ಪ್ರಿಯಕರನಿಗಾಗಿ ಪತಿ ಬಿಟ್ಟು ಬಂದ ನವವಿವಾಹಿತೆ!
ಮೈಸೂರು, ಜುಲೈ 01 : ಗೃಹಿಣಿಯೊಬ್ಬಳು ಪ್ರಿಯಕರನಿಗಾಗಿ ಪತಿಯನ್ನು ಬಿಟ್ಟಯ ಬಂದ ಘಟನೆ ಮೈಸೂರಿನಲ್ಲಿ ನಡೆದಿದೆ. ಬೆಂಗಳೂರಿನಲ್ಲಿ ಮಹಿಳೆ ಪತಿಯನ್ನು ಬಿಟ್ಟು ಪ್ರಿಯಕರನಿಗಾಗಿ ಮೈಸೂರಿಗೆ ಬಂದಿದ್ದಾಳೆ.
ಮೈಸೂರಿನ ರೈಲ್ವೆ ಕ್ವಾಟ್ರಸ್ ನಿವಾಸಿ ಸ್ವಾತಿ ಪತಿಯನ್ನು ಬೆಂಗಳೂರಿನಲ್ಲಿ ಬಿಟ್ಟು ಪ್ರಿಯಕರನಿಗಾಗಿ ಮೈಸೂರಿಗೆ ಬಂದಿದ್ದಾಳೆ. 9 ವರ್ಷಗಳಿಂದ ಸ್ವಾತಿ ಮತ್ತು ಅಶೋಕಪುರಂ ನಿವಾಸಿ ರಕ್ಷಿತ್ ಪ್ರೀತಿಸುತ್ತಿದ್ದರು.
ಸ್ವಾತಿ ಮತ್ತು ರಕ್ಷಿತ್ ಪ್ರೀತಿಸುತ್ತಿರುವ ವಿಚಾರ ಸ್ವಾತಿ ಮನೆಯವರಿಗೂ ತಿಳಿದಿತ್ತು. ಆದರೆ, ರಕ್ಷಿತ್ ಬೇರೆ ಜಾತಿಗೆ ಸೇರಿದ ಕಾರಣ ಬೆಂಗಳೂರಿನ ನಿವಾಸಿ ಪ್ರತಾಪ್ ಜೊತೆ ಏಪ್ರಿಲ್ 24ರಂದು ಸ್ವಾತಿ ವಿವಾಹವನ್ನು ಕುಟುಂಬಸ್ಥರು ಮಾಡಿದ್ದರು.

ಪ್ರತಾಪ್ ಜೊತೆ ವಿವಾಹವಾದರೂ ಸ್ವಾತಿ ರಕ್ಷಿತ್ ಜೊತೆ ಫೋನ್ ಸಂಪರ್ಕ ಹೊಂದಿದ್ದಳು. ಈಗ ಪತಿಯನ್ನು ಬಿಟ್ಟು ರಕ್ಷಿತ್‌ಗಾಗಿ ಮೈಸೂರಿಗೆ ಆಗಮಿಸಿದ್ದಾರೆ. ಸ್ವಾತಿ ಪತಿ ಮನೆ ಬಿಟ್ಟು ಹೋಗುವಾಗ 3 ಕೆಜಿ ಚಿನ್ನವನ್ನು ತೆಗೆದುಕೊಂಡು ಹೋಗಿದ್ದಾಳೆ ಎಂದು ಪ್ರತಾಪ್ ಮನೆಯವರು ಆರೋಪ ಮಾಡಿದ್ದಾರೆ.
ಸ್ವಾತಿ ಮತ್ತು ಆಕೆಯ ಕುಟುಂಬಸ್ಥರ ವಿರುದ್ಧ ಪ್ರತಾಪ್ ಮನೆಯವರು ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಚಿನ್ನ ಕದ್ದಿರುವ ಆರೋಪವನ್ನು ಸ್ವಾತಿ ನಿರಾಕರಿಸಿದ್ದಾರೆ.
ನಾವಿಬ್ಬರೂ ಒಂದಾಗಿ ಬಾಳಲು ಅವಕಾಶ ನೀಡಬೇಕು, ಇಲ್ಲವಾದಲ್ಲಿ ಇಬ್ಬರೂ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಸ್ವಾತಿ, ರಕ್ಷಿತ್ ಅಶೋಕರಪುರಂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ನಮಗೆ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.












Click it and Unblock the Notifications