• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಧಿಕಾರ ಬಿಡುವಾಗಲೂ ರೋಹಿಣಿ ಸಿಂಧೂರಿ ವಿರುದ್ಧ ಶಿಲ್ಪಾನಾಗ್ ಆಕ್ರೋಶ!

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜೂನ್ 06; ಮೈಸೂರು ಮಹಾನಗರ ಪಾಲಿಕೆ ನೂತನ ಆಯುಕ್ತರಾಗಿ ಲಕ್ಷ್ಮೀಕಾಂತ ರೆಡ್ಡಿ ಅಧಿಕಾರ ಸ್ವೀಕರಿಸಿದರು. ಭಾನುವಾರ ನಿರ್ಗಮಿತ ಆಯುಕ್ತೆ ಶಿಲ್ಪಾನಾಗ್‌ ಅಧಿಕಾರ ಹಸ್ತಾಂತರ ಮಾಡಿದರು.

ವರ್ಗಾವಣೆ ಆದೇಶದ ಬಳಿಕವೂ ನಿರ್ಗಮಿತ ಐಎಎಸ್ ಅಧಿಕಾರಿಗಳ ವಾಕ್ಸಮರ ಮುಂದುವರೆದಿದೆ. "ನನ್ನ ಜೀವನದಲ್ಲೇ ಇಂತಹ ಅಧಿಕಾರಿಯನ್ನು ನೋಡಿರಲಿಲ್ಲ" ಎಂದು ರೋಹಿಣಿ ಸಿಂಧೂರಿ ವಿರುದ್ಧ ಶಿಲ್ಪಾನಾಗ್ ವಾಗ್ದಾಳಿ ನಡೆಸಿದರು.

ಈಜುಕೊಳ ನಿರ್ಮಾಣ ವಿವಾದ; ಸ್ಪಷ್ಟನೆ ಕೊಟ್ಟ ರೋಹಿಣಿ ಸಿಂಧೂರಿ ಈಜುಕೊಳ ನಿರ್ಮಾಣ ವಿವಾದ; ಸ್ಪಷ್ಟನೆ ಕೊಟ್ಟ ರೋಹಿಣಿ ಸಿಂಧೂರಿ

ಮೈಸೂರು ಮಹಾನಗರ ಪಾಲಿಕೆ ನೂತನ ಆಯುಕ್ತರಿಗೆ ಅಧಿಕಾರ ಹಸ್ತಾಂತರ ಮಾಡಿದ ಬಳಿಕ ಮಾತನಾಡಿದ ಅವರು, "ಮೈಸೂರಿನಲ್ಲಿ ಯಾರೇ ಅಧಿಕಾರಿ ಬಂದರು ಕೆಲಸ ಮಾಡುತ್ತಾರೆ. ಆದರೆ ಹಾಳು ಮಾಡುವಂತ ಅಧಿಕಾರಿ ಬೇಡ, ನನ್ನ ಜೀವನದಲ್ಲೇ ಇಂತಹ ಅಧಿಕಾರಿಯನ್ನು ನೋಡಿರಲಿಲ್ಲ.‌ ಇದೇ ಮಾತನ್ನು ನಾನು ಹೇಳಿದ್ದೆ, ಹೀಗೆ ಮಾತನಾಡಿರುವುದಕ್ಕೆ ನನಗೆ ಬೇಸರ ಇಲ್ಲ" ಎಂದರು.

ಉಸ್ತುವಾರಿ ಸಚಿವರ ವೈಫಲ್ಯವೇ, ರೋಹಿಣಿ vs ಶಿಲ್ಪಾನಾಗ್ ಜಟಾಪಟಿಗೆ ಕಾರಣ!? ಉಸ್ತುವಾರಿ ಸಚಿವರ ವೈಫಲ್ಯವೇ, ರೋಹಿಣಿ vs ಶಿಲ್ಪಾನಾಗ್ ಜಟಾಪಟಿಗೆ ಕಾರಣ!?

"ಯಾರ ಮನೆಯಲ್ಲಿ ರಿಯಲ್ ಎಸ್ಟೇಟ್ ಬ್ರೋಕರ್‌ಗಳು ಇದ್ದಾರೆ ಅನ್ನೋದು ಗೊತ್ತಿದೆ. ಅನಧಿಕೃತ ವ್ಯಕ್ತಿಯನ್ನು ಅಧಿಕೃತ ಮನೆಗೆ ಕರೆಸಿಕೊಂಡು ಯಾವ ಮಾಹಿತಿ ನೀಡಿದರು ಅನ್ನೋದು ಗೊತ್ತಿದೆ. ನನ್ನ ಟ್ರ್ಯಾಕ್ ರೆಕಾರ್ಡ್ ಹಾಗೂ ಅವರ ಟ್ರ್ಯಾಕ್ ರೆಕಾರ್ಡ್ ಕೂಡ ನೋಡಲಿ" ಎಂದು ರೋಹಿಣಿ ಸಿಂಧೂರಿ ವಿರುದ್ದ ಶಿಲ್ಪಾನಾಗ್ ಕಿಡಿಕಾರಿದರು.

"ಅವರು ಯಾವುದಕ್ಕೆ ಲೆಕ್ಕ ಕೇಳಿದರೂ ಎಲ್ಲದಕ್ಕು ಲೆಕ್ಕ ಕೊಟ್ಟಿದ್ದೇನೆ. ಆದರೂ ಸುಮ್ಮನೆ ಅನವಶ್ಯಕವಾಗಿ ಗಬ್ಬೆಬ್ಬಿಸುವ ಕೆಲಸ ಮಾಡಿದರು. ಯಾವ ರೀತಿಯ ತನಿಖೆ ಬೇಕಾದರೂ ಮಾಡಿಸಲಿ. ಅದಕ್ಕೆ ದಾಖಲೆ ಇದೆ. 12 ಕೋಟಿ ರೂ. ಅಂತ ಹೇಳಿದ್ದಾರೆ. ಅದ್ಯಾವ 12 ಕೋಟಿ ಅಂತ ಅವರೇ ಹೇಳಲಿ. ನಾವು ಒಂದೂ ಪೈಸೆಯನ್ನು ಕ್ಯಾಶ್ ನಲ್ಲಿ ತೆಗೆದುಕೊಂಡಿಲ್ಲ. ತೆಗೆದುಕೊಂಡಿರುವ ಎಲ್ಲದಕ್ಕೂ ಪಾಲಿಕೆಯಲ್ಲಿ ದಾಖಲೆ ಇದೆ" ಎಂದರು.

ಮೈಸೂರು: ಡಿಸಿ ರೋಹಿಣಿ ಆರೋಪಕ್ಕೆ ಪಕ್ಕಾ ಲೆಕ್ಕ ಕೊಟ್ಟ ಶಿಲ್ಪಾನಾಗ್ಮೈಸೂರು: ಡಿಸಿ ರೋಹಿಣಿ ಆರೋಪಕ್ಕೆ ಪಕ್ಕಾ ಲೆಕ್ಕ ಕೊಟ್ಟ ಶಿಲ್ಪಾನಾಗ್

ಇದೇ ವೇಳೆ ವರ್ಗಾವಣೆ ಕುರಿತು ಮಾತನಾಡಿದ ಅವರು, "ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತ ಮಾಡುತ್ತೇನೆ. ಸೋಮವಾರ ಹೋಗಿ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಅಧಿಕಾರ ಸ್ವೀಕಾರ ಮಾಡುವೆ. ನಾನು ನನ್ನ ರಾಜೀನಾಮೆ ವಾಪಸ್ ಪಡೆದಿದ್ದೇನೆ. ನಾನು ರಾಜೀನಾಮೆ ಕೊಟ್ಟಿದ್ದು ಒಂದೇ ಉದ್ದೇಶಕ್ಕೆ. ಇಂತಹ ಅಧಿಕಾರಿಗಳು ಯಾವ ಜಾಗದಲ್ಲೂ ಇರಬಾರದು ಅಂತ. ಆದರೆ ಇದೀಗ ನಾನು ಹಾಗೂ ಅವರು ವರ್ಗಾವಣೆ ಆಗಿದ್ದಾರೆ. ನನ್ನ ರಾಜೀನಾಮೆ ಆದೇಶ ವಾಪಾಸ್ ಪಡೆದಿದ್ದೇನೆ" ಎಂದು ಸ್ಪಷ್ಟಪಡಿಸಿದರು.

English summary
Lakshmikanth Reddy IAS took charge as Mysuru city corporation commissioner in the presence of Shilpa Nag. Karnataka govt transferred Shilpa Nag on June 5th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X