ಮೋದಿಗೆ ನನ್ನ ವಯಸ್ಸು ಗೊತ್ತಿದೆ, ನಾನೇ ಮುಂದಿನ ಸಿಎಂ - ಯಡಿಯೂರಪ್ಪ
2018ರಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಗೊಂದಲಗಳಿಗೆ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ತೆರೆ ಎಳೆದಿದ್ದಾರೆ. ಮುಂದಿನ ಮುಖ್ಯಮಂತ್ರಿ ನಾನೇ ಅಂತ ಒನ್ ಇಂಡಿಯಾ ಸಂದರ್ಶನದಲ್ಲಿ ಯಡಿಯೂರಪ್ಪ ತುಂಬು ವಿಶ್ವಾಸದಿಂದ ಹೇಳಿದ್ದಾರೆ.
ನಂಜನಗೂಡು, ಏಪ್ರಿಲ್ 4: 2018ರಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಗೊಂದಲಗಳಿಗೆ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ತೆರೆ ಎಳೆದಿದ್ದಾರೆ. ಮುಂದಿನ ಮುಖ್ಯಮಂತ್ರಿ ನಾನೇ ಅಂತ ಯಡಿಯೂರಪ್ಪ ತುಂಬು ವಿಶ್ವಾಸದಿಂದ ಹೇಳಿದ್ದಾರೆ.
2018ರ ವಿಧಾನಸಭಾ ಚುನಾವಣೆಗೂ ಮೊದಲು ಸದ್ಯಕ್ಕೆ ಉಪಚುನಾವಣೆಯತ್ತ ಯಡಿಯೂರಪ್ಪ ಹೆಚ್ಚಿನ ಗಮನ ಹರಿಸಿದ್ದಾರೆ. ಕಳೆದ ಮೂರು ವಾರಗಳಿಂದ ಮೈಸೂರಿನಲ್ಲೇ ಠಿಕಾಣಿ ಹೂಡಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಶತಾಯ ಗತಾಯ ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆ ಗೆಲ್ಲುವ ಪಣ ತೊಟ್ಟಿದ್ದಾರೆ. ಇದಕ್ಕಾಗಿ ಮುಂಚೂಣಿಯಲ್ಲಿ ನಿಂತು ಭರ್ಜರಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ಈ ಎಲ್ಲಾ ಹಿನ್ನಲೆಯಲ್ಲಿ ಇಂದು ನಂಜನಗೂಡಿಗೆ ಪ್ರಚಾರಕ್ಕೆ ತೆರಳುವ ಮೊದಲು ಯಡಿಯೂರಪ್ಪ ಜತೆ 'ಒನ್ ಇಂಡಿಯಾ'ದ ಅನುಶಾ ರವಿ ಸಂದರ್ಶನ ನಡೆಸಿದ್ದಾರೆ. ಉಪಚುನಾವಣೆ, ಬಿಜೆಪಿಗೆ ನಾಯಕರ ಸೇರ್ಪಡೆ, ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಸೇರಿದಂತೆ ಹಲವು ವಿಚಾರಗಳು ಈ ಸಂದರ್ಶನದಲ್ಲಿ ಹಾದು ಹೋಗಿವೆ.

ಮುಂಚೂಣಿಯಲ್ಲಿ ನಿಂತು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದೀರಿ. ಉಪಚುನಾವಣೆ ಗೆಲ್ಲುವ ಬಗ್ಗೆ ನಿಮ್ಮ ಲೆಕ್ಕಾಚಾರಗಳೇನು?
ಎರಡೂ ಕ್ಷೇತ್ರಗಳಲ್ಲಿ ನಮ್ಮ ಅಂದಾಜಿನ ಪ್ರಕಾರ ಕನಿಷ್ಠ 20,000 ದಿಂದ 25,000 ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದೇವೆ. ಎರಡೂ ಸ್ಥಾನಗಳನ್ನು ಗೆಲ್ಲುವ ಬಗ್ಗೆ ನಮಗೆ 100 ಶೇಕಡಾ ಭರವಸೆ ಇದೆ. ಜನರು ಬದಲಾವಣೆ ಬಯಸುತ್ತಿದ್ದಾರೆ. ಪ್ರತಿ ಗ್ರಾಮ, ರ್ಯಾಲಿಗಳಲ್ಲೂ ಎಲ್ಲಾ ಸಮುದಾಯದ ಜನ ಸೇರುತ್ತಿದ್ದಾರೆ. ಹೀಗೆ ಎಲ್ಲಾ ಸಮುದಾಯಗಳು ಒಟ್ಟಾಗಿ ಪಾಲ್ಗೊಳ್ಳುತ್ತಿರುವುದನ್ನು ನಾನು ಇದೇ ಮೊದಲು ನೋಡುತ್ತಿದ್ದೇನೆ. ನಂಜನಗೂಡು ಮಾತ್ರವಲ್ಲ ಗುಂಡ್ಲುಪೇಟೆಯಲ್ಲೂ ಪರಿಸ್ಥಿತಿ ಇದೇ ರೀತಿ ಇದೆ.

ಶ್ರೀನಿವಾಸ್ ಪ್ರಸಾದ್ ಪ್ರವೇಶ ಬಿಜೆಪಿಗೆ ಹೇಗೆ ಬಲ ತುಂಬಲಿದೆ?
ಅಟಲ್ ಬಿಹಾರಿ ವಾಜಪೇಯಿ ಸರಕಾರದಲ್ಲಿ ಶ್ರೀನಿವಾಸ್ ಪ್ರಸಾದ್ 5 ವರ್ಷ ಸಚಿವರಾಗಿದ್ದರು. ಕಂದಾಯ ಮಂತ್ರಿಯಾಗಿಯೂ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಅವರಂಥ ದಲಿತ ನಾಯಕರು ಬಿಜೆಪಿಗೆ ಶಕ್ತಿ ಇದ್ದಂತೆ. ಅವರ ನಂತರ ಎಸ್.ಎಂ ಕೃಷ್ಣಾ ಮತ್ತು ಕುಮಾರ್ ಬಂಗಾರಪ್ಪ ಕೂಡಾ ಬಿಜೆಪಿ ಸೇರಿದ್ದಾರೆ. ಅವರ ಸಮುದಾಯದವರಷ್ಟೇ ಅಲ್ಲ ಇಲ್ಲಿನ ಎಲ್ಲಾ ಜನರಿಗೂ ಶ್ರೀನಿವಾಸ್ ಪ್ರಸಾದ್ ಮೇಲೆ ಗೌರವ ಇದೆ. ಅವರು ನಿಜವಾಗಿಯೂ ನಮ್ಮ ಪಾಲಿನ ಶಕ್ತಿ.

ಗೀತಾ ಮಹದೇವ ಪ್ರಸಾದ್ ಪರ ಇರುವ ಅನುಕಂಪದ ಅಲೆಯನ್ನು ನಿರಂಜನ್ ಕುಮಾರ್ ಮೆಟ್ಟಿ ನಿಲ್ಲುತ್ತಾರಾ?
ನಾವು ನೋಡಿದ ಹಾಗೆ ನಿರಂಜನ್ ಕುಮಾರ್ ಪರ ಅನುಕಂಪದ ಅಲೆ ಇದೆ. ಅವರು ಎರಡು ಬಾರಿ ಚುನಾವಣೆ ಸೋತಿದ್ದಾರೆ. ಅವರ ತಂದೆಯೂ ಎರಡು ಬಾರಿ ಚುನಾವಣೆಯಲ್ಲಿ ಪರಾಭವಗೊಂಡಿದ್ದಾರೆ. ನಾನು ನೋಡಿದ ಹಾಗೆ ಅದು ಬಿಟ್ಟು ಬೇರೆ ಯಾರಿಗೂ ಅನುಕಂಪದ ಅಲೆ ಇಲ್ಲ. ಗುಂಡ್ಲುಪೇಟೆಯಲ್ಲಿ ಸೋಮವಾರ ನಡೆದ ಸಾರ್ವಜನಿಕ ಸಭೆಗೆ ಜನ ಅಭೂತಪೂರ್ವವಾಗಿ ಸ್ಪಂದಿಸಿದ್ದೇ ಇದಕ್ಕೆ ಸಾಕ್ಷಿ. ಈ ಬಿರು ಬಿಸಿಲಿಗೂ 25,000 ಕ್ಕೂ ಹೆಚ್ಚು ಜನ ಆಹಾರ ನೀರು ಇಲ್ಲದೆ ನಮಗಾಗಿ ಬಂದು ಸೇರಿದ್ದರು.

ಕಾವೇರಿ ಕೊಳ್ಳದ ಒಕ್ಕಲಿಗರ ಮತಗಳನ್ನು ಎಸ್.ಎಂ ಕೃಷ್ಣಾ ಸೆಳೆಯಬಲ್ಲರಾ?
ಎಲ್ಲಾ ಜಾತಿಗಳನ್ನು ಮೀರಿ ಎಸ್.ಎಂ ಕೃಷ್ಣಾ ಬಿಜೆಪಿಗೆ ಶಕ್ತಿ ತುಂಬಲಿದ್ದಾರೆ. ರಾಮನಗರ, ಮಂಡ್ಯ, ಹಾಸನ ಸೇರಿದಂತೆ ನಾವು ಎಲ್ಲೆಲ್ಲಾ ಹಿನ್ನಡೆಯಲ್ಲಿದ್ದೆವೋ ಅಲ್ಲೆಲ್ಲಾ ಅವರು ನಮಗೆ ಬಲ ತುಂಬಲಿದ್ದಾರೆ. ಒಕ್ಕಲಿಗ ಮತಗಳು ಮಾತ್ರ ಯಾಕೆ? ಬೆಂಗಳೂರಿನಲ್ಲಿಯೂ ಎಸ್ಎಂ ಕೃಷ್ಣ ಬಿಜೆಪಿಗೆ ಸಹಾಯ ಮಾಡಲಿದ್ದಾರೆ. ಬೆಂಗಳೂರಿನ ಐಟಿ-ಬಿಟಿ ಅಭಿವೃದ್ಧಿಯ ಪೂರ್ತಿ ಶ್ರೇಯಸ್ಸುಎಸ್.ಎಂ ಕೃಷ್ಣರಿಗೆ ಸಲ್ಲಬೇಕು. ಎಸ್ಎಂ ಕೃಷ್ಣ ಮತ್ತು ಶ್ರೀನಿವಾಸ ಪ್ರಸಾದ್ ಕಳೆದುಕೊಂಡಿದ್ದರಿಂದ ನಮಗೇನೂ ನಷ್ಟವಿಲ್ಲ ಎನ್ನದೇ ಕಾಂಗ್ರೆಸಿಗೆ ಬೇರೆ ವಿಧಿ ಇಲ್ಲ. ಫಲಿತಾಂಶ ಬಂದಾಗ ಅವರಿಗೆ ಮನವರಿಕೆಯಾಗಲಿದೆ.

2018ರ ವಿಧಾನಸಭಾ ಚುನಾವಣೆಗೆ ನಿಮ್ಮ ತಂತ್ರಗಾರಿಕೆಯೇನು?
2018ರ ಚುನಾವಣೆಗೆ ಕಳೆದ 6 ತಿಂಗಳಿನಿಂದ ಬಿಜೆಪಿ ಯೋಜನೆ ರೂಪಿಸುತ್ತಿದೆ. ಯಾವಾಗ ನನ್ನನ್ನು ಬಿಜೆಪಿ ಅಧ್ಯಕ್ಷರಾಗಿ ಆಯ್ಕೆ ಮಾಡಿದರೋ ಅಲ್ಲಿಂದ ನಾನು 2018ರ ಚುನಾವಣೆಗೆ ಕೆಲಸ ಆರಂಭಿಸಿದ್ದೇನೆ. ನಾವು ಸುಲಭವಾಗಿ 150 ಸ್ಥಾನಗಳನ್ನು ಗೆಲ್ಲಲಿದ್ದೇವೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸರಕಾರ ರಚಿಸುವ ಸಂಪೂರ್ಣ ಭರವಸೆ ಇದೆ.

ಸಾಮಾನ್ಯವಾಗಿ ಗೊತ್ತಿರುವಂತೆ ಬಿಜೆಪಿಯಲ್ಲಿ ಮುಖ್ಯಮಂತ್ರಿಯಾಗುವವರಿಗೆ 75ರ ವಯಸ್ಸಿನ ನಿಯಮ ಇದೆ. ಇದೇ ಇಲ್ಲೂ ಅನ್ವಯವಾದರೆ ನಿಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಯಾರು?
ಯಾಕೆ? ಆ ರೀತಿಯ ಯಾವುದೇ ನಿಯಮ ಇಲ್ಲ. ನಾನು ಮುಖ್ಯಮಂತ್ರಿ ಅಭ್ಯರ್ಥಿಯಾಗುವ ಬಗ್ಗೆ ಯಾವುದೇ ಸಂಶಯ ಇಲ್ಲ. ಹಂಡ್ರೆಡ್ ಪರ್ಸೆಂಟ್ ನಾನೇ ಮುಖ್ಯಮಂತ್ರಿ. ನನ್ನ ವಯಸ್ಸು ಯಾವುದೇ ಕಾರಣಕ್ಕೂ ಅಡ್ಡಿಯಾಗಲ್ಲ. ನಾನು ನಿಮಗೇ ಕೇಳ್ತೇನೆ, ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ನನ್ನ ವಯಸ್ಸು ಗೊತ್ತಿಲ್ವಾ? ಅಮಿತ್ ಶಾಗೆ ನನ್ನ ವಯಸ್ಸು ಗೊತ್ತಿಲ್ವಾ? ಎಲ್ಲಾ ಗೊತ್ತಿದ್ದೇ ಅವರು ನನ್ನನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ. 75 ವರ್ಷ ವಯಸ್ಸು ದಾಟಿದವರು ಮುಖ್ಯಮಂತ್ರಿಯಾಗಬಾರದು ಎಂಬ ಯಾವ ನಿಯಮವೂ ಬಿಜೆಪಿಯಲ್ಲಿಲ್ಲ. ನಾನೇ ಮುಖ್ಯಮಂತ್ರಿ ಅಭ್ಯರ್ಥಿ.
-
Train Delay: ರೈಲು ಪ್ರಯಾಣಿಕರೇ ಎಚ್ಚರ! ನಾಳೆ ಬೆಂಗಳೂರು-ಚೆನ್ನೈ ನಡುವಿನ ಸಂಚಾರದಲ್ಲಿ ಭಾರಿ ವ್ಯತ್ಯಯ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ












Click it and Unblock the Notifications