ ನೀವು ತಿಳಿಸಿದ ಮೊಬೈಲ್ ನಂಬರ್ ಗೆ ನೀವಿರುವ ಜಾಗದ ಮಾಹಿತಿ ಸಮೇತ ಸಂದೇಶ ತಲುಪುತ್ತದೆ. ಈ ಅಪ್ಲಿಕೇಶನ್ ಅನ್ನು ಬಳಸಲು ಇಂಟರ್ ನೆಟ್ ಸಂಪರ್ಕ ಹಾಗೂ ಜಿಪಿಎಸ್ ಆನ್ ಮಾಡಿಟ್ಟುಕೊಂಡಿರಲೇಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+