ಬಂಬೂವಿನಲ್ಲಿ ಮಸಾಲ ತುಂಬಿ ಆಹಾರ ಮೇಳಕ್ಕೆ ಚಾಲನೆ ನೀಡಿದ ಖಾದರ್

ಮೈಸೂರು, ಸೆಪ್ಟೆಂಬರ್ 21 : ಮೈಸೂರು ದಸರಾ ಆಹಾರ ಮೇಳಕ್ಕೆ ಗುರುವಾರ ಚಾಲನೆ ನೀಡಲಾಯಿತು. ನಗರದ ಸ್ಕೌಟ್ಸ್- ಗೈಡ್ಸ್ ಮೈದಾನದಲ್ಲಿ ಸಚಿವ ಯು.ಟಿ.ಖಾದರ್ ಬಂಬೂವಿನಲ್ಲಿ ಮಸಾಲ ತುಂಬಿಸುವ ಮೂಲಕ ಆಹಾರ ಮೇಳಕ್ಕೆ ಚಾಲನೆ ನೀಡಿದರು.

In Pics : ಖಾಸಗಿ ದರ್ಬಾರ್ ನಲ್ಲಿ ಯದುವೀರರಿಗೆ ತ್ರಿಷಿಕಾರಿಂದ ಪೂಜೆ

ಆ ಬಳಿಕ ಮಾತನಾಡಿದ ಅವರು, ಇಲ್ಲಿ ಶುಚಿ ಮತ್ತು ರುಚಿಯಾದ ಆಹಾರ ಜನತೆಗೆ ಲಭ್ಯವಿದೆ. ಹಾಡಿಗಳಿಂದ ಬಂದಂತಹ ಜನರು ಅವರ ಖಾದ್ಯಗಳನ್ನು ನಿಮಗೆ ಪರಿಚಯಿಸುತ್ತಿದ್ದಾರೆ. ಇದು ಆರೋಗ್ಯಪೂರ್ಣ ಆಹಾರ. ಜನತೆ ಈಗಾಗಲೇ ಈ ಆಹಾರಕ್ಕೆ ಮನ ಸೋತಿರುವುದು ಇಲ್ಲಿ ಸೇರಿರುವ ಜನರನ್ನು ನೋಡಿದರೆ ತಿಳಿದುಬರುತ್ತದೆ ಎಂದರು.

Minister UT Khader inaugurates Mysuru Dasra food festival

ಆಹಾರ ಮೇಳಕ್ಕೆ ಬಂದ ಯು.ಟಿ.ಖಾದರ್ ಅವರನ್ನು ಸಾಂಸ್ಕೃತಿಕ ಕಲಾತಂಡಗಳಾದ ಕಂಸಾಳೆ, ಡೊಳ್ಳುಕುಣಿತ, ನಂದಿ ಧ್ವಜ, ಪೂಜಾ ಕುಣಿತದೊಂದಿಗೆ ದಸರಾ ಆಹಾರ ಮೇಳ ಉಪ ಸಮಿತಿಯಿಂದ ಸ್ವಾಗತಿಸಲಾಯಿತು. ‌

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಡಾ.ಕಾ.ರಾಮೇಶ್ವರಪ್ಪ, ಉಪ ಮಹಾಪೌರರಾದ ರತ್ನಾ ಲಕ್ಷಣ್, ತಾಲೂಕು ಪಂಚಾಯಿತಿ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ಸಚಿವ ತನ್ವೀರ್ ಸೇಠ್ ಮತ್ತಿತರರು ಉಪಸ್ಥಿತರಿದ್ದರು

Minister UT Khader inaugurates Mysuru Dasra food festival

ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ ಆಯೋಜಿಸಿರುವ ಆಹಾರ ಮೇಳದಲ್ಲಿ 93 ಮಳಿಗೆಗಳು ಮತ್ತು ಲಲಿತಾ ಮಹಲ್ ಮುಡಾ ಪಾರ್ಕ್ ನಲ್ಲಿ ಆಯೋಜಿಸಿರುವ ಆಹಾರ ಮೇಳದಲ್ಲಿ 75 ಮಳಿಗೆಗಳಿವೆ. ಇಲ್ಲಿ ಬಂಬೂ ಬಿರಿಯಾನಿ, ಮರಗೆಣಸು ಸೇರಿದಂತೆ ವಿವಿಧ ರೀತಿಯ ರುಚಿರುಚಿಯಾದ ಖಾದ್ಯಗಳು ಲಭ್ಯ ಇವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+