ವೈರಸ್ ಪತ್ತೆಗೆ ಮೈಸೂರಿಗೂ ಬಂತು ಲ್ಯಾಬ್ ಆನ್ ವ್ಹೀಲ್

ಮೈಸೂರು, ಅಕ್ಟೋಬರ್ 29: ಹೈಟೆಕ್ ಸಿಟಿಗಳಲ್ಲಿ ಮಾತ್ರ ಕಾಣಿಸುತ್ತಿದ್ದ ಮೊಬೈಲ್ ಲ್ಯಾಬ್ ವಾಹನ ಈಗ ಮೈಸೂರಿಗೂ ಬಂದಿದೆ. ಲ್ಯಾಬ್ ಆನ್ ವ್ಹೀಲ್ ಎಂಬ ಹೆಸರಿನ ಸಂಚಾರಿ ಲ್ಯಾಬ್ ಗೆ ಇಂದು ಚಾಲನೆ ನೀಡಲಾಗಿದೆ.

ಮೈಸೂರಿನ ಆಟೋಮೋಟಿವ್ ಎಕ್ಸೆಲ್ ಕಂಪನಿಯು ಸುಮಾರು 80 ಲಕ್ಷ ರೂಪಾಯಿ ವೆಚ್ಚದ ಈ ವಾಹನವನ್ನು ಸಾರ್ವಜನಿಕರ ಸೇವೆಗೆ ಅರ್ಪಿಸಿದೆ. ಕೊರೊನಾ ವೈರಾಣು ಸೇರಿದಂತೆ ಅಣುಜೀವಿಗಳು, ವೈರಾಣುಗಳು ಮತ್ತು ಶಿಲೀಂಧ್ರಗಳಿಂದ ಹರಡುವ ರೋಗಗಳ ಪತ್ತೆಗೆ ಅನುಕೂಲವಾಗುವ ಸಂಚಾರಿ ಪ್ರಯೋಗಾಲಯವನ್ನು ಕನ್ನಡಿಗ ಉದ್ಯಮಿಗಳು ಸಿದ್ಧಪಡಿಸಿದ್ದಾರೆ.

ಈ ಸಂಚಾರಿ ಪ್ರಯೋಗಾಲಯ ಗಾಲಿ ಮೇಲೆ ರೋಗಾಣು ಪತ್ತೆ ಮಾಡುವುದಾಗಿದೆ. ಗ್ರಾಮೀಣ ಪ್ರದೇಶದ ಜನರು ಮತ್ತು ರೋಗ ಪರೀಕ್ಷೆ ಮಾಡುವ ವ್ಯವಸ್ಥೆ ಇಲ್ಲದ ಪ್ರದೇಶಗಳ ಮಂದಿಗೆ ಈ ಲ್ಯಾಬ್ ವರದಾನವಾಗಲಿದೆ. ವೈದ್ಯರು, ಎಂಜಿನಿಯರ್ ಗಳು ಹಾಗೂ ಉದ್ಯಮಶೀಲರ ಜಂಟಿ ಕೊಡುಗೆ ಇದಾಗಿದೆ. ರೋಗ ಪರೀಕ್ಷೆಯ ವ್ಯವಸ್ಥೆಗಳಿಲ್ಲದ ಜಿಲ್ಲೆ, ತಾಲೂಕು ಕೇಂದ್ರಗಳಿಗೆ ಇದನ್ನು ಒದಗಿಸುವ ಇರಾದೆ ಸಂಸ್ಥೆಯದು.

Mysuru: Mobile Lab Named Lab On Wheel Launched To Detect Virus

ಈ ಪ್ರಯೋಗಾಲಯವನ್ನು ಜಿಲ್ಲಾ ಕೇಂದ್ರಗಳಾಗಲಿ, ಇತರ ಜಾಗಗಳಿರಲಿ, ಬೇಕಾದ ಜಾಗಕ್ಕೆ, ಜೀಪ್ ಇಲ್ಲವೇ ಟ್ರ್ಯಾಕ್ಟರ್ ಗಳ ಮೂಲಕ ಎಳೆದುಕೊಂಡು ಹೋಗಲು ಸಾಧ್ಯವಾಗುವಂತೆ ಅತ್ಯಾಧುನಿಕ ಟ್ರೈಲರ್ ಗಳ ಮೇಲೆ ಈ ಪ್ರಯೋಗಾಲಯವನ್ನು ಸ್ಥಾಪಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+