ಚಾಮುಂಡೇಶ್ವರಿಯಲ್ಲಿ ವಿಷ್ಣು ಸ್ಮಾರಕ ನಿರ್ಮಿಸುತ್ತಿರುವುದು ಗೊತ್ತಿರಲಿಲ್ಲ: ಜಿಟಿ ದೇವೇಗೌಡ

Recommended Video

      ಚಾಮುಂಡೇಶ್ವರಿಯಲ್ಲಿ ವಿಷ್ಣು ಸ್ಮಾರಕ ನಿರ್ಮಿಸುತ್ತಿರುವುದು ಗೊತ್ತಿರಲಿಲ್ಲ: ಜಿಟಿ ದೇವೇಗೌಡ | Oneindia Kannada

      ಮೈಸೂರು, ಡಿಸೆಂಬರ್ ೦2:ನನ್ನ ಕ್ಷೇತ್ರದಲ್ಲಿಯೇ ನಟ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಮಾಡುತ್ತಿದ್ದಾರೆ ಎಂಬ ವಿಚಾರ ನನಗೆ ಗೊತ್ತಿರಲಿಲ್ಲ. ಈ ಬಗ್ಗೆ ನಾನೇ ಹೋಗಿ ವಿಚಾರಿಸಿದಾಗ ವಿಷಯ ತಿಳಿಯಿತು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹೇಳಿದರು.

      ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಿಷ್ಣು ಅಭಿಮಾನಿಗಳು ವಿಷ್ಣು ಸ್ಮಾರಕ ಮೈಸೂರಿನಲ್ಲೇ ಆಗಬೇಕೆಂದು ಒತ್ತಾಯಿಸುತ್ತಿದ್ದಾರೆ. "ಸ್ಮಾರಕ ಆಗಬೇಕೆಂದು ಸರ್ಕಾರ ನೀಡಿರುವ ಜಾಗ ನಿಮ್ಮ ಕ್ಷೇತ್ರ ಚಾಮುಂಡೇಶ್ವರಿಯಲ್ಲೇ ಇದೆ. ಇದನ್ನು ನೀಡಲು ಹಿಂದು -ಮುಂದು ನೋಡುತ್ತಿದ್ದೀರಾ ಎಂಬ ಪ್ರಶ್ನೆಗೆ ಸಚಿವರು ಪ್ರತಿಕ್ರಿಯಿಸಿದ ಪರಿ ಇದು.

      ನಾನು ಗಮನಿಸಿದ ಹಾಗೆ ಇದುವರೆಗೂ ಯಾರೂ ಈ ಕುರಿತು ಮಾತನಾಡಿಲ್ಲ. ನನ್ನ ಕ್ಷೇತ್ರದಲ್ಲೇ ಸ್ಮಾರಕ ಮಾಡಲಿದ್ದಾರೆ ಎಂಬುದು ನನಗೆ ಗೊತ್ತಿಲ್ಲವಲ್ಲ. ಜಮೀನಿನವರು ಹೋಗಿ ಕೋರ್ಟ್​ನಲ್ಲಿ ಸ್ಟೇ ತಂದಿದ್ದಾರೆ ಎಂಬುದು ಗೊತ್ತಿದೆ. ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗಲೇ ಇದನ್ನು ಜಾರಿಗೆ ತರಬೇಕೆಂದು ತೀರ್ಮಾನಿಸಿದ್ದೆವು. ಆ ಸಂದರ್ಭದಲ್ಲಿ ಅವರು ಹೈಕೋರ್ಟ್​ನಿಂದ ಸ್ಟೇ ತಗೆದುಕೊಂಡು ಬಂದರು. ಅವರ ಜೊತೆ ಕುಳಿತು ಸಮಸ್ಯೆ ಬಗೆಹರಿಸಲು ತೀರ್ಮಾನಿಸಿದೆವು ಎಂದು ತಿಳಿಸಿದರು.

      I did not know that Vishnu memorial will built at Chamundeshwari:GTD

      ಇನ್ನು ಮೈಸೂರಿನ ಮೇಲೆ ಪ್ರೀತಿ, ವಿಶ್ವಾಸ ಇರುವುದರಿಂದ ಇಲ್ಲೇ ಸ್ಮಾರಕ ನಿರ್ಮಿಸಬೇಕೆಂದು ಸಿಎಂ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ. ಹೀಗಾಗಿ ನಾನು ಅದರ ಬಗ್ಗೆ ಯೋಚಿಸಿ ಮುಂದಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂಬ ಮಾಹಿತಿ ನೀಡಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+