ಸಾಮಾನ್ಯರ ಭೇಟಿಗೆ ಕಚೇರಿ ಆರಂಭಿಸಿದ ಸಂಸದ ಪ್ರತಾಪ್ ಸಿಂಹ
ಮೈಸೂರು, ಆಗಸ್ಟ್ 16: ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ನೂತನ ಕಚೇರಿಯನ್ನು ಆರಂಭಿಸಿದ್ದಾರೆ.
ಅವಹೇಳನಕಾರಿ ಹೇಳಿಕೆ: ಪ್ರಕಾಶ್ ರಾಜ್‌ಗೆ ಸ್ಸಾರಿ ಎಂದ ಪ್ರತಾಪ್ ಸಿಂಹ
ಈ ಕುರಿತು ಮಾತನಾಡಿದ ಅವರು, "2014ರ ವರ್ಷದ ಚುನಾವಣೆಯಲ್ಲಿ ಜನರು ನನ್ನನ್ನು ಆಯ್ಕೆ ಮಾಡಿದ್ದರು. ಆಗ ಜಲದರ್ಶಿನಿಯಲ್ಲಿ ನನ್ನ ಕಚೇರಿ ಇತ್ತು. ಇಂದೂ ಜನತೆ ನನ್ನ ಆಯ್ಕೆ ಮಾಡಿದ್ದಾರೆ. ಅವರ ಸಮಸ್ಯೆಗೆ ಸ್ಪಂದಿಸಲು ಜಲದರ್ಶಿನಿಯ ಅದೇ ಕಚೇರಿಯಲ್ಲಿ ವಿದ್ಯುಕ್ತವಾಗಿ ಆರಂಭಿಸಿದ್ದೇವೆ ಅಷ್ಟೇ" ಎಂದರು.

ಮೈಸೂರು ಹಾಗೂ ಕೊಡಗಿನ ಯಾರೇ ಬಂದರೂ ಸಮಸ್ಯೆಗಳನ್ನು ನನ್ನ ಕಚೇರಿಗೆ ಬಂದು ಹೇಳಿಕೊಳ್ಳಬಹುದು. ಸೋಮವಾರದಿಂದ ಶನಿವಾರದವರೆಗೆ ಕಚೇರಿ ತೆರೆದಿರಲಿದೆ. ಬಂದು ಕೆಲಸ ಮಾಡಿಸಿಕೊಳ್ಳಬಹುದು. ಸಂಸದರಿಂದ ಯಾವುದೇ ಪತ್ರ ಬೇಕಿದ್ದರೂ ಇಲ್ಲಿ ಅಡೆತಡೆಯಿಲ್ಲದೇ ನೇರವಾಗಿ ಕಚೇರಿಗೆ ಬಂದು ಪತ್ರವನ್ನು ತೋರಿಸಿ ತೆಗೆದುಕೊಂಡು ಹೋಗಬಹುದು. ಇದು ಜನರ ಆಫೀಸ್ ಜನರಿಗೋಸ್ಕರ ಇರುವಂಥದ್ದು. ಜನರಿಗೆ ಮುಕ್ತವಾಗಿ ಸ್ವಾಗತವಿದೆ, ಯಾರು ಬೇಕಾದರೂ ಇಲ್ಲಿಗೆ ಬರಬಹುದು" ಎಂದರು.

ದಸರಾ ಉದ್ಘಾಟನೆಗೆ ಸಾಹಿತಿ ಭೈರಪ್ಪನವರನ್ನು ಆಹ್ವಾನಿಸಿದ್ದಕ್ಕೆ ಕೆಲವರು ಸಂತಸ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ವಿರೋಧಿಸಿದ್ದಾರೆ ಎಂಬ ಮಾಧ್ಯಮದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ, "ಇದಕ್ಕೆ ನಾನು ಉತ್ತರ ಕೊಡುವುದಿಲ್ಲ. ಸಾಹಿತ್ಯದ ಗಂಧ ಗಾಳಿ ಗೊತ್ತಿರುವವರಿಗೆ ಭೈರಪ್ಪನವರು ಕನ್ನಡ ಸಾರಸ್ವತ ಲೋಕಕ್ಕೆ ಕೊಟ್ಟ ಕೊಡುಗೆ ತಿಳಿಯುತ್ತದೆ. ಅವರು ಅತ್ಯಂತ ಮೇರು ಹಾಗೂ ಜನಪ್ರಿಯ ವ್ಯಕ್ತಿತ್ವದ ಬರಹಗಾರರು ಎನ್ನುವುದು ಎಲ್ಲರಿಗೂ ಗೊತ್ತು. ಸಾಹಿತ್ಯದ ಅಭಿರುಚಿ ಇಲ್ಲದವರು ಅನ್ಯತಾ ಮಾತನಾಡುತ್ತಾರೆ" ಎಂದರು.
ಇನ್ನು ಕೇಂದ್ರ ಪ್ರವಾಹ ಸಂತ್ರಸ್ತರ ಪರಿಹಾರ ಬಿಡುಗಡೆಗೆ ತಾರತಮ್ಯ ಮಾಡುತ್ತಿದೆ ಎಂಬ ಮಾತು ಕೇಳಿಬಂದಿದ್ದು ಇದಕ್ಕೆ ಪ್ರತಿಕ್ರಿಯಿಸಿ, "ಮೋದಿ ಸರ್ಕಾರ - ಯಡಿಯೂಪ್ಪನವರ ಸರ್ಕಾರ ಪರಿಹಾರಕ್ಕೆ ಯಾವುದೇ ತಾರತಮ್ಯ ಮಾಡಿಲ್ಲ. ಇದೊಂದು ಗಾಳಿಯ ಮಾತಷ್ಟೇ" ಎಂದಿದ್ದಾರೆ.












Click it and Unblock the Notifications