ಬಗೆ-ಬಗೆಯ ತಿಂಡಿ ಸವಿಯಲು ಆಹಾರ ಮೇಳಕ್ಕೆ ಬನ್ನಿ
ಮೈಸೂರು, ಸೆ. 12 : ದಸರಾ ಉತ್ಸವಕ್ಕೆ ಬರುವ ಭೋಜನ ಪ್ರಿಯರ ಮನ ತಣಿಸಲು ಆಹಾರ ಮೇಳವನ್ನು ಹಮ್ಮಿಕೊಳ್ಳಲಾಗಿದೆ. 125ಕ್ಕೂ ಹೆಚ್ಚು ಮಳಿಗೆಗಳು ಈ ಭಾರಿಯ ಆಹಾರ ಮೇಳದಲ್ಲಿರುತ್ತವೆ. ಮೇಳದಲ್ಲಿ ಭಾಗವಹಿಸಲು ಇಚ್ಛಿಸುವ ಆಹಾರ ತಯಾರಕರು ಸೆಪ್ಟೆಂಬರ್ 15ರೊಳಗೆ ಅರ್ಜಿ ಸಲ್ಲಿಸುವಂತೆ ಮನವಿ ಮಾಡಲಾಗಿದೆ.
ಸೆ.25 ರಿಂದ ಅ.2ರವೆಗೆ ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಆಹಾರ ಮೇಳವನ್ನು ಆಯೋಜಿಸಲಾಗಿದೆ. ಮೈಸೂರು, ಕೊಡಗು, ಕರಾವಳಿ, ಮಲೆನಾಡು, ಬುಡಕಟ್ಟು, ಉತ್ತರ ಕರ್ನಾಟಕ, ಕೇರಳ, ಆಂಧ್ರಶೈಲಿಯ ಆಹಾರ ಪದಾರ್ಥಗಳನ್ನು ಭೋಜನಪ್ರಿಯರಿಗೆ ನೀಡಲು ಯೋಜನೆ ತಯಾರಿಸಲಾಗಿದೆ. [ಪ್ರವಾಸಿಗರಿಗೆ ಉಚಿತ ಆಯುರ್ವೇದ ಸೇವೆ]

ಹಣ್ಣಿನ ರಸ, ಐಸ್‍ಕ್ರೀಂಗಳು, ತಂಪು ಪಾನೀಯಗಳು, ಚಾಟ್ಸ್‌ಗಳು ಆಹಾರ ಮೇಳದಲ್ಲಿ ಲಭ್ಯವಿರುತ್ತವೆ. ಮೇಳ ನಡೆಯುವ ಸಂದರ್ಭದಲ್ಲಿ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ತಿಂಡಿ ತಿನ್ನುವ ಸ್ಪರ್ಧೆ, ಧಾನ್ಯಗಳು, ತರಕಾರಿಗಳನ್ನು ಗುರುತಿಸುವ ಸ್ಪರ್ಧೆ, ಅಡುಗೆ ಸ್ಪರ್ಧೆ ಸಹ ಏರ್ಪಡಿಸಲಾಗುತ್ತದೆ.[ಖಡ್ಗವಿಟ್ಟು ದಸರಾ ಖಾಸಗಿ ದರ್ಬಾರ್ ಆಚರಣೆ]
ಆಹಾರ ಮೇಳದಲ್ಲಿ ಆಹಾರ ಸಂಸ್ಕರಣೆ ಉದ್ದಿಮೆಗಳು, ಸಿದ್ಧ ಆಹಾರ ತಯಾರಕರು, ಫಾಸ್ಟ್ ಫುಡ್ ತಯಾರಕರು, ಗೃಹ ಆಹಾರ ತಯಾರಕರು, ಆಹಾರ ಆಧಾರಿತ ಕೈಗಾರಿಕೆಗಳಿಗೆ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ. [ಗಂಟಲಲ್ಲಿ ಸಿಕ್ಕಿಕೊಂಡ ಇಡ್ಲಿ ವ್ಯಕ್ತಿಯ ಪ್ರಾಣ ತಿಂದಿತು!]
ಆಹಾರ ಮೇಳದಲ್ಲಿ ಭಾಗವಹಿಸಲು ಇಚ್ಚಿರುವವರು ಆಹಾರ ತಯಾರಕರು ಸೆಪ್ಟೆಂಬರ್ 15 ರೊಳಗೆ ಕಾರ್ಯದರ್ಶಿಗಳು, ಆಹಾರ ಮೇಳ 2014 ಜಿಲ್ಲಾಧಿಕಾರಿಗಳ ಕಚೇರಿ, ಮೈಸೂರು ಇವರಿಗೆ ಅರ್ಜಿ ಸಲ್ಲಿಸಲು ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗೆ 0821-2422107, 2420364 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ.












Click it and Unblock the Notifications