ದೀಪಾವಳಿ; ಮೈಸೂರು-ವಿಜಯಪುರ ನಡುವೆ ವಿಶೇಷ ರೈಲು
ಮೈಸೂರು, ಅಕ್ಟೋಬರ್ 11 : ನೈಋತ್ಯ ರೈಲ್ವೆ ದೀಪಾವಳಿ ಪ್ರಯುಕ್ತ ಸುವಿಧಾ ವಿಶೇಷ ರೈಲನ್ನು ಘೋಷಣೆ ಮಾಡಿದೆ. ಮೈಸೂರು-ವಿಜಯಪುರ ನಡುವೆ ವಿಶೇಷ ರೈಲು ಸಂಚಾರ ನಡೆಸಲಿದ್ದು, ಜನರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಅಕ್ಟೋಬರ್ 25ರಂದು ಸುವಿಧಾ ವಿಶೇಷ ರೈಲು ಮೈಸೂರಿನಿಂದ-ವಿಜಯಪುರಕ್ಕೆ ತೆರಳಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ. ಮೈಸೂರಿನಿಂದ ಅಕ್ಟೋಬರ್ 25ರಂದು 4.45ಕ್ಕೆ ರೈಲು ಹೊರಡಲಿದೆ.
ಮೈಸೂರಿನಿಂದ ಹೊರಡುವ ರೈಲು ಮಂಡ್ಯ, ರಾಮನಗರ, ಬೆಂಗಳೂರು, ಯಶವಂತಪುರ, ತುಮಕೂರು, ಅರಸೀಕೆರೆ, ಚಿಕ್ಕಜಾಜೂರು, ಚಿತ್ರದುರ್ಗ, ರಾಯದುರ್ಗ, ಬಳ್ಳಾರಿ, ತೋರಣಗಲ್, ಹೊಸಪೇಟೆ, ಕೊಪ್ಪಳ, ಗದಗ, ಬಾದಾಮಿ, ಬಾಗಲಕೋಟೆ ಬಸವನಬಾಗೇವಾಡಿಯಲ್ಲಿ ನಿಲುಗಡೆಗೊಳ್ಳಲಿದೆ.

ಮೈಸೂರಿನಿಂದ ಹೊರಡುವ ವಿಶೇಷ ರೈಲು ಅಕ್ಟೋಬರ್ 26ರಂದು ಬೆಳಗ್ಗೆ 10.30ಕ್ಕೆ ವಿಜಯಪುರಕ್ಕೆ ತಲುಪಲಿದೆ ಎಂದು ಪ್ರಕಟಣೆ ಹೇಳಿದೆ.
ಬೆಂಗಳೂರು-ಕಾರವಾರ : ದೀಪಾವಳಿ ಅಂಗವಾಗಿ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಕಾರವಾರಕ್ಕ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ. ಅಕ್ಟೋಬರ್ 25 ಮತ್ತು 28ರಂದು ರೈಲು ಸಂಚಾರ ನಡೆಸಲಿದೆ.
ಯಶವಂತಪುರ, ಹಾಸನ, ಪುತ್ತೂರು, ಮಂಗಳೂರು, ಉಡುಪಿ, ಕುಂದಾಪುರದ ಮೂಲಕ ರೈಲು ಕಾರವಾರವನ್ನು ತಲುಪಲಿದೆ.












Click it and Unblock the Notifications