ಬೀದಿಯಲ್ಲೇ ಬಾಲಕಿಯನ್ನು 'ಮದುವೆ'ಯಾಗಿ ಪೇರಿ ಕಿತ್ತ ಯುವಕ

ಮೈಸೂರು, ನವೆಂಬರ್ 30 : ಶಾಲೆಯಿಂದ ಮನೆಗೆ ಬರುತ್ತಿದ್ದ ಬಾಲಕಿಯನ್ನು ಅಡಗಟ್ಟಿದ ಯುವಕನೊಬ್ಬ ನಡು ರಸ್ತೆಯಲ್ಲೇ ಆಕೆಗೆ ಬಲವಂತವಾಗಿ ಅರಶಿಣ ಕೊಂಬು ಕಟ್ಟಿ, ಪರಾರಿಯಾದ ಘಟನೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಹೋಬಳಿಯಲ್ಲಿ ನಡೆದಿದೆ.

ಬಾಲಕಿ ಶಾಲೆ ಮುಗಿಸಿಕೊಂಡು ಸಂಜೆ ಮನೆಗೆ ಬರುತ್ತಿರುವ ವೇಳೆಯಲ್ಲಿ ಇಬ್ಬರು ಯುವಕರು ಆಕೆಯನ್ನು ರಸ್ತೆಯಲ್ಲಿ ತಡೆದು ನಿಲ್ಲಿಸಿದ್ದಾರೆ. ಒಬ್ಬ ಯುವಕ ಆಕೆಯನ್ನು ಹಿಡಿದುಕೊಂಡರೆ, ಮತ್ತೊಬ್ಬ ಯುವಕ ಬಲವಂತವಾಗಿ ಕುತ್ತಿಗೆಗೆ ಅರಿಶಿಣದ ಕೊನೆಯಿರುವ ದಾರವನ್ನು ಕಟ್ಟಿ, "ನಿನ್ನನ್ನು ಮದುವೆಯಾಗಿದ್ದೇನೆ. ಈ ವಿಚಾರವನ್ನು ಮನೆಗೆ ತಿಳಿಸಿದರೆ ಕೊಂದು ಹಾಕುತ್ತೇನೆ" ಎಂದು ಹೇಳಿದ್ದಾನೆ. ಆ ನಂತರ ಯುವಕರು ಪರಾರಿಯಾಗಿದ್ದಾರೆ.

ಈ ವಿಚಾರವನ್ನು ಮನೆಗೆ ಬಂದ ಬಾಲಕಿ ತಂದೆಗೆ ತಿಳಿಸಿದ್ದು, ಆಕೆಯ ತಂದೆ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಯುವಕರ ಪತ್ತೆಗೆ ಬಲೆ ಬೀಸಲಾಗಿದೆ.

Forced marriage with minor girl in the middle of the road

ಎರಡು ಲಾರಿಗಳ ಮಧ್ಯ ಅಪಘಾತ

ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ, ಚಾಲಕರಿಬ್ಬರಿಗೆ ಗಾಯಗಳಾದ ಘಟನೆ ನಡೆದಿದೆ.

Forced marriage with minor girl in the middle of the road

ನಂಜನಗೂಡು ತಾಲೂಕಿನ ಹಿರೀಕಾಟಿ ಬಳಿ ಈ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಒಂದು ಲಾರಿ ಜಖಂಗೊಂಡರೆ, ಮತ್ತೊಂದು ಲಾರಿ ಪಲ್ಟಿಯಾಗಿದೆ. ಲಾರಿಯಲ್ಲಿದ್ದ ಓರ್ವ ಚಾಲಕನ ಕಾಲು ಕತ್ತರಿಸಿದ್ದು, ಮತ್ತೊಬ್ವನಿಗೆ ಗಂಭೀರ ಗಾಯವಾಗಿದೆ.

ಸದ್ಯಕ್ಕೆ ಇಬ್ಬರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಲಾರಿಗಳನ್ನು ಬೇಗೂರು ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+