ಮೈಸೂರಿನಲ್ಲಿದೆ ಭಾರತದ ಮೊದಲ ಮರಳು ಶಿಲ್ಪ ಮ್ಯೂಸಿಯಂ!
Recommended Video

Mysore Dasara 2017 : The country’s first Sand Sculpture Museum on the road to Chamundi Hills
ಮೈಸೂರು, ಸೆಪ್ಟೆಂಬರ್ 22: ಮೈಸೂರನ್ನು ಹಲವು ಬಾರಿ ಸುತ್ತಿದವರಿಗೂ ಅರಮನೆ ನಗರಿಯಲ್ಲಿ ಭಾರತದ ಮೊದಲ ಮರಳು ಶಿಲ್ಪ ಮ್ಯೂಸಿಯಂವೊಂದಿದೆ ಎಂಬುದು ಗೊತ್ತಿರಲಿಕ್ಕಿಲ್ಲ. ಮೈಸೂರಿನ ಪ್ರಸಿದ್ಧ ಚಾಮುಂಡಿ ಬೆಟ್ಟದ ಬಳಿಯಲ್ಲಿರುವ ಈ ಮ್ಯೂಸಿಯಂನಲ್ಲಿ ಮ್ಸಿಸೂರಿನ ಪರಂಪರೆಯನ್ನು ಸಾರುವ ಹಲವು ಮರಳು ಶಿಲ್ಪಗಳಿವೆ.
ಮ್ಯೂಸಿಯಂನೊಳಕ್ಕೆ ಕಾಲಿಡುತ್ತಿದ್ದಂತೆಯೇ ಸ್ವಾಗತಿಸುವ 15 ಅಡಿಯ ಗಣೇಶನ ಮೂರ್ತಿಯಿಂದ ಹಿಡಿದು, ಮೈಸೂರಿನ ರಾಜರು, ಚಾಮುಂಡೇಶ್ವರಿ ದೇವಿ, ಪ್ರಾಣಿಗಳು, ಟಾಮ್ ಅಂಡ್ ಜೆರ್ರಿಯ ಶಿಲ್ಪಗಳು ಗಮನ ಸೆಳೆಯುತ್ತವೆ.

ಚಾಮುಂಡಿ ಬೆಟ್ಟದ ಬಳಿಯ ಕೆ ಸಿ ಬಡಾವಣೆಯ ಸಪ್ತಮಾತೃಕಾ ಬಡಾವಣೆಯಲ್ಲಿರುವ ಈ ಮ್ಯೂಸಿಯಂ ಬೆಳಗ್ಗೆ 8:00 ಗಂಟೆಯಿಂದ ಸಂಜೆ 6:30 ರವರೆಗೆ ತೆರೆದಿರುತ್ತದೆ. ಪ್ರವೇಶ ದರ ವಯಸ್ಕರಿಗೆ 40 ರೂ., ಮಕ್ಕಳಿಗೆ 20 ರೂ.
ಮೈಸೂರು ದಸರಾಕ್ಕೆ ತೆರಳಿದ ಪ್ರವಾಸಿಗರು ಈ ಮರಳು ಶಿಲ್ಪ ಮ್ಯೂಸಿಯಂ ಅನ್ನೂ ತಪ್ಪದೇ ನೋಡಿಕೊಂಡು ಬನ್ನಿ.












Click it and Unblock the Notifications