ಜೋಡಿ ಕೊಲೆ : ಜೆಡಿಎಸ್ ನಗರಸಭಾ ಸದಸ್ಯನಿಗೆ ಜೀವಾವಧಿ ಶಿಕ್ಷೆ
ಮೈಸೂರು, ಫೆಬ್ರವರಿ 27 : ಹುಣಸೂರಿನ ತೋಟದ ಮನೆಯೊಂದರಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ನಗರಸಭಾ ಸದಸ್ಯ ಅವ್ವಾ ಮಾದೇಶ ಮತ್ತು ಸಹೋದರ ಮಂಜುನಾಥ್ ಸೇರಿದಂತೆ 8 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಸುಮಾರು ಎಂಟು ವರ್ಷಗಳ ಕಾಲ ಮೈಸೂರು ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯಿತು. ಆರೋಪ ಸಾಬೀತಾದ ಹಿನ್ನಲೆಯಲ್ಲಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ವಿಜಯ್ ಕುಮಾರ್ ಅವರು ಶುಕ್ರವಾರ ಮಧ್ಯಾಹ್ನ ಶಿಕ್ಷೆಯನ್ನು ಪ್ರಕಟಿಸಿದರು. [ಮಣಿಪಾಲ್ ಗ್ಯಾಂಗ್ ರೇಪ್ ಕೇಸ್ : ಮೂವರಿಗೆ ಜೀವಾವಧಿ ಶಿಕ್ಷೆ]

ಹಾಲಿ ನಗರ ಪಾಲಿಕೆ ಸದಸ್ಯ : ಮೈಸೂರು ನಗರ ಪಾಲಿಕೆಯ 32ನೇ ವಾರ್ಡಿನ ಜೆಡಿಎಸ್‍ನ ಹಾಲಿ ಸದಸ್ಯ ಮಾದೇಶ ಅಲಿಯಾಸ್ ಅವ್ವ ಮಾದೇಶ ಹಾಗೂ ಸಹೋದರ ಮಂಜುನಾಥ್ ಸೇರಿದಂತೆ ಇತರ 6 ಮಂದಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. [ಆರುಷಿ ಹತ್ಯೆ: ತಲ್ವಾರ್ ದಂಪತಿಗೆ ಜೀವಾವಧಿ ಶಿಕ್ಷೆ]
ಪ್ರಕರಣದ ಸಂಬಂಧ ಎರಡು ಅವಧಿಯ ಕಠಿಣ ಶಿಕ್ಷೆ (10ವರ್ಷ) ವಿಧಿಸಲಾಗಿದೆ. ಇದರೊಂದಿಗೆ ಮೊದಲ ಆರೋಪಿಗೆ 3 ಲಕ್ಷ ರೂ. ದಂಡ ಹಾಗೂ ಉಳಿದ ಆರೋಪಿಗಳಿಗೆ ತಲಾ 1 ಲಕ್ಷ ದಂಡ ವಿಧಿಸಲಾಗಿದ್ದು, ದಂಡವನ್ನು ಹತ್ಯೆಯಾದ ಇಬ್ಬರ ಕುಟುಂಬಗಳಿಗೆ ಪರಿಹಾರವಾಗಿ ನೀಡುವಂತೆ ಆದೇಶ ನೀಡಲಾಗಿದೆ. [ಬಾಲಕಿಯ ಕೆಡಿಸಿದ ಅತ್ಯಾಚಾರಿಗೆ ಜೀವಾವಧಿ ಶಿಕ್ಷೆ]
ಪ್ರಕರಣವೇನು? : ಹುಣಸೂರಿನಲ್ಲಿ 2008ರಲ್ಲಿ ಜೋಡಿ ಕೊಲೆ ನಡೆದಿತ್ತು. ಈ ಪ್ರಕರಣದಲ್ಲಿ ಮಾದೇಶ ಅಲಿಯಾಸ್ ಅವ್ವಾ ಮಾದೇಶ ಸೇರಿದಂತೆ 7 ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಆ ನಂತರ ಅವ್ವಾ ಮಾದೇಶ ಸೇರಿದಂತೆ ಇತರರು ಜಾಮೀನು ಪಡೆದು ಹೊರಬಂದಿದ್ದರು.
ಆ ನಂತರ ನಡೆದ ಮೈಸೂರು ನಗರಪಾಲಿಕೆಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮಾದೇಶ ಅವರು ಗೆಲುವು ಸಾಧಿಸಿದ್ದರು. ಆದರೆ, ಕೊಲೆ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಈಗ ವಿಚಾರಣೆ ಪೂರ್ಣಗೊಂಡಿದ್ದು, ಶಿಕ್ಷೆ ಪ್ರಕಟವಾಗಿದೆ.











Click it and Unblock the Notifications