ರಾಮದಾಸ್ ಆರೋಗ್ಯ ವಿಚಾರಿಸಿದ ಮೈಸೂರು ಮಾಜಿ ಸಂಸದ
ಮೈಸೂರು, ಫೆಬ್ರವರಿ 11: ಕೃಷ್ಣರಾಜ ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ಗೆ ಹೃದಯಕ್ಕೆ ಸ್ಟಂಟ್ ಅಳವಡಿಕೆ ಹಿನ್ನೆಲೆಯಲ್ಲಿ ಮೈಸೂರಿನ ಅಪೋಲೊ ಆಸ್ಪತ್ರೆಗೆ ಮಾಜಿ ಸಂಸದ ವಿಜಯ್ ಶಂಕರ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
ಶಾಸಕ ರಾಮದಾಸ್ ಲಘು ಹೃದಯಾಘಾತದಿಂದ ಚಿಕಿತ್ಸೆ ಪಡೆಯುತ್ತಿದ್ದು, ಸದ್ಯ ರಾಮದಾಸ್ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ.
ನಗು ಮುಖದಲ್ಲೇ ನಮ್ಮ ಜೊತೆ ಮಾತನಾಡಿದರು, ನಾನೂ ಕೂಡಾ ಧೈರ್ಯ ತುಂಬಿ ಬಂದಿದ್ದೇನೆ ಎಂದು ಆರೋಗ್ಯ ವಿಚಾರಿಸಿದ ಬಳಿಕ ಮಾಜಿ ಸಂಸದ ವಿಜಯ್ ಶಂಕರ್ ಹೇಳಿದರು.

ಶಾಸಕ ರಾಮದಾಸ್ ಆರೋಗ್ಯ ವಿಚಾರಣೆಗಾಗಿ ವಿವಿಧ ಪಕ್ಷದ ನಾಯಕರು ಆಗಮಿಸುತ್ತಿದ್ದು, ರಾಮದಾಸ್ ಆರೋಗ್ಯ ವಿಚಾರಣೆಗೆ ಆಗಮಿಸಿದ ಸಿ.ಹೆಚ್.ವಿಜಯ್ ಶಂಕರ್ ಹಾಗೂ ಶಾಸಕ ನಾಗೇಂದ್ರ ಬಂದು ಆರೋಗ್ಯ ವಿಚಾರಿಸಿದ್ದಾರೆ.
ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಹೃದಯಾಘಾತವಾಗಿದೆ ಎಂದು ಕೇಳಿದ ಪ್ರಶ್ನೆಗೆ ಮಾರ್ಮಿಕವಾಗಿ ಉತ್ತರಿಸಿದ ಮಾಜಿ ಸಂಸದ ಸಿ.ಹೆಚ್.ವಿಜಯ್ ಶಂಕರ್, ಎರಡು ದಿನಗಳ ನಂತರ ಅವರನ್ನೇ ಕೇಳಿ, ರೋಗ ಯಾಕೆ ಬರುತ್ತೆ ಎಂಬುದನ್ನು ನಮಗೆ ಅದು ತಿಳಿಯೊಲ್ಲ ಎಂದರು.












Click it and Unblock the Notifications