ಶ್ರೀಕಂಠದತ್ತ ಒಡೆಯರ್ ಉತ್ತರಾಧಿಕಾರಿ ಯಾರು?
ಮೈಸೂರು, ಡಿ. 11 : ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸಾವಿನ ಬಳಿಕ ಯದುವಂಶದ ಮುಂದಿನ ಉತ್ತರಾಧಿಕಾರಿ ಯಾರು? ಎಂಬ ಕುತೂಹಲಕಾರಿ ಪ್ರಶ್ನೆ ಉದ್ಭವವಾಗಿದೆ. ಯಾರಿಗೆ ಪಟ್ಟಾಭಿಷೇಕ ಮಾಡಬೇಕು ಎಂಬ ಕುರಿತು ಒಡೆಯರ್ ವಿಲ್ ಬರೆದಿಟ್ಟಿದ್ದಾರೆಯೇ? ಎಂಬ ಕುತೂಹಲಗಳಿಗೆ ಇನ್ನೂ ತೆರೆ ಬಿದ್ದಿಲ್ಲ. ಆದರೆ, ಒಡೆಯರ್ ಅಂತ್ಯಕ್ರಿಯೆ ಆಗುವ ಮೊದಲು ಉತ್ತಾರಾಧಿಕಾರಿ ಯಾರು ಎಂಬ ಪ್ರಶ್ನಗೆ ಉತ್ತರ ದೊರೆಯಲಿದೆ.
ಶ್ರೀಕಂಠದತ್ತ ಒಡೆಯರ್ ಮತ್ತು ಪ್ರಮೋದದೇವಿ ಅವರಿಗೆ ಮಕ್ಕಳಿರಲಿಲ್ಲ. ಆದ್ದರಿಂದ ಖಾಸಗಿ ಸಂಸ್ಥಾನಕ್ಕೆ ದತ್ತು ಪಡೆಯುವುದು ಅವರಿಗೆ ಅನಿವಾರ್ಯವಾಗಿತ್ತು. ಒಡೆಯರ್ ತಮ್ಮ ಹಿರಿಯ ಸೋದರಿಯರಾದ ಗಾಯತ್ರಿದೇವಿ ಇಲ್ಲವೇ ಮೀನಾಕ್ಷಿ ದೇವಿ ಅವರ ಪುತ್ರರ ಪೈಕಿ ಒಬ್ಬರನ್ನು ಉತ್ತರಾಧಿಕಾರಿಯಾಗಿ ನೇಮಿಸಲು ಸಿದ್ಧತೆ ನಡೆಸಿದ್ದರು ಎಂಬ ಮಾಹಿತಿ ಇತ್ತು. (ಶ್ರೀಕಂಠದತ್ತ ಒಡೆಯರ್ ವಿಧಿವಶ)

ಗಾಯತ್ರಿದೇವಿ ಅವರ ಪುತ್ರ ಕಾಂತರಾಜ ಅರಸ್ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಉತ್ತರಾಧಿಕಾರಿಯಾಗಿ ನೇಮಕಗೊಳ್ಳಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ. ಬುಧವಾರ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅಂತ್ಯಕ್ರಿಯೆ ಆಗುವ ಮುನ್ನವೇ ಈ ಪ್ರಶ್ನೆಗೆ ಉತ್ತರ ದೊರಕಲಿದ್ದು, ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಬಗೆಹರಿಯಲಿದೆ. (ಮಧುವನದಲ್ಲಿ ಒಡೆಯರ್ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ)
ಶ್ರೀಕಂಠದತ್ತ ಒಡೆಯರ್ ಮೊದಲಿನಿಂದಲೂ ಗಾಯತ್ರಿದೇವಿ ಅವರ ಪುತ್ರ ಕಾಂತರಾಜೇ ಅರಸ್(36) ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದರು. ಆದ್ದರಿಂದ ಅವರನ್ನು ಉತ್ತರಾಧಿಕಾರಿಯಾಗಿ ನೇಮಿಸುವ ಸಾಧ್ಯತೆ ಗಳಿವೆ. ಶ್ರೀಕಂಠದತ್ತ ಒಡೆಯರ್ ಈ ಕುರಿತು ವಿಲ್ ಬರೆದಿಟ್ಟಿದ್ದು, ಬುಧವಾರ ಅವರ ಅಂತ್ಯಕ್ರಿಯೆಗಿಮತ ಮೊದಲು ಅದನ್ನು ಬಹಿರಂಗಪಡಿಸಲಾಗುತ್ತದೆ ಎಂದು ತಿಳಿದು ಬಂದಿದೆ. (ಒಡೆಯರ್ ಅವರಿಗೆ ಚಿತ್ರ ನಮನ)
ಪ್ರಮೋದದೇವಿ ನಿರ್ಣಾಯಕ : ಶ್ರೀಕಂಠದತ್ತ ಒಡೆಯರ್ ಉತ್ತರಾಧಿಕಾರಿ ಬಗ್ಗೆ ವಿಲ್ ಬರೆದಿಟ್ಟಿದ್ದರೆ ಅದನ್ನು ಅಂತ್ಯ ಸಂಸ್ಕಾರದ ಮುನ್ನ ಬಹಿರಂಗಪಡಿಸಲಾಗುತ್ತದೆ. ಇಲ್ಲವಾದಲ್ಲಿ ಒಡೆಯರ್ ಪತ್ನಿ ಪ್ರಮೋದದೇವಿ ಉತ್ತಾಧಿಕಾರಿ ಆಯ್ಕೆಯ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.ಕೆಲವು ಗಂಟೆಗಳಲ್ಲಿ ಈ ಉತ್ತರಾಧಿಕಾರಿ ಯಾರು? ಎಂಬ ಕುತೂಹಲಗಳಿಗೆ ತೆರೆಬೀಳಲಿದೆ.












Click it and Unblock the Notifications