ಪ್ರಾಮಾಣಿಕ ಹುಡುಗನನ್ನು ಲವ್ ಮಾಡಿ: ಯುವತಿಯರಿಗೆ ಜಿಟಿಡಿ ಸಲಹೆ
ಮೈಸೂರು, ಸೆಪ್ಟೆಂಬರ್. 17 : ಹುಚ್ಚು ಪ್ರೇಮಕ್ಕೆ ಬಿದ್ದು ಹೆಣ್ಣು ಮಕ್ಕಳು ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಜಿಟಿ ದೇವೇಗೌಡ ಬೇಸರ ವ್ಯಕ್ತಪಡಿಸಿದರು.
ನಗರದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಸೋಮವಾರ (ಸೆ.18)ನಡೆದ ಸಾಂಸ್ಕೃತಿಕ, ಕ್ರೀಡಾ ಹಾಗೂ ರಾಷ್ಟ್ರೀಯ ಸೇವಾ ಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಒಳ್ಳೆಯ ಹುಡುಗನನ್ನು ನೋಡಿ ಪ್ರೀತಿಸಿ. ನಿಷ್ಠಾವಂತ, ಪ್ರಾಮಾಣಿಕ ಹುಡುಗನನ್ನು ನೋಡಿ ಲವ್ ಮಾಡಬೇಕು ಎಂದು ಸಲಹೆ ಕೊಟ್ಟರು.
ಪ್ರಾಮಾಣಿಕ ಹುಡುಗರನ್ನು ಮದುವೆಯಾದಾಗ ನಿಮ್ಮ ಜೀವನ ಸುಂದರವಾಗಿರುತ್ತದೆ. ಗೊತ್ತು -ಗುರಿಯಿಲ್ಲದವರನ್ನು ಲವ್ ಮಾಡಿ ಜೀವನವನ್ನು ನಾಶಗೊಳಿಸಕೊಳ್ಳಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಹಾಗೆಯೇ ಜೀವನದಲ್ಲಿ ಸೋಲು ಗೆಲುವು ಇರಬೇಕು. ಏನೇ ಬಂದರೂ ಎದುರಿಸುವ ಶಕ್ತಿ ನಿಮಗೆ ಬರಬೇಕು. ವಿಶ್ವದಲ್ಲಿ ಹೆಚ್ಚು ಸಾಧನೆ ಮಾಡಿರೋರು ಮಹಿಳೆಯರು. ಸೋಲಿಗೆ ಹತಾಶೆಗೊಳ್ಳದೇ ಮುನ್ನುಗ್ಗಿ.
ನಾನು 9 ಬಾರಿ ಡಾ.ರಾಜ್ ಕುಮಾರ್ ಅಭಿನಯದ 'ಬಂಗಾರದ ಮನುಷ್ಯ' ಸಿನಿಮಾ ನೋಡಿದ್ದೇನೆ. ಆ ಸಿನಿಮಾ ನೋಡಿದ ನಂತರ ಪ್ರೇರಿತನಾಗಿ ಒಳ್ಳೆಯ ರೈತನಾಗಿದ್ದೆ. ನಾನು ಕೃಷಿಕ. ನಾನು ಎಲ್ಲಾ ಬೆಳೆಗಳನ್ನು ಬೆಳೆದಿದ್ದೇನೆ. ಬಂಗಾರದ ಮನುಷ್ಯ ಸಿನಿಮಾದಿಂದ ನಾನು ಕೆಲವೊಂದನ್ನು ಕಲಿತಿದ್ದೇನೆ.
ಸಿನಿಮಾ ನೋಡಿ ಪ್ರೇರಣೆಗೊಂಡು ವ್ಯವಸಾಯ ಮಾಡಿದ್ದೆ. ಜೀವನದಲ್ಲಿ ಯಾವುದಕ್ಕೂ ಹೆದರಬಾರದು ಎಂಬುದಕ್ಕೆ ಅದೇ ಸಾಕ್ಷಿ. ಧೃತಿಗೆಡದೆ ಮುಂದೆ ಸಾಗಿ ಎಂದರು.
ನನಗೆ ಉನ್ನತ ಶಿಕ್ಷಣ ಇಲಾಖೆ ಇಷ್ಟ ಇರಲಿಲ್ಲ. ಆದರೂ ಒಪ್ಪಿಕೊಂಡೆ ಎಂದು ಮತ್ತೆ ಪುನರುಚ್ಚರಿಸಿದ ಜಿಟಿಡಿ ನನಗೆ ಕಂದಾಯ ಇಲಾಖೆ ಕೊಡಿ ಎಂದು ಬೇಡಿಕೆ ಇಟ್ಟಿದ್ದೆ. ಶಿಕ್ಷಣ ಇಲಾಖೆ ನನಗೆ ಇಷ್ಟ ಇರಲಿಲ್ಲ ಆದರೂ ವಿದ್ಯಾರ್ಥಿಗಳ ಸೇವೆ ಮಾಡಲೆಂದು ತಾಯಿ ಚಾಮುಂಡೇಶ್ವರಿ ಆಶೀರ್ವಾದ ಮಾಡಿದ್ದಾಳೆ. ಹೀಗಾಗಿ ಈ ಇಲಾಖೆಯೇ ನನ್ನ ಪಾಲಿಗೆ ಬಂದಿದದೆ ಎಂದರು.












Click it and Unblock the Notifications