ಮಂಗಳವಾರ ಮೈಸೂರಿಗೆ ಮೋದಿ: ಪ್ರತಾಪ್ ಪರ ಪ್ರಚಾರ
ಮೈಸೂರು, ಏಪ್ರಿಲ್ 7:ಕೇವಲ ಒಂದು ತಿಂಗಳ ಹಿಂದೆ ರಾಜಕೀಯಕ್ಕೆ ಎಂಟ್ರಿ ಕೊಟ್ಟು ಮೈಸೂರು-ಕೊಡಗು ಕ್ಷೇತ್ರದಿಂದ ಕಣಕ್ಕಿಳಿದಿರುವ ಅಂಕಣಕಾರ ಪ್ರತಾಪ್ ಸಿಂಹ ಪರ ಪ್ರಚಾರ ಮಾಡಲು ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ನಾಳೆ ಮಂಗಳವಾರ ಮೈಸೂರಿಗೆ ಬರುತ್ತಿದ್ದಾರೆ.
ರಾಮನವಮಿಯಂದು ಭಾರತ್ ವಿಜಯ್ ಸಭೆ:
ಮೋದಿ ಅವರ blue-eyed boy ಎನಿಸಿರುವ ಪ್ರತಾಪ್ ಸಿಂಹ ಪರ ಪ್ರಚಾರ ನಡೆಸಲು ಮೋದಿ ರಾಜ್ಯಕ್ಕೆ ಆಗಮಿಸುತ್ತಿರುವುದು ವಿಶೇಷತೆ ಪಡೆದುಕೊಂಡಿದೆ. ಭಾರತೀಯ ಜನತಾ ಪಕ್ಷ ನಾಳೆ (ಏ. 8) ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸಂಜೆ 4 ಗಂಟೆಗೆ ಹಮ್ಮಿಕೊಂಡಿರುವ ಬಹಿರಂಗ ಸಭೆಯಲ್ಲಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ.

ಪ್ರತಾಪ್ ಸಿಂಹ ಅವರು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಮೆಚ್ಚುಗೆಗೆ ಪಾತ್ರವಾಗಿದ್ದು, ಅದೇ ಅಭಿಮಾನ/ಪ್ರೀತಿಯಲ್ಲಿ ಅವರು ಪ್ರತಾಪ್ ಪರ ಪ್ರಚಾರ ಮಾಡಲು ಮೈಸೂರಿಗೆ ಬರುತ್ತಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಮೈಸೂರು ಸೇರಿದಂತೆ ರಾಜ್ಯದಲ್ಲಿ ಒಟ್ಟು 4 ಕ್ಷೇತ್ರಗಳಲ್ಲಿ ನಾಳೆ ಮೋದಿ ಸಮಾವೇಶ ನಡೆಯಲಿದೆ.

* ಪ್ರತಾಪ್ ಸಿಂಹಗೆ ನ್ಯಾಯಮೂರ್ತಿಗಳ ಶಭಾಸಗಿರಿ
* ಶೋಭಾ- ಪ್ರತಾಪ್ ಸಿಂಹ ಸೋಲು ಖಚಿತ: ಗುಪ್ತ ವರದಿ












Click it and Unblock the Notifications