ಅಪಘಾತದಲ್ಲಿ ನಟ ದರ್ಶನ್ ಬಲಗೈ ಮೂಳೆ ಮುರಿತ: ಯಶಸ್ವಿ ಚಿಕಿತ್ಸೆ ಬಳಿಕ ಚೇತರಿಕೆ
ಮೈಸೂರು, ಸೆಪ್ಟೆಂಬರ್.24 : ಮೈಸೂರಿನ ಹಿನಕಲ್ ಬಳಿ ಇಂದು ಸೋಮವಾರ ನಡೆದ ಅಪಘಾತದಲ್ಲಿ ನಟ ದರ್ಶನ್ ಬಲಗೈನ ಎರಡು ಮೂಳೆ ಮುರಿತಗೊಂಡಿದೆ. ಈ ಹಿನ್ನೆಲೆಯಲ್ಲಿ ದರ್ಶನ್ ಅವರನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ.
ಐಸಿಯುನಲ್ಲೇ ಚಿಕಿತ್ಸೆ ಮುಂದುವರೆಸಿದ್ದು, ದರ್ಶನ್ ಪತ್ನಿ ವಿಜಯಲಕ್ಷ್ಮಿ, ತಾಯಿ ಮೀನಾ ತೂಗುದೀಪ, ನಟ ಸೃಜನ್ ಲೋಕೇಶ್ ಮತ್ತು ತರಂಗ ವಿಶ್ವ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಆಗಮಿಸಿ ದರ್ಶನ್ ಆರೋಗ್ಯ ವಿಚಾರಿಸಿದ್ದಾರೆ.
ಅಪಘಾತದ ಕುರಿತು ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲವೆಂದು ಹೇಳಲಾಗಿದೆ. ಅಪಘಾತದ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆಯೇ ದರ್ಶನ್ ಅಭಿಮಾನಿಗಳು ಆತಂಕಗೊಂಡಿದ್ದು, ಆಸ್ಪತ್ರೆ ಮುಂದೆ ಜಮಾಯಿಸಬಹುದೆಂಬ ಕಾರಣಕ್ಕೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ದರ್ಶನ್ ಸ್ಥಿತಿ ಹೇಗಿದೆ? ವಿನೋದ್ ಪ್ರಭಾಕರ್ ನೀಡಿದ ಮಾಹಿತಿ

ಮಾಹಿತಿ ಕಲೆ ಹಾಕಲು ಆಸ್ಪತ್ರೆಗೆ ಭೇಟಿ ನೀಡಿರುವ ಎನ್.ಆರ್. ಠಾಣೆ ಪೊಲೀಸರು ಇದೊಂದು ಸೆಲ್ಫ್ ಆಕ್ಸಿಡೆಂಡ್ ಆಗಿದ್ದು, ಯಾರಿಗೂ ತೊಂದರೆಯಾಗಿಲ್ಲ. ಹಾಗಾಗಿ ದೂರು ದಾಖಲಿಸಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications