ಅರಮನೆ ಅಂಗಳಕ್ಕೆ ಹೆಜ್ಜೆ ಹಾಕಿದ ಗಜಪಡೆಗೆ ಸಾಂಪ್ರದಾಯಿಕ ಸ್ವಾಗತ
Recommended Video

Mysore Dasara 2018 : ಅರಣ್ಯ ಭವನದಿಂದ ಅರಮನೆ ಅಂಗಳಕ್ಕೆ ಬಂದಿಳಿದ ಗಜಪಡೆ | Oneindia Kannada
ಮೈಸೂರು, ಸೆಪ್ಟೆಂಬರ್.05: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನಲೆಯಲ್ಲಿ ವೀರನಹೊಸಹಳ್ಳಿಯಿಂದ ಸೆ.2 ರಂದು ಗಜಪಡೆ ಮೈಸೂರಿಗೆ ಆಗಮಿಸಿದ್ದು, ಆಶೋಕಪುರಂನ ಅರಣ್ಯ ಭವನದಲ್ಲಿ ಬೀಡು ಬಿಟ್ಟಿದ್ದವು.
ಇಂದು ಮಂಗಳವಾರ ಅರಣ್ಯ ಭವನದಿಂದ ಅರಮನೆ ಅಂಗಳಕ್ಕೆ ಗಜಪಡೆ ಹೆಜ್ಜೆ ಹಾಕಿದ್ದು, ಜಿಲ್ಲಾಡಳಿತ ಹಾಗೂ ಅರಮನೆ ಮಂಡಳಿಯಿಂದ ಗಜಪಡೆಗೆ ಸಾಂಪ್ರದಾಯಿಕ ಸ್ವಾಗತ ದೊರೆತಿದೆ.
ಅಂಬಾವಿಲಾಸ ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಆನೆಗಳಿಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಗಿದೆ.
ಅರ್ಜುನ, ಗೋಪಿ, ಧನಂಜಯ, ವಿಕ್ರಮ, ವರಲಕ್ಷ್ಮಿ ಹಾಗೂ ಚೈತ್ರ ಆನೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ನೇತೃತ್ವದಲ್ಲಿ ಗಜಪಡೆಗೆ ವಿಶೇಷ ಪೂಜೆ ಮಾಡಲಾಯಿತು.

ವೇದ ಘೋಷಗಳ ಮೂಲಕ ಗಜಪಡೆಗೆ ಸಾಂಪ್ರದಾಯಕ ಸ್ವಾಗತ ಕೋರಲಾಗಿದ್ದು, ಮೈಸೂರಿನ ಚಾಮುಂಡಿಬೆಟ್ಟದ ಪ್ರಧಾನ ಅರ್ಚಕರಾದ ಡಾ.ಶಶಿಶೇಖರ್ ದೀಕ್ಷಿತ್ ರಿಂದ ಸಾಂಪ್ರದಾಯಕ ಪೂಜೆ ನಡೆಯಿತು.
ಮೊದಕ ,ಕಬ್ಬು,ಬೆಲ್ಲ,ಭತ್ತ,ಎಳ್ಳು ತಿನ್ನಿಸುವ ಮೂಲಕ ಅರಮನೆಗೆ ಸ್ವಾಗತಿಸಲಾಯಿತು.












Click it and Unblock the Notifications