ಬಿಎಸ್‌ವೈ ರೈಲ್ವೆ ಇಂಜಿನ್‌ನಂತೆ, ನಾವು ಬೋಗಿಗಳು: ಎಸ್.ಎ. ರಾಮದಾಸ್
ಮೈಸೂರು, ಜುಲೈ 24: ರಾಜ್ಯದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಎಸ್.ಎ. ರಾಮದಾಸ್ ಪ್ರತಿಕ್ರಿಯೆ ನೀಡಿದ್ದಾರೆ.
Recommended Video
ಜೋಗ ಜಲಪಾತವನ್ನು ಈ ಸಮಯದಲ್ಲಿ ನೋಡಲು ಎರಡು ಕಣ್ಣು ಸಾಲದು | Oneindia Kannada
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ರಾಮದಾಸ್, "ನನ್ನ ತಲೆಯಲ್ಲಿ ರಾಜಕೀಯ ಇಲ್ಲ. ನಾನು ನನ್ನ ಕ್ಷೇತ್ರದ ಅಭಿವೃದ್ಧಿ ಕೆಲಸಗಳ ಮೇಲೆ ಗಮನ ಹರಿಸುತ್ತಿದ್ದೇನೆ. ನಾನು ಬೆಂಗಳೂರಿಗೂ ಹೋಗಿಲ್ಲ, ದೆಹಲಿಗೂ ಹೋಗಿಲ್ಲ,'' ಎಂದರು.
"ರಾಜಕಾರಣ ಹರಿಯುವ ನೀರು, ಯಾರು ಹೋಗ್ತಾರೆ, ಯಾರು ಬರುತ್ತಾರೆ ಅನ್ನುವ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಸಿಎಂ ಬಿ.ಎಸ್. ಯಡಿಯೂರಪ್ಪ ನನ್ನ ತಂದೆಯ ಸಮಾನ. ನಿರಂತರವಾಗಿ ನನ್ನನ್ನು ಯುವ ಮೋರ್ಚಾ ಅಧ್ಯಕ್ಷನನ್ನಾಗಿಸಿ ಬೆಳೆಸಿದವರು. ಯಡಿಯೂರಪ್ಪ ರೈಲ್ವೆ ಇಂಜಿನ್‌ನಂತೆ, ನಾವು ಬೋಗಿಗಳ ರೀತಿ ಅವರನ್ನು ಅನುಸರಿಸುತ್ತೇವೆ,'' ಎಂದಿದ್ದಾರೆ.

"ಸಿಎಂ ಯಡಿಯೂರಪ್ಪನವರು ಬಿಜೆಪಿ ಹೈಕಮಾಂಡ್ ತೀರ್ಮಾನಕ್ಕೆ ಬದ್ಧವಾದರೆ, ನಾನು ಯಡಿಯೂರಪ್ಪ ನಿರ್ಧಾರಕ್ಕೆ ಬದ್ಧ. ರಾಜಕಾರಣ ನಡೆಯುತ್ತಾ ಹೋಗುತ್ತದೆ, ಅದಕ್ಕೆ ನಾನಾಗಲಿ, ಮಠಾಧೀಶರಾಗಲಿ ಬೆಂಬಲ ಕೊಡುವ ಅವಶ್ಯಕತೆ ಇಲ್ಲ,'' ಎಂದು ಮೈಸೂರಿನಲ್ಲಿ ಶಾಸಕ ಎಸ್.ಎ. ರಾಮದಾಸ್ ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications