ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿಗೆ ಬೆಂಬಲ; ಶಾಸಕ ಮಹೇಶ್‌

ಮೈಸೂರು, ಮಾರ್ಚ್ 17: ಅಭಿವೃದ್ಧಿಯ ಏಕೈಕ ದೃಷ್ಟಿಯಿಂದ ತಾವು ಬಿಜೆಪಿಯನ್ನು ಬೆಂಬಲಿಸಿದ್ದಾಗಿ ಶಾಸಕ ಎನ್.ಮಹೇಶ್ ಅವರು ಹೇಳಿದ್ದಾರೆ.

Recommended Video

      Nalpad in Trouble Again! Vyalikaval police have FIR filed against MLA N. A Harris son Nalapad

      ಸಂಸದ ಶ್ರೀನಿವಾಸ್ ಪ್ರಸಾದ್ ಅವರನ್ನು ನಿನ್ನೆ ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮೊದಲು ಆಡಿದ್ದ ಮಾತಿಗೆ ಈಗಲೂ ಬದ್ಧನಾಗಿದ್ದೇನೆ. ನನ್ನ ಮತ್ತು ಸಂಸದರ ಭೇಟಿಯಲ್ಲಿ ಬಿಜೆಪಿ ಸೇರ್ಪಡೆ ಬಗ್ಗೆ ಚರ್ಚೆ ಮಾಡಿಲ್ಲ. ಕೊಳ್ಳೇಗಾಲ ಪುರಸಭೆಯಲ್ಲಿ ನಮ್ಮ ಬೆಂಬಲಿಗರು ಬಿಜೆಪಿ ಸದಸ್ಯರ ಜೊತೆ ಸೇರಿ ಅಧಿಕಾರ ಹಿಡಿಯಲು ಚರ್ಚೆ ಮಾಡಿದ್ದೇನೆ. ಅದನ್ನು ಬಿಟ್ಟು ಬೇರೆ ರಾಜಕೀಯ ಚರ್ಚೆ ಮಾಡಿಲ್ಲ. ಶ್ರೀನಿವಾಸ್ ಪ್ರಸಾದ್ ಕಡೆಯಿಂದ ನನಗೆ ಆ ರೀತಿಯ ಆಹ್ವಾನ ಬಂದಿಲ್ಲ" ಎಂದು ಹೇಳಿದರು.

      I Supported BJP With The View Of Development Said N Mahesh

      ಚಾಮರಾಜನಗರದ ಬಿಜೆಪಿ ಹಾಗೂ ಬಿಎಸ್ ಪಿ ಮುಖಂಡರ ಜೊತೆ ಆಗಮಿಸಿದ ಎನ್.ಮಹೇಶ್ ಅವರು ಮೈಸೂರಿನ ಶ್ರೀನಿವಾಸ್ ಪ್ರಸಾದ್ ನಿವಾಸದಲ್ಲಿ ಮಹತ್ವದ ಮಾತುಕತೆ ನಡೆಸಿದ್ದು, ಬಿಜೆಪಿ ಸೇರುವ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ ಎಂದು ದಟ್ಟ ವದಂತಿಗಳು ಹರಿದಾಡುತ್ತಿವೆ. ಮೊದಲು ದೋಸ್ತಿ ಸರ್ಕಾರಕ್ಕೆ ಬೆಂಬಲ ನೀಡಿ ಸಚಿವರಾಗಿದ್ದ ಎನ್.ಮಹೇಶ್ ಅವರು ನಂತರ ದೋಸ್ತಿ ಸರ್ಕಾರದಿಂದ ಹೊರಬಂದು ಬಿಎಸ್ ‌ಪಿಯಿಂದಲೂ ಉಚ್ಚಾಟನೆಗೊಂಡಿದ್ದರು. ಇದೀಗ ಎನ್.ಮಹೇಶ್ ಬಿಜೆಪಿ ಸೇರುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+