ಮೈಸೂರಿನಲ್ಲಿ ಡೆಂಗ್ಯೂಗೆ ಬಲಿಯಾದವರು 6 ತಿಂಗಳಲ್ಲಿ 112
ಮೈಸೂರು, ಜೂನ್ 12 : ನಗರದಲ್ಲಿ ದಿನೇ ದಿನೇ ವೈರಲ್ ಜ್ವರದ ಪ್ರಕರಣಗಳು ತಾಂಡವವಾಡುತ್ತಿದೆ. ಇದರ ಜತೆಗೆ, ಡೆಂಗ್ಯೂ ಪ್ರಕರಣಗಳೂ ಸಹ ಏರಿಕೆಯಾಗುತ್ತಿದ್ದು, ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಜ್ವರದಿಂದ ಬಳಲುವವರ ಸಂಖ್ಯೆ ಹಾಗೂ ದಾಖಲಾಗುವವರ ಸಂಖ್ಯೆ ಏರಿಕೆಯಾಗುತ್ತಿದ್ದು ಜನರಲ್ಲಿ ಆತಂಕ ಮನೆಮಾಡಿದೆ.
ಇನ್ನು ಕಳೆದ ಹತ್ತು ದಿನಗಳಲ್ಲಿ ಇಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಚೇರಿಯು 282 ಶಂಕಿತ ಡೆಂಗ್ಯೂ ಪ್ರಕರಣಗಳ ರಕ್ತದ ಮಾದಿಯನ್ನು ಪರೀಕ್ಷೆಗೆ ಒಳಪಡಿಸಿದೆ. ಇದರಲ್ಲಿ 33 ಪ್ರಕರಣಗಳು ಡೆಂಗ್ಯೂ ಎಂದು ದೃಢಪಟ್ಟಿದೆ. ಈ ಮೂಲಕ ವರ್ಷದಲ್ಲಿ ಅಂದರೆ 6 ತಿಂಗಳ ಅವಧಿಯಲ್ಲಿ ಕೇವಲ ಜಿಲ್ಲೆಯೊಂದರಲ್ಲೇ 112 ಪ್ರಕರಣಗಳು ದೃಢಪಟ್ಟಿದೆ.
ಮಾರಕ ಡೆಂಗ್ಯೂ ಮಾರಿಗೆ ಮೈಸೂರಿನಲ್ಲಿ ಮತ್ತೊಬ್ಬ ವಿದ್ಯಾರ್ಥಿನಿ ಸಾವು

ಕಾಲಮಾನಕ್ಕೆ ತಕ್ಕಂತೆ ವಾತಾವರಣ ಬದಲಾದಾಗ ಜ್ವರದ ಪ್ರಕರಣಗಳು ಹೆಚ್ಚಾಗುವುದು ಸರ್ವೆ ಸಾಮಾನ್ಯ. ಆದರೆ, ಈ ಬಾರಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಮಂದಿ ಜ್ವರದ ಸಮಸ್ಯೆಯಿಂದ ದಾಖಲಾಗುತ್ತಿದ್ದಾರೆ.
ಏಕೆ ಹೀಗೆ?
ಬೇಸಿಗೆ ಕಾಲದಿಂದ ಮಳೆಗಾಲಕ್ಕೆ, ಮಳೆಗಾಲದಿಂದ ಚಳಿಗಾಲಕ್ಕೆ ಹಾಗೂ ಚಳಿಗಾಲದಿಂದ ಬೇಸಿಗೆ ಕಾಲಕ್ಕೆ ಸ್ಥಿತ್ಯಂತರಗೊಳ್ಳುವ ಅವಧಿಯಲ್ಲಿ ಜ್ವರ ಕಾಣಿಸಿಕೊಳ್ಳುತ್ತದೆ. ಸದ್ಯ ಒಂದು ವಾರದ ಅವಧಿಯಲ್ಲಿ ವಾತಾವರಣದಲ್ಲಾದ ಬದಲಾವಣೆಗಳಿಂದ ಜ್ವರದ ವೈರಾಣುಗಳು ತೀವ್ರಗತಿಯಲ್ಲಿ ಬೆಳವಣಿಗೆಯಾಗತೊಡಗಿದೆ.
ವೈರಸ್ ಹರಡಲು ಪಶ್ಚಿಮದಿಂದ ಬೀಸುವ ಗಾಳಿ ಹಾಗೂ ಉಷ್ಣತೆಯ ಪ್ರಮಾಣ ಕಡಿಮೆರುವುದರಿಂದ ವೈರಸ್ ಗಳು ಒಬ್ಬರಿಂದ ಮತ್ತೊಬ್ಬರಿಗೆ ವೇಗವಾಗಿ ಪಸರಿಸುತ್ತದೆ. ಜತೆಗೆ ಮೈಸೂರಿನ ನಗರ ಹಾಗೂ ಗ್ರಾಮೀಣ ಪ್ರದೇಶಗಳನ್ನು ಹೊರತುಪಡಿಸಿ ಅಕ್ಕ-ಪಕ್ಕದ ಜಿಲ್ಲೆಗಳಾದ ಮಂಡ್ಯ, ಚಾಮರಾಜನಗರ, ಹಾಸನ ಹಾಗೂ ಕೊಡಗು ಜಿಲ್ಲೆಗಳಿಂದ ರೋಗಿಗಳು ಚಿಕಿತ್ಸೆಗೆ ಇಲ್ಲಿಗೆ ಬರುವುದೇ ಹೆಚ್ಚು. ಇದರಿಂದ ಇಲ್ಲಿ ಜ್ವರದ ಪ್ರಕರಣಗಳು ಹೆಚ್ಚಿದೆ ಎನ್ನುತ್ತಾರೆ ವೈದ್ಯರು.

ಫಾಗಿಂಗ್ ಗೆ ಸೊಳ್ಳೆ ಸಾಯುವುದೇ?
ಇನ್ನು ಡೆಂಗ್ಯೂ ಪ್ರಕರಣ ಹೆಚ್ಚಾದಂತೆ ಮುಂಜಾಗ್ರತಾ ಕ್ರಮವಾಗಿ ಫಾಗಿಂಗ್ ಮಾಡುವಂತೆ ಒತ್ತಾಯಗಳು ಸಹ ಕೇಳಿಬರುತ್ತಿದೆ. ಒತ್ತಾಯಕ್ಕೆ ಮಣಿದು ಜನಪ್ರತಿನಿಧಿಗಳು ಫಾಗಿಂಗ್ ಮಾಡಲು ಅಧಿಕಾರಿಗಳಿಗೆ ಒತ್ತಡ ಹೇರುತ್ತಿದ್ದಾರೆ. ಇನ್ನು ಫಾಗಿಂಗ್ ಆರೋಗ್ಯಕ್ಕೆ ಹಾನಿಕಾರವೇ ಸರಿ. ಫಾಗಿಂಗ್ ಮಾಡುವುದರಿಂದ ಅಸ್ತಮಾ ಸಮಸ್ಯೆ ಉಳ್ಳವರಿಗಂತೂ ಫಾಗಿಂಗ್ ಹೊಗೆ ತೀರಾ ಹಾನಿಕಾರಕ. ಕೆಮ್ಮು, ದಮ್ಮು, ಅಲರ್ಜಿ ಮೊದಲಾದ ಸಮಸ್ಯೆಗಳು ಹೆಚ್ಚಾಗುತ್ತದೆ.
ಇನ್ನು ಫಾಗಿಂಗ್ ನಿಂದ ಸೊಳ್ಳೆ ನಿರ್ಮೂಲನೆ ಸಾಧ್ಯವೇ ಇಲ್ಲ ಎನ್ನುತ್ತಾರೆ ಅಧಿಕಾರಿಗಳು. ಹಲವು ಚಾಣಾಕ್ಷ ಸೊಳ್ಳೆಗಳು ಫಾಗಿಂಗ್ ನಿಂದ ತಪ್ಪಿಸಿಕೊಳ್ಳಲು ಪಕ್ಕದ ಬಡಾವಣೆ ಹಾಗೂ ಬೀದಿಗಳಿಗೆ ತೆರಳುತ್ತದೆ. ಹೊಗೆಯಿಂದ ಸತ್ತು ಬಿದ್ದ ಸೊಳ್ಳೆಗಳ ರಾಶಿ ಸಿಗುವುದು ಎಲ್ಲಯಾದರೂ ನೋಡಿದ್ದೀರಾ ಎಂದು ನಕ್ಕು ಸುಮ್ಮನಾಗುತ್ತಾರೆ ಅಧಿಕಾರಿಗಳು.
ಅಧಿಕಾರಿಗಳಿಗೆ ಮಾಹಿತಿಯ ಕೊರತೆ
ನಿನ್ನೆಯಿನ್ನೂ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರೋಗ್ಯಾಧಿಕಾರಿಗಳು ಜಿಲ್ಲೆಯಲ್ಲಿಡೆಂಗ್ಯೂಗೆ ಯಾರು ಕೂಡ ಬಲಿಯೇ ಆಗಿಲ್ಲ ಎನ್ನುತ್ತಾರೆ. ಇದೊಂದು ಗುಣಮುಖವಾಗುವ ಖಾಯಿಲೆಯಾಗಿದ್ದು, ಇದರಿಂದ ಸಾವು ಹೇಗೆ ಸಾಧ್ಯ ಎನ್ನುತ್ತಾರೆ ಅವರು. ಹಾಗಾದಲ್ಲಿ ಅಧಿಕಾರಿಗಳೇ ಮಾಧ್ಯಮದೆದುರು ಸಮನ್ವಯತೆಯಿಂದ ದೃಷ್ಟಿಯಿಂದ ನಿಜ ಸಂಗತಿಯನ್ನು ಮುಚ್ಚಿಡುತ್ತಿದ್ದಾರೇನೋ? ಎಂಬ ನಿಗೂಢ ಪ್ರಶ್ನೆ ನಮ್ಮನ್ನು ಕಾಡುತ್ತಿದೆ.












Click it and Unblock the Notifications