Get Updates
Get notified of breaking news, exclusive insights, and must-see stories!

ಲಕ್ಷದ್ವೀಪಕ್ಕೂ-ಮೈಸೂರಿಗಿರುವ ನಂಟು ಎಂಥಹದ್ದು ಗೊತ್ತಾ?, ಮಾಹಿತಿ ಇಲ್ಲಿದೆ ತಿಳಿಯಿರಿ

ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟೀ ನೀಡಿದಾಗಿನಿಂದಲೂ, ಇಡೀ ಜಗತ್ತಿನ ಲಕ್ಷ್ಯ ಈ ಸುಂದರ ತಾಣದತ್ತ ನೆಟ್ಟಿದೆ. ಏಕೆಂದರೆ ಮಾಲ್ಡೀವ್ಸ್‌ಗಿಂತಲೂ ಇದೇ ಅತ್ಯದ್ಭುತ ತಾಣವೆಂತಲೂ ಭಾರತದ ಸಾಮಾನ್ಯ ಪ್ರಜೆಯಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು, ಸೆಲೆಬ್ರೆಟಿಗಳೂ ಅನಿಕೆಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಈ ಅದ್ಭುತ ದ್ವೀಪ ಭಾರತದ ಪಾಲಾಗಲು ನಮ್ಮ ರಾಜ್ಯದ ಮೈಸೂರು ರಾಜಮನೆತನದ ಶ್ರಮವೂ ಸಾಕಷ್ಟಿದೆ ಅದು ಹೇಗೆ ಅಂತೀರಾ ಇಲ್ಲಿದೆ ನೋಡಿ ಮಾಹಿತಿ.

ಲಕ್ಷದ್ವೀಪವನ್ನು ಲಕ್ಕಾಡಿವ್ಸ್ ಅಂತಳು ಕರೆಯುತ್ತಾರೆ. ಇದು ಭಾರತೀಯ ಕೇಂದ್ರಾಡಳಿತ ಪ್ರದೇಶವಾಗಿದ್ದು, ಅರೇಬಿಯನ್ ಸಮುದ್ರದಲ್ಲಿರುವ 36 ದ್ವೀಪಗಳ ಸಮೂಹವಾಗಿದೆ . ಇದು ಭಾರತದ ಮಲಬಾರ್ ಕರಾವಳಿಯಿಂದ ಸರಿಸುಮಾರು 200ರಿಂದ 440 ಕಿಲೋ ಮೀಟರ್‌ಗಳ ಅಂತರವನ್ನು ಹೊಂದಿದೆ .

Lakshadweep: Inextricable relationship between Lakshadweep and Mysuru, how?

ಸುದೀರ್ಘ ಇತಿಹಾಸ ಹೊಂದಿರುವ ಲಕ್ಷದ್ವೀಪ: ಈ ದ್ವೀಪವು ಸುದೀರ್ಘ ಇತಿಹಾಸವನ್ನು ಹೊಂದಿದೆ ಮತ್ತು ಪಶ್ಚಿಮದಿಂದ ಹಲವಾರು ಪ್ರಯಾಣಿಕರು ದ್ವೀಪಗಳಿಗೆ ಭೇಟಿ ನೀಡಿದ್ದಾರೆ. ಭಾರತದಲ್ಲಿ ಮೊದಲು ರಾಜರ ಆಡಳಿತವಿತ್ತು. ಈ ದ್ವೀಪ ಭಾರತದ ಪಾಲಾಗಲು ರಾಜವಂಶಗಳ ಕೊಡುಗೆ ಅಪಾರವಾಗಿದೆ. ಅದರಲ್ಲೂ ಮೈಸೂರು ರಾಜವಂಶಸ್ಥರದ್ದು ಇದಕ್ಕೆ ಅಪಾರ ಕೊಡುಗೆ ಇದೆ ಎನ್ನುವುದೇ ನಮ್ಮ ಕರ್ನಾಟಕದ ಹೆಮ್ಮೆ.

ಸುಮಾರು 2,000 ವರ್ಷಗಳಿಂದ ಈ ದ್ವೀಪಗಳನ್ನು ವಿವಿಧ ಸಾಹಿತ್ಯದಲ್ಲಿ ಉಲ್ಲೇಖಿಸಲಾಗಿದೆ ಎಂದು ವರದಿಗಳಿವೆ. ಭಾರತಕ್ಕೆ, ಲಕ್ಷದ್ವೀಪವು ನಿರ್ಣಾಯಕ ಕಾರ್ಯತಂತ್ರದ ಬಿಂದುವಾಗಿದೆ. ಆಗಿನ ಕಾಲದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಈ ದ್ವೀಪಗಳನ್ನು ಭಾರತದ ಅವಿಭಾಜ್ಯ ಅಂಗವಾಗಿಸಲು ಪ್ರಮುಖ ಕೊಡುಗೆ ನೀಡಿದ್ದಾರೆ.

ಅರಬ್ಬೀ ಸಮುದ್ರದಲ್ಲಿರುವ ಕೆಲವು ದ್ವೀಪಗಳು ಕೂಡ ಲಕ್ಷದ್ವೀಪಕ್ಕೆ ಸೇರಿವೆ. ಈ ದ್ವೀಪಗಳನ್ನು ಭಾರತದಿಂದ ಪ್ರತ್ಯೇಕಿಸಲಾಗಿದೆ. ಮಹಾತ್ಮ ಗಾಂಧೀಜಿಯವರ ಹತ್ಯೆಯಾದ 14 ದಿನಗಳ ನಂತರ ಲಕ್ಷದ್ವೀಪದ ಬಗ್ಗೆ ಇಲ್ಲಿನ ಜನರಿಗೆ ಗೊತ್ತಾಯಿತು ಎನ್ನುವ ಉಲ್ಲೇಖಗಳಿವೆ. ಆದರೂ ಇಲ್ಲಿನ ದ್ವೀಪಸಮೂಹವು ದೀರ್ಘ ಮತ್ತು ಆಳವಾದ ಇತಿಹಾಸವನ್ನು ಹೊಂದಿದೆ.

ಪೋರ್ಚುಗೀಸ್ ನಾವಿಕ ವಾಸ್ಕೋ ಡ ಗಾಮಾ ಗುಂಪಿನ ದ್ವೀಪಕ್ಕೆ ಕಾಲಿಡುವ ಮೂಲಕ ಇಲ್ಲಿಗೆ ಬಂದ ಮೊದಲ ಯುರೋಪಿಯನ್ ಎನಿಸಿಕೊಂಡ. ಆಧುನಿಕ ಕಾಲದಲ್ಲಿ, ಬ್ರಿಟಿಷರು ದ್ವೀಪಗಳನ್ನು ಸುತ್ತಿದರು ಮತ್ತು ಸಮೀಕ್ಷೆ ನಡೆಸಿದರು. ಬ್ರಿಟೀಷ್ ಯುಗದಲ್ಲಿ, ಲಕ್ಷದ್ವೀಪ ನಿಯಂತ್ರಣವನ್ನು 1912ರಲ್ಲಿ ಪರಿಚಯಿಸಲಾಯಿತು. ಈ ನಿಯಂತ್ರಣವು ದ್ವೀಪಗಳ ಅಮೀನ್‌ಗಳು ಅಥವಾ ಸ್ಥಳೀಯ ಆಡಳಿತಗಾರರ ನ್ಯಾಯಾಂಗ ಅಧಿಕಾರವನ್ನು ಕಡಿತಗೊಳಿಸಿತು.

ನಂತರ ಈ ದ್ವೀಪಗಳನ್ನು 1947ರಲ್ಲಿ ಭಾರತೀಯ ಉಪಖಂಡಕ್ಕೆ ಹಿಂತಿರುಗಿಸಲಾಯಿತು. 1956ರ ರಾಜ್ಯಗಳ ಮರುಸಂಘಟನೆ ಕಾಯಿದೆಯ ಪ್ರಕಾರ, ದ್ವೀಪಗಳ ಗುಂಪಿಗೆ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನವನ್ನು ನೀಡಲಾಯಿತು. ಈ ವೇಳೆ ಲಕ್ಷದ್ವೀಪವನ್ನು ಭಾರತದ ಅವಿಭಾಜ್ಯ ಅಂಗವಾಗಿಸಲು ಸರ್ದಾರ್ ಪಟೇಲ್ ಪ್ರಮುಖ ಪಾತ್ರ ವಹಿಸಿದರು.

ಪ್ರಮುಖ ಪಾತ್ರ ವಹಿಸಿದ್ದ ಪಟೇಲ್: ಆಗ ದ್ವೀಪಗಳ ನಿವಾಸಿಗಳಿಗೆ ಹೊರಗಿನ ಪ್ರಪಂಚದ ಬಗ್ಗೆ ತಿಳಿದಿರಲಿಲ್ಲ. ಈ ವೇಳೆ ಪಾಕಿಸ್ತಾನವು ದ್ವೀಪಗಳ ಬಗ್ಗೆ ಆಸಕ್ತಿ ವಹಿಸಿ ಲಕ್ಷದ್ವೀಪದಲ್ಲಿ ತನ್ನ ಆಡಳಿತ ನಡೆಸಲು ಮುಂದಾಗುತ್ತದೆ ಎಂದು ಮೊದಲೇ ಪಟೇಲ್ ಊಹಿಸಿದ್ದರು. ನಂತರ ಅಲ್ಲಿಗೆ ಪಾಕಿಸ್ತಾನ ಬಂದು ನೆಲೆಯೂರುವ ಮುನ್ನವೇ ಪಟೇಲ್‌ ಅವರು ಸೈನ್ಯವನ್ನು ಕಳುಹಿಸಿ ಭಾರತದ ಧ್ವಜವನ್ನು ನೆಡುವ ಮೂಲಕ ದ್ವೀಪವನ್ನು ಭಾರತದ ಪಾಲಾಗುವಂತೆ ಮಾಡಿದರು ಎನ್ನುವ ಉಲ್ಲೇಖಗಳಿವೆ.

ಲಕ್ಷದ್ವೀಪ & ಮೈಸೂರಿಗೂ ಅವಿನಾಭಾವ ಸಂಬಂಧ: ಅದರಲ್ಲೂ ಪಟೇಲರು ಕಳುಹಿಸಿದ ಸೈನ್ಯದಲ್ಲಿ ಆಗಿನ ನಮ್ಮ ರಾಜ್ಯವಾಗಿದ್ದ ಮೈಸೂರು ರಾಜವಂಶಸ್ಥರ ಸೈನಿಕರು ಕೂಡ ಇದ್ದರು. ಈ ಮೂಲಕ ಲಕ್ಷದ್ವೀಪ ಭಾರತದ ಪಾಲಾಗಲು ಈಗಿನ ಕರ್ನಾಟಕ ರಾಜ್ಯ ಹಾಗೂ ಆಗಿನ ರಾಜ್ಯವಾಗಿದ್ದ ಮೈಸೂರಿನ ಕೊಡುಗೆಯೂ ಇದೆ ಎನ್ನುವುದೇ ಹೆಮ್ಮೆಯ ವಿಚಾರ.

ದ್ವೀಪದಲ್ಲಿ ಹಾರಾಡಿದ ಭಾರತದ ಧ್ವಜ: ಈ ವೇಳೆ ಹಲವಾರು ರಾಜ್ಯಗಳನ್ನು ಏಕೀಕರಿಸುವಲ್ಲಿ ನಿರತರಾಗಿದ್ದ ಪಟೇಲ್, ಪಾಕಿಸ್ತಾನವು ಯಾವುದೇ ಕ್ರಮವನ್ನು ಕೈಗೊಳ್ಳುವ ಮೊದಲೇ ಭಾರತೀಯ ನೌಕಾಪಡೆಯನ್ನು ಸೂಕ್ತ ಸಮಯದಲ್ಲಿ ಲಕ್ಷದ್ವೀಪ ಬಂದರಿಗೆ ಕಳುಹಿಸಿದರು. ಪರಿಶೀಲಿಸದಿದ್ದರೂ, ಪಾಕಿಸ್ತಾನದ ನೌಕಾಪಡೆಯು ದ್ವೀಪದತ್ತ ಸಾಗುತ್ತಿದೆ ಎನ್ನುವ ಮುನ್ಸೂಚನೆ ಇತ್ತು. ಆದರೆ ದ್ವೀಪದಲ್ಲಿ ಭಾರತದ ಧ್ವಜ ಹಾರಾಡುತ್ತಿರುವುದನ್ನು ನೋಡಿದ ತಕ್ಷಣ ಅಲ್ಲಿಂದ ಪಾಕಿಸ್ತಾನ ಹಿಂದೆ ಸರಿದಿದ್ದು, ಅದು ಭಾರತದ ಭಾಗವಾಯಿತು.

ಪ್ರಾಂತ್ಯಗಳ ವಿವರ: ಸ್ವಾತಂತ್ರ್ಯಕ್ಕಾಗಿ ಶತಮಾನಗಳ ಸುದೀರ್ಘ ಹೋರಾಟ ಮತ್ತು ಸಾವಿರಾರು ತ್ಯಾಗಗಳ ಹೊರತಾಗಿ, ಸ್ವಾತಂತ್ರ್ಯದ ಸಮಯದಲ್ಲಿ ಭಾರತವು ವಿಭಜನೆಯ ಆಂತರಿಕ ಸಮಸ್ಯೆಯನ್ನು ನಿವಾರಿಸಿತು. ವಸಾಹತುಶಾಹಿ ಅವಧಿಯಲ್ಲಿ, ಭಾರತವನ್ನು ಹಲವಾರು ರಾಜಪ್ರಭುತ್ವದ ಪ್ರಾಂತ್ಯಗಳಾಗಿ ವಿಂಗಡಿಸಲಾಗಿದೆ. ಅಂದಾಜು ಸರಿಸುಮಾರು 540-565 ಪ್ರಾಂತ್ಯಗಳು ಇದ್ದವು ಎನ್ನಲಾಗಿದ್ದು, ಇದರಲ್ಲಿ ಮೈಸೂರು ಪ್ರಾಂತ್ಯವೂ ಕೂಡ ಒಂದಾಗಿತ್ತು ಎನ್ನುವ ಉಲ್ಲೇಖಗಳಿವೆ.

ಈ ಪ್ರಾಂತ್ಯಗಳಲ್ಲಿ ಹೈದರಾಬಾದ್, ಜುನಗರ, ಜಮ್ಮು ಮತ್ತು ಕಾಶ್ಮೀರ ಮತ್ತು ಇತರವುಗಳು. ಅದರಲ್ಲಿ ಲಕ್ಷದ್ವೀಪವೂ ಒಂದಾಗಿತ್ತು ಎಂದು ಹೆಳಲಾಗುತ್ತಿದೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಪ್ರಾಂತ್ಯಗಳ ವಿಭಜನೆಯ ಸಮಯದಲ್ಲಿ ಭಾರತದಲ್ಲಿ 562 ರಾಜಪ್ರಭುತ್ವದ ರಾಜ್ಯಗಳನ್ನು ಏಕೀಕರಣಗೊಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.

ಜುನಗರ್ ಮತ್ತು ಹೈದರಾಬಾದ್‌ನಂತಹ ಹಲವಾರು ರಾಜಪ್ರಭುತ್ವದ ರಾಜ್ಯಗಳು ಪಾಕಿಸ್ತಾನದೊಂದಿಗೆ ಏಕೀಕರಣಗೊಳ್ಳಲು ಪ್ರಯತ್ನಿಸುತ್ತಿದ್ದ ಅವಧಿ ಅದು. ಆದರೂ ಅದು ಸಂಭವಿಸಲಿಲ್ಲ, ಏಕೆಂದರೆ ಭಾರತದ ಉಕ್ಕಿನ ಮನುಷ್ಯ ಅಂತಲೇ ಹೆಸರುವಾಸಿಯಾಗಿದ್ದ ಸರ್ದಾರ್ ಪಟೇಲ್ ಇದಕ್ಕೆ ಅವಕಾಶ ಮಾಡಿಕೊಟ್ಟಿರಲಿಲ್ಲ.

ಪಟೇಲರಿಗೆ ಭಾರತದ ಅಧಿಪತ್ಯದ ಅಡಿಯಲ್ಲಿ 560 ಕ್ಕೂ ಹೆಚ್ಚು ರಾಜಪ್ರಭುತ್ವದ ರಾಜ್ಯಗಳನ್ನು ಸಂಯೋಜಿಸುವ ಕಾರ್ಯವನ್ನು ನಿಯೋಜಿಸಲಾಯಿತು. ಆಗಸ್ಟ್ 6, 1947ರಂದು, ಅವರು ಏಕೀಕರಣದ ಪ್ರಕ್ರಿಯೆಯನ್ನು ಪ್ರಾರಂಭಿಸಿದರು. ಮತ್ತು ಅವರ ರಾಜಕೀಯ ಪ್ರಬುದ್ಧತೆ, ಮನವೊಲಿಸುವ ಕೌಶಲ್ಯದಿಂದ ಅವರು ಎಲ್ಲಾ ಪ್ರಾಂತ್ಯಗಳನ್ನು ಸಂಪೂರ್ಣವಾಗಿ ಸಂಯೋಜಿಸಿದರು. ಜಮ್ಮು ಮತ್ತು ಕಾಶ್ಮೀರ, ಜುನಾಗರ್ ಮತ್ತು ಹೈದರಾಬಾದ್‌ನಂತಹ ರಾಜ್ಯಗಳು ಭಾರತದೊಂದಿಗೆ ಏಕೀಕರಣವನ್ನು ವಿರೋಧಿಸಿದವು. ಆದರೆ ಪಟೇಲರ ತಂತ್ರಗಳಿಂದ ಎಲ್ಲಾ ಪ್ರತಿರೋಧವನ್ನು ಮೀರಿಸಿ ಇವುಗಳೆಲ್ಲೆ ಭಾರತದಲ್ಲೇ ಇರುವಂತೆ ಆಯಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+