ಮೀಟರ್ ಬಡ್ಡಿ ಅವ್ಯವಹಾರ : ಮೈಸೂರಲ್ಲಿ ಮಹಿಳೆಯರ ಬಂಧನ

ಮೈಸೂರು, ಸೆಪ್ಟೆಂಬರ್ 23 : ಪರವಾನಗಿ ಇಲ್ಲದೇ ನೀಡಿದ ಸಾಲಕ್ಕೆ ಮೀಟರ್‌ ಬಡ್ಡಿ ಪಡೆದುಕೊಂಡು ಲೇವಾದೇವಿ ಮಾಡುತ್ತಿದ್ದ ಇಬ್ಬರು ಮಹಿಳೆಯರನ್ನು ಮೈಸೂರು ನಗರ ಸಿ.ಸಿ.ಬಿ ಮತ್ತು ಕುವೆಂಪುನಗರ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಮಂಗಳವಾರ ಬಂಧಿಸಿದ್ದಾರೆ.

ರಾಜೀವ್ ನಗರದ ಭಾಗ್ಯಮ್ಮ (65) ಮತ್ತು ದಟ್ಟಗಳ್ಳಿಯ ಸುನಿತಾ (45) ಬಂಧಿತರು. ಅವರನ್ನು ದಸ್ತಗಿರಿ ಮಾಡಿ ಅವರ ವಶದಲ್ಲಿದ್ದ ಲೇವಾದೇವಿ ವ್ಯವಹಾರಕ್ಕೆ ಸಂಬಂಧಪಟ್ಟಂತೆ 2 ಖಾಲಿ ಚೆಕ್‌ಗಳು ಹಾಗೂ 1 ಆನ್‌ಡಿಮ್ಯಾಂಡ್ ಪ್ರೊನೋಟ್‌ನ್ನು ಅಮಾನತ್ತು ಪಡಿಸಿಕೊಂಡಿದ್ದಾರೆ.

Illegal meter baddi : Women arrested in Mysuru

ಈ ಬಗ್ಗೆ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮಹಿಳೆಯರು ತಾವು ನೀಡುತ್ತಿದ್ದ ಸಾಲಕ್ಕೆ ಪ್ರತಿ ತಿಂಗಳು 10% ರಿಂದ 15% ರವರೆಗೆ ಬಡ್ಡಿ ಪಡೆಯುತ್ತಿದ್ದರೆಂದು ವಿಚಾರಣೆಯಿಂದ ತಿಳಿದು ಬಂದಿದೆ.

ಈ ದಾಳಿ ಕಾರ್ಯವನ್ನು ಮೈಸೂರು ನಗರದ ಅಪರಾಧ ವಿಭಾಗದ ಡಿ.ಸಿ.ಪಿ. ಎನ್.ಡಿ.ಬಿರ್ಜೆರವರ ಮಾರ್ಗದರ್ಶನದಲ್ಲಿ ಸಿಸಿಬಿಯ ಎಸಿಪಿ. ಸಿ.ಗೋಪಾ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ಎಚ್.ಟಿ. ಸುನಿಲ್‌ಕುಮಾರ್, ಕುವೆಂಪುನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶೇಖರ ಜಿ. ಹಾಗೂ ಸಿಸಿಬಿಯ ಸಿಬ್ಬಂದಿಗಳಾದ ಪಿ.ಹಿರಣ್ಣಯ್ಯ, ಅಸ್ಗರ್‌ಖಾನ್, ಮಹದೇವಪ್ಪ, ಸಂತೋಷ್, ಪಾರ್ವತಿ ಹಾಗೂ ಚಾಲಕರಾದ ಶ್ರೀನಿವಾಸ್‌ ತಂಡದಿಂದ ನಡೆಸಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+