ಕಟ್ಟೆಮಳಲವಾಡಿಯಲ್ಲಿ ಪ್ರಿಯಕರ ಮೋಸ ಮಾಡಿದ್ದಕ್ಕೆ ನೇಣಿಗೆ ಶರಣಾದ ಪ್ರಿಯತಮೆ
ಮೈಸೂರು, ಫೆಬ್ರವರಿ 13: ಯುವತಿಯೋರ್ವಳು ತನ್ನ ಪ್ರಿಯಕರ ಮೋಸ ಮಾಡಿದನೆಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕು ಕಟ್ಟೆಮಳಲವಾಡಿ ಗ್ರಾಮದಲ್ಲಿ ನಡೆದಿದೆ.
ಅರ್ಪಿತಾ (19) ಮೃತ ದುರ್ದೈವಿ. ಆಕೆಯ ಪ್ರಿಯತಮನ ಹೆಸರು ಲೋಕೇಶ್ ಗೌಡ(26). ಇವರಿಬ್ಬರು ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಅರ್ಪಿತಾಳನ್ನು ಮದುವೆಯಾಗುವುದಾಗಿ ನಂಬಿಸಿದ್ದ ಲೋಕೇಶ್ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದನು. ಕೆಲವು ದಿನಗಳ ಹಿಂದೆ ಮನೆಯಲ್ಲಿ ನಮ್ಮ ಪ್ರೀತಿಗೆ ಒಪ್ಪುತ್ತಿಲ್ಲ ಎಂಬ ಕಾರಣ ನೀಡಿ ಯುವತಿಗೆ ಯುವಕ ಮೋಸಗೈದಿದ್ದಾನೆ.
ಇದರಿಂದ ವಿಚಲಿತಳಾದ ಅರ್ಪಿತಾ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದರೊಟ್ಟಿಗೆ ತನಗೆ ಮೋಸ ಮಾಡಿದವನಿಗೆ ಜೀವಾವಧಿ ಶಿಕ್ಷೆ ಕೊಡಿಸುವಂತೆ ಮನವಿ ಮಾಡಿಕೊಂಡು ಡೆತ್‍ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾಳೆ.

ಹಾಗೆಯೇ ನನ್ನ ಸಾವಿಗೆ ಲೋಕೇಶ್ ಗೌಡ ಹೊರತು ಬೇರಾರು ಕಾರಣ ಅಲ್ಲ. ಲೋಕೇಶ್‌ಗೆ ಜೀವಾವಧಿ ಶಿಕ್ಷೆ ಕೊಡಿಸುವಂತೆ ಡೆತ್ ನೋಟ್ ನಲ್ಲಿ ಅರ್ಪಿತಾ ಮನವಿ ಮಾಡಿಕೊಂಡಿದ್ದಾಳೆ. ಸದ್ಯ ಆರೋಪಿ ಪ್ರಿಯಕರ ಪರಾರಿಯಾಗಿದ್ದು, ಹುಣಸೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.












Click it and Unblock the Notifications